NEWSನಮ್ಮಜಿಲ್ಲೆಬೆಂಗಳೂರು

HRMS ಮೂಲಕ ಕಾಯಂಗೊಂಡಿರುವ ಪೌರಕಾರ್ಮಿಕರಿಗೆ ವೇತನ ಪಾವತಿಸಿ: ನವೀನ್ ಕುಮಾರ್ ರಾಜು ಆದೇಶ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬಿಬಿಎಂಪಿಯಲ್ಲಿ ಒಟ್ಟು 12,692 ಡಿ.ಪಿ.ಎಸ್ ಪೌರಕಾರ್ಮಿಕರುಗಳನ್ನು ಕ್ರಮಬದ್ಧಗೊಳಿಸಲಾಗಿದ್ದು, ಈಗಾಗಲೇ 1ನೇ ಮೇ 2025ರಂದು 3,628 ಮಂದಿ ಪೌರ ಕಾರ್ಮಿಕರಿಗೆ ಹಾಗೂ ಇಂದು 1,400 ಪೌರ ಕಾರ್ಮಿಕರಿಗೆ ನೇಮಕಾತಿ ಆದೇಶಗಳನ್ನು ನೀಡಲಾಗಿದೆ.

ಈ ಕಾಯಂ ಪೌರ ಕಾರ್ಮಿಕರಿಗೆ ಮೇ-2025 ರಿಂದ HRMS ನಲ್ಲಿ ವೇತನ ಡ್ರಾ ಮಾಡಬೇಕಿದೆ. HRMS ನಲ್ಲಿ ಯಾವುದೇ ಅಧಿಕಾರಿ/ ಸಿಬ್ಬಂದಿಗಳ ವೇತನ ಡ್ರಾ ಮಾಡಲು ಅಧಿಕಾರಿ/ ಸಿಬ್ಬಂದಿಗಳ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ಕುಟುಂಬದಲ್ಲಿ ಅವಲಂಬಿತರ ವಿವರಗಳನ್ನೊಳಗೊಂಡಂತೆ ಇತರೆ ವಿವರಗಳ ನೋಂದಣಿ ಕಡ್ಡಾಯವಾಗಿದೆ.

ಪ್ರಸ್ತುತ ಬಿಬಿಎಂಪಿಯಲ್ಲಿ ನೇಮಕಾತಿಯಾಗಿರುವ ಕಾಯಂ ಪೌರ ಕಾರ್ಮಿಕರಿಗೂ ಈ ನಿಯಮವು ಅನ್ವಯಿಸುತ್ತಿದ್ದು, ನೇಮಕಾತಿಗೊಂಡಿರುವ ಎಲ್ಲ ಪೌರ ಕಾರ್ಮಿಕರಿಂದ ಮೇಲೆ ತಿಳಿಸಿರುವ ದಾಖಲೆಗಳನ್ನು ಪಡೆದು HRMS ನಲ್ಲಿ ನೋಂದಣಿ ಕೈಗೊಂಡು ವೇತನ ಡ್ರಾ ಮಾಡಬೇಕಿದೆ. ಆದರೆ ಬಹುತೇಕ ಪೌರಕಾರ್ಮಿಕರು ಮೇಲೆ ತಿಳಿಸಿರುವ ದಾಖಲಾತಿಗಳಲ್ಲಿ ಪ್ರಮುಖವಾಗಿ ಪ್ಯಾನ್‌ಕಾರ್ಡ್ ಹೊಂದಿಲ್ಲದಿರುವುದು ಹಾಗೂ ಕುಟುಂಬದ ಅವಲಂಬಿತ ಸದಸ್ಯರ ವಿವರ ಹಾಗೂ ವಿದ್ಯಾರ್ಹತೆ ಬಗ್ಗೆ ಮಾಹಿತಿ ನೀಡಿಲ್ಲದಿರುವುದು ಕಂಡುಬಂದಿದ್ದು, ಈ ಮಾಹಿತಿಗಳ ಸಂಗ್ರಹಣೆ ಚಾಲ್ತಿಯಲ್ಲಿದೆ.

ಪ್ರಸ್ತುತ HRMS ನಲ್ಲಿ ಈ ಮಾಹಿತಿಗಳ ನೋಂದಣಿಯಿಲ್ಲದೇ ವೇತನ ಡ್ರಾ ಮಾಡಲು ಸಮಸ್ಯೆಯಾಗಿದೆ. ಆದರೆ ಈಗಾಗಲೇ ನೇಮಿಸಿರುವ ಆದೇಶಗಳನ್ವಯ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುವುದರಿಂದ ತಾತ್ಕಾಲಿಕವಾಗಿ ಪೌರ ಕಾರ್ಮಿಕರ ಇತರ ಎಲ್ಲ ದಾಖಲೆಗಳನ್ನು HRMSನಲ್ಲಿ ನೋಂದಾಯಿಸಿ, ಪ್ಯಾನ್ ಕಾರ್ಡ್, ಅವಲಂಬಿತ ಕುಟುಂಬದ ಸದಸ್ಯರ ವಿವರ ಹಾಗೂ ವಿದ್ಯಾರ್ಹತೆ ದಾಖಲೆಗಳನ್ನು HRMS ನೋಂದಣಿಯಿಂದ ವಿನಾಯಿತಿ ನೀಡಿ ಮೇಲಿನ ದಾಖಲೆಗಳನ್ನು ಎರಡು ತಿಂಗಳ ಅವಧಿಯೊಳಗೆ DDO ಗಳಿಗೆ ಸಲ್ಲಿಸುವ ಷರತ್ತು ವಿಧಿಸಿ ಮೇ-2025 ಮತ್ತು ಜೂನ್-2025ರ ಮಾಹೆಯ ವೇತನ ಡ್ರಾ ಮಾಡಬಹುದಾಗಿದ್ದು, ಅದರಂತೆ ಈ ಆದೇಶ ಹೊರಡಿಸಿದೆ.

ಮೇ-2025ರ ಮಾಹೆಯಲ್ಲಿ ಕಾಯಂಮಾತಿ ಗೊಂಡಿರುವ 12,692 ಪೌರಕಾರ್ಮಿಕರ ಮೇ-2025 ಹಾಗೂ ಜೂನ್-2025ರ ಮಾಹೆಯ ವೇತನವನ್ನು ಹಾಲಿ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ HRMS ನಲ್ಲಿ ವೇತನ ಪಾವತಿಸುತ್ತಿರುವ ಮಾದರಿಯಲ್ಲಿಯೇ ಸಂಬಂಧಪಟ್ಟ ಕಾರ್ಯಪಾಲಕ ಅಭಿಯಂತರರು, ಘನತ್ಯಾಜ್ಯ ವಿಲೇವಾರಿ ವಿಭಾಗರವರು ಕೂಡಲೇ ಪಾವತಿಸಬೇಕು ಎಂದು ಆದೇಶಿಸಿದ್ದಾರೆ.

ಈ ಸಂಬಂಧ ಹೊಸದಾಗಿ ನೇಮಕಾತಿಗೊಂಡಿರುವ ಕಾಯಂ ಪೌರ ಕಾರ್ಮಿಕರಿಗೆ ಪ್ಯಾನ್‌ಕಾರ್ಡ್, ಅವಲಂಬಿತ ಕುಟುಂಬದ ಸದಸ್ಯರ ವಿವರ ಹಾಗೂ ವಿದ್ಯಾರ್ಹತೆ ದಾಖಲೆಗಳಿಗೆ HRMS ನೋಂದಣಿಯಿಂದ ವಿನಾಯಿತಿ ನೀಡಿ, ಮೇಲಿನ ದಾಖಲೆಗಳನ್ನು ಎರಡು ತಿಂಗಳ ಅವಧಿಯೊಳಗೆ DDO ಗಳಿಗೆ ಸಲ್ಲಿಸಿ, HRMS ನೋಂದಣಿಗೆ ಒಳಪಡುವ ಷರತ್ತಿಗೊಳಪಟ್ಟು ಮೇ-2025 ಮತ್ತು ಜೂನ್-2025ರ ಮಾಹೆಯ ವೇತನ ಡ್ರಾ ಮಾಡಲು ಆಡಳಿತ ವಿಭಾಗದ ವಿಶೇಷ ಆಯುಕ್ತ ನವೀನ್ ಕುಮಾರ್ ರಾಜು ಆದೇಶಿಸಿದ್ದಾರೆ.

Megha
the authorMegha

Leave a Reply

error: Content is protected !!