KSRTC ಅಂತರ ನಿಗಮ ವರ್ಗಾವಣೆಗೊಂಡ ನೌಕರರ ಪ್ರಭಾವಕಾರಿಯಾಗಿ ಬಿಡುಗಡೆಗೊಳಿಸುವ ದಿನಾಂಕ ವಿಸ್ತರಿಸಿ ಆದೇಶ


ಬೆಂಗಳೂರು: ಸಾರಿಗೆ ನಿಗಮದ ಅಂತರ ನಿಗಮ ವರ್ಗಾವಣೆಗೊಂಡ ನೌಕರರನ್ನು ಪ್ರಭಾವಕಾರಿಯಾಗಿ ಬಿಡುಗಡೆಗೊಳಿಸುವ ದಿನಾಂಕವನ್ನು ಜೂನ್ 30ರವರೆಗೂ ವಿಸ್ತರಿಸಿ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ.
ಈ ಸಂಬಂಧ ಮೇ 28ರಂದು ಅಂದರೆ ನಿನ್ನೆ ಆದೇಶ ಹೊರಡಿಸಿದ್ದು, ಎಲ್ಲ ನಾಲ್ಕೂ ನಿಗಮಗಳ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಕಾರ್ಯ ವ್ಯವಸ್ಥಾಪಕರು, ಪ್ರಾಂಶುಪಾಲರಿಗೆ ಸೂಚನೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಧಿಕಾರಯುತ ಸಮಿತಿ ಅಧ್ಯಕ್ಷರ ಆದೇಶದ ಮೇರೆಗೆ ದರ್ಜೆ-3 ಮೇಲ್ವಿಚಾರಕೇತರ ಮತ್ತು ದರ್ಜೆ-4 ನೌಕರರ ಅಂತರ ನಿಗಮ ವರ್ಗಾವಣೆಯಡಿ ವಿಭಾಗ/ ಕಚೇರಿಗಳಿಗೆ ನಿಯೋಜಗೊಂಡ ನೌಕರರನ್ನು ಈ ಹಿಂದೆ 31.05.2025 ರೊಳಗಾಗಿ ಬಿಡುಗಡೆಗೊಳಿಸದಿದ್ದಲ್ಲಿ ಪ್ರಭಾವಕಾರಿಯಾಗಿ ಬಿಡುಗಡೆಗೊಳ್ಳುವರು ಎಂದು ಆದೇಶಿಸಲಾಗಿತ್ತು.
ಆದರೆ, ಪ್ರಸ್ತುತ, ಜನದಟ್ಟಣಿ ಅವಧಿ ಇರುವುದರಿಂದ ಹಾಗೂ KSRTC ನಿಗಮ ಮತ್ತು NWKRTC ಸಂಸ್ಥೆಯಲ್ಲಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಅಂತರ ನಿಗಮ ವರ್ಗಾವಣೆಗೊಂಡ ನೌಕರರನ್ನು 31.05.2025ರ ಬದಲಾಗಿ 30.06.2025 ರೊಳಗೆ ಬಿಡುಗಡೆ ಗೊಳಿಸಬೇಕು.
ಒಂದು ವೇಳೆ 30/06/2025 ರೊಳಗೆ ಬಿಡುಗಡೆಗೊಳಿಸದಿದ್ದಲ್ಲಿ, ನೌಕರರು 30/06/2025 ರಂದು ಪ್ರಭಾವಕಾರಿಯಾಗಿ ಬಿಡುಗಡೆಗೊಳ್ಳುವರು ಎಂದು ಎಂಡಿ ಆದೇಶ ಹೊರಡಿಸಿದ್ದಾರೆಂದು ತಿಳಿಸಿದ್ಸಾರೆ.
Related

 








