ಹುಬ್ಬಳ್ಳಿ: ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸದಿರುವುದು ದುರದೃಷ್ಟಕರ. ಅದು ಹೋಗಲಿ 7ನೇ ವೇತನ ಆಯೋಗದಂತೆ ಸರಿ ಸಮಾನ ವೇತನ ಕೊಡಬೇಕು ಎಂದು ಸಾರಿಗೆ ಸಚಿವರೊಂದಿಗೆ ನಾವು ಕೂಡ ಸಿಎಂ ಭೇಟಿ ಮಾಡಿ ಚರ್ಚಿಸುತ್ತೇವೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಭರಮಗೌಡ ಕಾಗೆ ತಿಳಿಸಿದರು.
ಇತ್ತೀಚೆಗೆ ನಗರದಲ್ಲಿ ನಡೆದ ಕಾಠ್ಯಕ್ರಮದಲ್ಲಿ ಮಾತನಾಡಿದ ಅವರು, ಸಾರಿಗೆ ಸಚಿವರು, ನಾವೇ ನಮ್ಮ ಸಿಬ್ಬಂದಿ ಹಿತ ಕಾಪಾಡುವ ಕೆಲಸ ಮಾಡ ಬೇಕು. ನೌಕರರಿಗೆ ಆರ್ಥಿಕ ಹೊರೆಯಾಗದಂತೆ ನ್ಯಾಯಯುತ ಸೌಲಭ್ಯಗಳನ್ನು ಕೊಡದಿದ್ದರೆ ಬದುಕಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಾರಿಗೆ ಸಂಸ್ಥೆ ನೌಕರರು ಪರಿಶ್ರಮದಿಂದ ಕೆಲಸ ಮಾಡುತ್ತಾರೆ. ಅವರ ಶ್ರಮಕ್ಕೆ ತಕ್ಕ ವೇತನ ದೊರೆಯುತ್ತಿಲ್ಲ. ನಾನು ಹಾಗೂ ಸಾರಿಗೆ ಸಚಿವರು ಸೇರಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಸಮಸ್ಯೆಗಳಿಗೆ ಪರಿಹಾರ ಕೊಡಿಸುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಇನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಜ.6ರಿಂದ ಜಾರಿಗೆ ಬಂದಿರುವ ನಗದು ರಹಿತ ವೈದ್ಯಕೀಯ ಸೌಲಭ್ಯಗಳನ್ನು ನಮ್ಮಲ್ಲೂ ಶೀಘ್ರದಲ್ಲೇ ಕಲ್ಪಿಸಲಾಗುವುದು ಈ ನಿಟ್ಟಿನಲ್ಲಿ ನಾವು ಕೂಡ ಯೋಜನೆ ಬಗ್ಗೆ ಚರ್ಚಿಸುತ್ತಿದ್ದೇವೆ ಎಂದರು.
ಇನ್ನು ನೌಕರರು ಎಸಗುವ ಸಣ್ಣಪುಟ್ಟ ತಪ್ಪಿಗೆ ದೊಡ್ಡ ಶಿಕ್ಷೆ ಆಗುತ್ತಿದ್ದು, ವಾಸ್ತವ ಅರಿತು ಕ್ರಮ ಕೈಗೊಳ್ಳುವಂತಾಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜತೆಗೆ ನೌಕರರು ಕೂಡ ಯಾವುದೆ ತಪ್ಪಾಗದ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದು ಹೇಳಿದರು.
Related
You Might Also Like
KSRTC: ಓಂ ಶಕ್ತಿಗೆ ಹೋಗಿ ಬರುತ್ತಿದ್ದ ಬಸ್ -ಲಾರಿ ನಡುವೆ ಭೀಕರ ಅಪಘಾತ- ನಾಲ್ವರು ಸಾವು, ಬಸ್ ಚಾಲಕನ ಸ್ಥಿತಿ ಚಿಂತಾಜನಕ
ರಾಣಿಪೇಟೆ: ಓಂ ಶಕ್ತಿಗೆ ಹೋಗಿ ಬರುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಹಾಗೂ ಲಾರಿ ನಡುವೆ ಸಂಭವಿಸಿದ ಅಪಘಾದಲ್ಲಿ ಲಾರಿ ಚಾಲಕ ಸೇರಿ ಲಾರಿಯಲ್ಲಿದ್ದ...
ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ನಗದು ರಹಿತ ಚಿಕಿತ್ಸೆ: ಕೇಂದ್ರ ರಸ್ತೆ ಸಾರಿಗೆ -ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಘೋಷಣೆ
ನ್ಯೂಡೆಲ್ಲಿ: ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಇನ್ನು ಮುಂದೆ ನಗದು ರಹಿತ ಚಿಕಿತ್ಸೆ ನೀಡಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ....
NWKRTC- ನಿರ್ವಾಹಕ ಚೀರ್ಚಿನಕಲ್ ಆತ್ಮಹತ್ಯೆ ಯತ್ನ- ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ: ಎಂಡಿಗೆ ಸಾರಿಗೆ ನೌಕರರ ಸೇನೆ ಮನವಿ
ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನವಲಗುಂದ ಘಟಕದ ನಿರ್ವಾಹಕ ಎಸ್.ಎನ್. ಚೀರ್ಚಿನಕಲ್ ಅವರು ಕರ್ತವ್ಯದ ಮೇಲೆ ಆತ್ಮಹತ್ಯೆ ಮಾಡಿಕೊಳ್ಳುವಂತ ಪರಿಸ್ಥಿತಿಗೆ ತಂದಿರುವ ಅಧಿಕಾರಿಗಳ ವಿರುದ್ಧ...
ಸಾರಿಗೆ ನೌಕರರಿಗೆ ಕೊಟ್ಟ ಚುನಾವಣೆ ಪ್ರಣಾಳಿಕೆಯ ಭರವಸೆ ಈಡೇರಿಸುವತ್ತಾ ಕಾಂಗ್ರೆಸ್ ಸರ್ಕಾರ…!?
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು ಮತ್ತು ನೌಕರರ ವೇತನ ಪರಿಷ್ಕರಣೆ 2024 ಮುನ್ನೆಲೆಗೆ ಬಂದಿದ್ದು ಸರಿ ಸಮಾನ ವೇತನ ನಿರ್ಧಾರ ತೆಗೆದುಕೊಳ್ಳುವ...
KSRTC 4 ನಿಗಮಗಳ ಬಸ್ ಚೀಟಿ ದರ ಪರಿಷ್ಕರಣೆಯಿಂದ ತಲೆದೋರಿದ ಚಿಲ್ಲರೆ ಸಮಸ್ಯೆ-ನಿರ್ವಾಹಕರು ಪ್ರಯಾಣಿಕರ ನಡುವೆ ಫೈಟ್
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಸ್ ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಿಸಿ ಇದೇ ಜ.5ರಿಂದ ಜಾರಿಗೆ ಬಂದಿದೆ. ಆದರೆ ಈ ಪರಿಷ್ಕೃತ ದರ...
KSRTC: ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ನೌಕರರ ಹಲವಾರು ವರ್ಷಗಳ ಕನಸು ಇಂದು ಅಧಿಕೃತವಾಗಿ ನನಸಾಗಿದ್ದು, ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆ (ಆರೋಗ್ಯ...
NWKRTC: ನಿರ್ವಾಹಕ ಆತ್ಮಹತ್ಯೆಗೆ ಯತ್ನ- ಅಮಾನತು ಮಾಡುವ ಉದ್ದೇಶದಿಂದಲೇ ಮೆಮೋ ಕೊಟ್ಟ ಆರೋಪ
ಹುಬ್ಬಳ್ಳಿ: ಉದ್ದೇಶ ಪೂರ್ವಕವಾಗಿ ವಾಹನ ತಪಾಸಣೆ ನಡೆಸಿ ನನ್ನನ್ನು ಅಮಾನತು ಮಾಡುವ ಸಂಚು ರೂಪಿಸಲಾಗಿದೆ ಎಂದು ಮನನೊಂದ ನಿರ್ವಾಹಕರೊಬ್ಬರು ಡ್ಯೂಟಿ ಮೇಲೆ ಇದ್ದಾಗಲೇ ವಿಸ ಸೇವಿಸಿ ಆತ್ಮಹತ್ಯೆಗೆ...
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನೈರ್ಮಲ್ಯದ ಕೊರತೆ: ಕಸ ಮುಕ್ತ ಅಭಿಯಾನ
ಬೆಂಗಳೂರು: ದಾಸರಹಳ್ಳಿಯ ವಿಧಾನಸಭಾ ಕ್ಷೇತ್ರದಲ್ಲಿ ನೈರ್ಮಲ್ಯದ ಕೊರತೆ ಎದ್ದು ಕಾಣುತ್ತಿದ್ದು, ಡೆಂಗ್ಯೂ, ಉಸಿರಾಟ ಸೇರಿದಂತೆ ಸಾಂಕ್ರಾಮಿಕ ರೋಗಗಳ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪ್ರಕ್ರಿಯಾ ಆಸ್ಪತ್ರೆ ಮತ್ತು ಅದ್ವಿಕಾ...
ಕನ್ನಡ ನುಡಿ ಪ್ರತಿಯೊಬ್ಬ ಕನ್ನಡಿಗನ ಉಸಿರಾಗಬೇಕು: ಅಂದಾನೆಪ್ಪ ವಿಭೂತಿ
ಗದಗ: ವಿಶ್ವದೆಲ್ಲೆಡೆ ಕರ್ನಾಟಕ ಹೆಸರಾಗಿದೆ, ಜತೆಗೆ ಕನ್ನಡ ನುಡಿ ಪ್ರತಿಯೊಬ್ಬ ಕನ್ನಡಿಗನ ಉಸಿರಾಗಬೇಕು, ಕನ್ನಡವನ್ನು ಪ್ರೀತಿಸಬೇಕು. ಯಾಕೆಂದರೆ ಕನ್ನಡ ನಮ್ಮ ನಾಡಿ ಮಿಡಿತ, ಹೃದಯದ ಬಡಿತ, ಮಾತೃ...
ಸರ್ವೇ ನಂ-97 ಪುಸ್ತಕ ಮನುಷ್ಯನ ಬದುಕಿನ ಸಂಕಟಗಳಿಗೆ ಕನ್ನಡಿ ಇದ್ದಂತೆ: ರಘುನಾಥ
ಬೆಂಗಳೂರು: ಅನಿಲ್ ಗುನ್ನಾಪೂರ ಅವರು ಬರೆದ 'ಸರ್ವೇ ನಂಬರ್-97' ಎಂಬ ಕಥಾಸಂಕಲನವನ್ನು ಹೊಂಗಿರಣ ಪ್ರಕಾಶನ, ಬುಕ್ ಬ್ರಹ್ಮ ಹಾಗೂ ನ್ಯಾಯ ಸ್ಪಂದನ ಬೆಂಗಳೂರು, ಓದು ಗೆಳೆಯರ ಬಳಗ,...
ಜ್ವರ ಬಂದಾಗ ಎಳನೀರು ಕುಡಿಯುವುದು ಒಳ್ಳೆಯದೇ..ಏಕೆಂದರೆ?
ಆರೋಗ್ಯ ಮಾಹಿತಿ: ಜ್ವರದ ಸಮಯದಲ್ಲಿ ಹೆಚ್ಚು ಬೆವರುವುದರಿಂದ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತದೆ ಈ ವೇಳೆ ಎಳನೀರು ಕುಡಿಯುವುದರಿಂದ ನೈಸರ್ಗಿಕವಾಗಿ ದೇಹಕ್ಕೆ ನೀರನ್ನು ಒದಗಿಸಿ, ನಿರ್ಜಲೀಕರಣವನ್ನು ತಡೆಯುತ್ತದೆ....