ಬೆಂಗಳೂರು: ಕರ್ನಾಕಟ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಬಹು ವರ್ಷಗಳ ಬೇಡಿಕೆಗಳಲ್ಲಿ ಒಂದಾದ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆ ಅನುಷ್ಠಾನಕ್ಕೆ ಮುಹೂರ್ತ ನಿಗದಿಯಾಗಿದ್ದು, ಜ.6ರಂದು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಚಾಲನೆ ನೀಡಲಿದ್ದಾರೆ.
ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುವ ನೌಕರರು ಮೊದಲಿಗೆ ಹಣ ಪಾವತಿಸಿ ನಂತರ ಆ ಹಣವನ್ನು ನಿಗಮದಿಂದ ಮರುಪಾವತಿ, ಅದರಲ್ಲೂ ಶೇ.25ರಷ್ಟನ್ನು ಮಾತ್ರ ಮಾಡಿಸಿಕೊಳ್ಳುವ ಪದ್ಧತಿ ಇತ್ತು. ಜತೆಗೆ, ಈ ವ್ಯವಸ್ಥೆಯಿಂದ ನೌಕರರು ವೈದ್ಯಕೀಯ ತುರ್ತು ಬಂದಾಗ ಹಣಕ್ಕಾಗಿ ಪರದಾಡಬೇಕಾಗುತ್ತಿತ್ತು.
ಹೀಗಾಗಿ ನೌಕರರು ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆಗಾಗಿ ಹಲವು ವರ್ಷಗಳಿಂದ ನಿಗಮಗಳ ಮುಂದೆ ಬೇಡಿಕೆ ಇಡುತ್ತಿದ್ದರು. ಇದೀಗ ಮೊದಲಿಗೆ ನಿಗಮವು ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆ ಜಾರಿ ಮಾಡುತ್ತಿದ್ದು, ಅದಕ್ಕೆ ‘ಕೆಎಸ್ಸಾರ್ಟಿಸಿ ಆರೋಗ್ಯ’ ಎಂದು ಹೆಸರಿಡಲಾಗಿದೆ. ಇದಕ್ಕೆ ಜ.6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡುತ್ತಿದ್ದು, ಈ ವೇಳೆ ನೌಕರರಿಗೆ ಕೆಎಸ್ಸಾರ್ಟಿಸಿ ಆರೋಗ್ಯ ಕಾರ್ಡ್ ವಿತರಿಸಲಿದೆ.
ಆಸ್ಪತ್ರೆಗಳೊಂದಿಗೆ ಒಪ್ಪಂದ: ಕೆಎಸ್ಸಾರ್ಟಿಸಿ ಆರೋಗ್ಯ ಯೋಜನೆ ಅಡಿ ನೌಕರರಿಗೆ ಚಿಕಿತ್ಸೆ ನೀಡಲು ರಾಜಾದ್ಯಂತ 250 ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಸಾಮಾನ್ಯ ಆಸ್ಪತ್ರೆಗಳಿಂದ ಹಿಡಿದು ಮಲ್ಟಿ ಸ್ಪೆಷಾಲಿಟಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳೂ ಸೇರಿವೆ. ಆ ಆಸ್ಪತ್ರೆಗಳಲ್ಲಿ ನೌಕರರು ನಿಗಮ ನೀಡಿರುವ ಆರೋಗ್ಯ ಕಾರ್ಡ್ ನ್ನು ತೋರಿಸಿ ಚಿಕಿತ್ಸೆ ಪಡೆಯಬಹುದಾಗಿದೆ. ಯೋಜನೆ ಅಡಿ ನೌಕರರು, ಪತಿ ಅಥವಾ ಪತ್ನಿ, ಮಕ್ಕಳು ಹಾಗೂ ತಂದೆ-ತಾಯಿ ನಗದು ರಹಿತ ಚಿಕಿತ್ಸೆ ಪಡೆಯುವಂತೆ ವ್ಯವಸ್ಥೆ ಮಾಡಲಾಗುತ್ತಿದೆ.
ಈ ಯೋಜನೆಗಾಗಿ ನೌಕರರಿಂದ650 ರೂ. ಪಡೆಯಲಾಗುತ್ತಿದ್ದು, ಅದರ ಜತೆಗೆ ನಿಗಮವು 20 ಕೋಟಿ ರೂ. ಮೀಸಲಿಡುತ್ತಿದೆ. ಆ ಹಣವನ್ನು ಯೋಜನೆ ಜಾರಿಗಾಗಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸ್ಥಾಪಿಸಲಾಗುವ ಟ್ರಸ್ಟ್‌ಗೆ ನೀಡಲಾಗುವುದು. ಇದು ಯೋಜನೆಯ ಮೊದಲ ವರ್ಷಕ್ಕೆ ಮೀಸಲಿಡುವ ಹಣವಾಗಿದ್ದು, ಮುಂದಿನ ಪ್ರತಿ ವರ್ಷ ಕೆಎಸ್ಸಾರ್ಟಿಸಿಯು ಶೇ.5ರಷ್ಟು ಮೊತ್ತವನ್ನು ಹೆಚ್ಚಿಸಿದರೆ, ನೌಕರರ ವಂತಿಗೆ 50 ರೂ. ಹೆಚ್ಚಳವಾಗಲಿದೆ.
ಆಸ್ಪತ್ರೆಗಳ ಬಿಲ್‌ಗಳ ಆಡಿಟ್: ಈ ಯೋಜನೆ ಅಡಿ ಒಪ್ಪಂದ ಮಾಡಿಕೊಂಡಿರುವ ಆಸ್ಪತ್ರೆಗಳು ನೌಕರರು ಅಥವಾ ಅವರ ಕುಟುಂಬದವರು ಪಡೆದ ಚಿಕಿತ್ಸೆಯ ಬಿಲ್‌ಗಳನ್ನು ನಿಗಮಕ್ಕೆ ಕಳುಹಿಸಬೇಕಿದೆ. ಆ ಬಿಲ್‌ಗಳು ಸಮರ್ಪಕವಾಗಿವೆಯೇ ಅಥವಾ ಸರ್ಕಾರ ನಿಗದಿ ಮಾಡಿರುವ ಮೊತ್ತದಷ್ಟಿದೆಯೇ ಎಂಬುದನ್ನು ಪರಿಶೀಲಿಸಲು ಕೆಎಸ್ಸಾರ್ಟಿಸಿಯು ಮೆಡ್ ಅಸಿಸ್ಟ್ ಎಂಬ ಖಾಸಗಿ ಸಂಸ್ಥೆಯನ್ನು ನೇಮಿಸಿದೆ. ಆ ಸಂಸ್ಥೆಯು ಬಿಲ್‌ಗಳನ್ನು ಆಡಿಟ್ ಮಾಡಿ ಕೆಎಸ್ಸಾರ್ಟಿಸಿಗೆ ಸಲ್ಲಿಸಲಿದೆ. ಅದನ್ನಾಧರಿಸಿ ನಿಗಮವು ಆಸ್ಪತ್ರೆಗೆ ಆರ್‌ಟಿಜಿಎಸ್ ಮೂಲಕ ಚಿಕಿತ್ಸಾ ವೆಚ್ಚ ಪಾವತಿಸಲಿದೆ. ಇದರಿಂದಾಗಿ ನೌಕರರು ಆಸ್ಪತ್ರೆ ಬಿಲ್‌ಗಳನ್ನು ನಿಗಮಕ್ಕೆ ಸಲಿಸುವ ಗೊಂದಲವೂ ಇಲ್ಲ.
ಸಾರಿಗೆ ನಿಗಮಗಳ ನೌಕರರ ಹಲವು ದಿನಗಳ ಬೇಡಿಕೆಯಂತೆ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆ ಜಾರಿಗೊಳಿಸಲಾಗುತ್ತಿದೆ. ಇದರಿಂದ ನೌಕರರು ಮತ್ತು ಕುಟುಂಬದವರು ವೈದ್ಯಕೀಯ ತುರ್ತು ಎದುರಾದಾಗ ಹಣವಿಲ್ಲದಿದ್ದರೂ, ಚಿಕಿತ್ಸೆ ಪಡೆಯಬಹುದಾಗಿದೆ. ಯೋಜನೆಗಾಗಿ ರಾಜ್ಯಾದ್ಯಂತ 250 ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.
l ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ
Related
You Might Also Like
KSRTC 4 ನಿಗಮಗಳ ಬಸ್ ಚೀಟಿ ದರ ಪರಿಷ್ಕರಣೆಯಿಂದ ತಲೆದೋರಿದ ಚಿಲ್ಲರೆ ಸಮಸ್ಯೆ-ನಿರ್ವಾಹಕರು ಪ್ರಯಾಣಿಕರ ನಡುವೆ ಫೈಟ್
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಸ್ ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಿಸಿ ಇದೇ ಜ.5ರಿಂದ ಜಾರಿಗೆ ಬಂದಿದೆ. ಆದರೆ ಈ ಪರಿಷ್ಕೃತ ದರ...
KSRTC: ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ನೌಕರರ ಹಲವಾರು ವರ್ಷಗಳ ಕನಸು ಇಂದು ಅಧಿಕೃತವಾಗಿ ನನಸಾಗಿದ್ದು, ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆ (ಆರೋಗ್ಯ...
NWKRTC: ನಿರ್ವಾಹಕ ಆತ್ಮಹತ್ಯೆಗೆ ಯತ್ನ- ಅಮಾನತು ಮಾಡುವ ಉದ್ದೇಶದಿಂದಲೇ ಮೆಮೋ ಕೊಟ್ಟ ಆರೋಪ
ಹುಬ್ಬಳ್ಳಿ: ಉದ್ದೇಶ ಪೂರ್ವಕವಾಗಿ ವಾಹನ ತಪಾಸಣೆ ನಡೆಸಿ ನನ್ನನ್ನು ಅಮಾನತು ಮಾಡುವ ಸಂಚು ರೂಪಿಸಲಾಗಿದೆ ಎಂದು ಮನನೊಂದ ನಿರ್ವಾಹಕರೊಬ್ಬರು ಡ್ಯೂಟಿ ಮೇಲೆ ಇದ್ದಾಗಲೇ ವಿಸ ಸೇವಿಸಿ ಆತ್ಮಹತ್ಯೆಗೆ...
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನೈರ್ಮಲ್ಯದ ಕೊರತೆ: ಕಸ ಮುಕ್ತ ಅಭಿಯಾನ
ಬೆಂಗಳೂರು: ದಾಸರಹಳ್ಳಿಯ ವಿಧಾನಸಭಾ ಕ್ಷೇತ್ರದಲ್ಲಿ ನೈರ್ಮಲ್ಯದ ಕೊರತೆ ಎದ್ದು ಕಾಣುತ್ತಿದ್ದು, ಡೆಂಗ್ಯೂ, ಉಸಿರಾಟ ಸೇರಿದಂತೆ ಸಾಂಕ್ರಾಮಿಕ ರೋಗಗಳ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪ್ರಕ್ರಿಯಾ ಆಸ್ಪತ್ರೆ ಮತ್ತು ಅದ್ವಿಕಾ...
ಕನ್ನಡ ನುಡಿ ಪ್ರತಿಯೊಬ್ಬ ಕನ್ನಡಿಗನ ಉಸಿರಾಗಬೇಕು: ಅಂದಾನೆಪ್ಪ ವಿಭೂತಿ
ಗದಗ: ವಿಶ್ವದೆಲ್ಲೆಡೆ ಕರ್ನಾಟಕ ಹೆಸರಾಗಿದೆ, ಜತೆಗೆ ಕನ್ನಡ ನುಡಿ ಪ್ರತಿಯೊಬ್ಬ ಕನ್ನಡಿಗನ ಉಸಿರಾಗಬೇಕು, ಕನ್ನಡವನ್ನು ಪ್ರೀತಿಸಬೇಕು. ಯಾಕೆಂದರೆ ಕನ್ನಡ ನಮ್ಮ ನಾಡಿ ಮಿಡಿತ, ಹೃದಯದ ಬಡಿತ, ಮಾತೃ...
ಸರ್ವೇ ನಂ-97 ಪುಸ್ತಕ ಮನುಷ್ಯನ ಬದುಕಿನ ಸಂಕಟಗಳಿಗೆ ಕನ್ನಡಿ ಇದ್ದಂತೆ: ರಘುನಾಥ
ಬೆಂಗಳೂರು: ಅನಿಲ್ ಗುನ್ನಾಪೂರ ಅವರು ಬರೆದ 'ಸರ್ವೇ ನಂಬರ್-97' ಎಂಬ ಕಥಾಸಂಕಲನವನ್ನು ಹೊಂಗಿರಣ ಪ್ರಕಾಶನ, ಬುಕ್ ಬ್ರಹ್ಮ ಹಾಗೂ ನ್ಯಾಯ ಸ್ಪಂದನ ಬೆಂಗಳೂರು, ಓದು ಗೆಳೆಯರ ಬಳಗ,...
ಜ್ವರ ಬಂದಾಗ ಎಳನೀರು ಕುಡಿಯುವುದು ಒಳ್ಳೆಯದೇ..ಏಕೆಂದರೆ?
ಆರೋಗ್ಯ ಮಾಹಿತಿ: ಜ್ವರದ ಸಮಯದಲ್ಲಿ ಹೆಚ್ಚು ಬೆವರುವುದರಿಂದ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತದೆ ಈ ವೇಳೆ ಎಳನೀರು ಕುಡಿಯುವುದರಿಂದ ನೈಸರ್ಗಿಕವಾಗಿ ದೇಹಕ್ಕೆ ನೀರನ್ನು ಒದಗಿಸಿ, ನಿರ್ಜಲೀಕರಣವನ್ನು ತಡೆಯುತ್ತದೆ....
ಬಿಜೆಪಿ ಸರ್ಕಾರದಲ್ಲಿ ನಿರಂತರವಾಗಿ ವರ್ಷಕ್ಕೆ ಎರಡೆರಡು ಬಾರಿ ಬಸ್ ಟಿಕೆಟ್ ದರ ಹೆಚ್ಚಳ: ಪಟ್ಟಿ ರಿಲೀಸ್ ಮಾಡಿದ ಸಾರಿಗೆ ಸಚಿವ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ 4 ನಿಗಮಗಳ ಬಸ್ ಪ್ರಯಾಣ ದರದಲ್ಲಿ ಶೇ.15ರಷ್ಟು ಏರಿಕೆ ಮಾಡಿರುವುದನ್ನು ಮೆಜೆಸ್ಟಿಕ್ನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಖಂಡಿಸಿ ಸರ್ಕಾರದ ವಿರುದ್ಧ...
KSRTC: ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ಮರೆತಿದ್ದ ಬಿಜೆಪಿಯವರು ಈಗ ಬಸ್ ದರ ಹೆಚ್ಚಳ ಖಂಡಿಸುತ್ತಾರೆ- ರಾಮಲಿಂಗಾರೆಡ್ಡಿ
ಬೆಂಗಳೂರು: ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಜನರನ್ನು ಹಾಗೂ ಅಭಿವೃದ್ಧಿಯನ್ನು ಮರೆತಿದ್ದರು. ಈಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಸ್ ದರ ಹೆಚ್ಚಳ ಖಂಡಿಸಿ, ಬಿಜೆಪಿಯವರು ಪ್ರತಿಭಟನೆ...
APSRTCಯಲ್ಲೂ ಶಕ್ತಿ ಯೋಜನೆ ಶೀಘ್ರ ಜಾರಿ: ಬೆಂಗಳೂರಿಗೆ ಭೇಟಿ ನೀಡಿದ ಸಾರಿಗೆ ಸಚಿವ ಮಂಡಿಪಲ್ಲಿ ರಾಮಪ್ರಸಾದ್ ರೆಡ್ಡಿ ನಿಯೋಗ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲೂ ‘ಶಕ್ತಿ’ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಕೈಗೊಂಡಿರುವ ಕ್ರಮಗಳ ಕುರಿತು ತಿಳಿದುಕೊಳ್ಳಲು ಆಂಧ್ರಪ್ರದೇಶ ಸರ್ಕಾರದ ಸಚಿವರು ಹಾಗೂ ಅಧಿಕಾರಿಗಳು...
ಜ.19ರಂದು ರೈತರ ಮಕ್ಕಳಿಗಾಗಿ ಉದ್ಯೋಗ ಮೇಳ ಆಯೋಜನೆ- 50 ಕಂಪನಿಗಳು ಭಾಗಿ
ಪಿರಿಯಾಪಟ್ಟಣ್ಣ: ರೈತರ ಮಕ್ಕಳಿಗಾಗಿ ಜನವರಿ 19ರ ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರಿಗೆ ಉದ್ಯೋಗಮೇಳ ಆಯೋಜಿಸಲಾಗಿದೆ ಎಂದು ಒಕ್ಕಲಿಗ ಯುವ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ನಂಜೇಗೌಡ...