NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಮಾರ್ಗಮಧ್ಯದಲ್ಲಿ ಬಸ್‌ಗಳ ಯಾವುದೇ ಬಿಡಿ ಭಾಗಗಳು ಕಟ್ಟಾದರೂ ಚಾಲಕರು ದಂಡ ಕಟ್ಟಬೇಕಿಲ್ಲ- ಪಿಆರ್‌ಒ ಸುಮಲತ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಯಾಂತ್ರಿಕ ಇಲಾಖೆ ಕೇಂದ್ರ ಕಚೇರಿಯಿಂದ ಅಶೋಕ ಲೈಲ್ಯಾಂಡ್, ಟಾಟಾ ಮತ್ತು ಏಷರ್ ವಾಹನಗಳಲ್ಲಿ ಅಳವಡಿಸಿರುವ ಹ್ಯಾಂಗರ್ ಮತ್ತು ಮೊದಲನೇ, ಎರಡನೇ ಕಟ್ಟಾವೋಟ್‌ಗಳು ಕಟ್ಟಾದಾಗ ಕರ್ತವ್ಯದಲ್ಲಿದ್ದ ಚಾಲಕರಿಗೆ ದಂಡ ವಿಧಿಸುವ ಕುರಿತು ಯಾವುದೇ ಸುತ್ತೋಲೆ/ ಆದೇಶಗಳನ್ನು ಹೊರಡಿಸಿರುವುದಿಲ್ಲ ಎಂದು ಸಂಸ್ಥೆಯ ಸಾರ್ವಜನಿಕ ಮಾಹಿತಿ ಅಧಿಕಾರಿ, ಸಹಾಯಕ ಯಾಂತ್ರಿಕ ಅಭಿಯಂತರರಾದ ಎಚ್‌.ಸುಮಲತ ತಿಳಿಸಿದ್ದಾರೆ.

ಸಾಮಾನ್ಯವಾಗಿ ಮಾರ್ಗಮಧ್ಯದಲ್ಲಿ ಬಸ್‌ಗಳ ರಾಡ್‌ ಅಥವಾ ಯಾವುದೇ ಬಿಡಿ ಭಾಗಗಳು ಕಟ್ಟಾದರೂ ಅದರ ಎಲ್ಲ ವೆಚ್ಚವನ್ನು ಚಾಲಕರ ಮೇಲೆ ಘಟಕಗಳಲ್ಲಿ ಇರುವ ಅಧಿಕಾರಿಗಳು ಹಾಕಿ ಅವರ ವೇತನದಿಂದ ಹಣವನ್ನು ಕಟ್‌ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಸಂಬಂಧ ಸಂಸ್ಥೆಯ ನೌಕರರ ಕೋಲಾರ ನಿವಾಸಿ ಸಿ. ಶಂಕರಪ್ಪ ಎಂಬುವರು ಈ ಬಗ್ಗೆ ಮಾಹಿತಿ ಕೇಳಿದ್ದರು.

ಅವರು ಕೇಳಿದ್ದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಚಾಲಕರು ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ವಾಹನದ ಅಂದರೆ ಚಾಲನೆಯಲ್ಲಿರುವ ಅಶೋಕ ಲೈಲಾಂಡ್, ಟಾಟಾ ಮತ್ತು ಏಸರ್ (ASHOK LEYLAND, TATA, EICHER) ಕಂಪನಿಯ ವಾಹನಗಳಲ್ಲಿ ಅಳವಡಿಸಿರುವ ಹ್ಯಾಂಗರ್ ಮತ್ತು ಮೊದಲನೇ ಮತ್ತು ಎರಡನೇ ಕಟ್ಟಾವೋಟ್‌ಗಳು ಕಟ್ಟಾದಾಗ (HANGER, FIRST AND SECOND BLADE) ಕರ್ತವ್ಯದಲ್ಲಿದ್ದ ಚಾಲಕರಿಗೆ ದಂಡ ವಿಧಿಸಬೇಕಾದಂತಹ ಕೇಂದ್ರ ಕಚೇರಿಯಿಂದ ಹೊರಡಿಸಿರುವ ಆದೇಶ ಸುತ್ತೋಲೆ ಅಥವಾ ಸಾಮಾನ್ಯ ಸ್ಥಾಯಿ ಆದೇಶವನ್ನು ದೃಢೀಕರಿಸಿ ಮಾಹಿತಿ ಹಕ್ಕು ಅಧಿನಿಯಮ-2005ರ ಪ್ರಕಾರ ಮಾಹಿತಿ ನೀಡಿ ಎಂದು ಕೇಳಿದ್ದರು.

ಅದಕ್ಕೆ ಸಂಸ್ಥೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಸಹಾಯಕ ಯಾಂತ್ರಿಕ ಅಭಿಯಂತರರಾದ ಸುಮಲತ ಅವರು ಈ ರೀತಿ ಉತ್ತರ ನೀಡಿದ್ದಾರೆ. ಅಂದರೆ ಇಲ್ಲಿ ಘಟಕ ಮಟ್ಟದ ಅಧಿಕಾರಿಗಳು ಚಾಲಕರನ್ನು ಹುರಿದು ಮುಕ್ಕುವುದನ್ನೆ ಅಭ್ಯಾಮಾಡಿಕೊಂಡಿದ್ದು, ಇದಕ್ಕೆ ಬಹುತೇಕ ಡಿಸಿಗಳು ಕೂಡ ಸಾಥ್‌ ನೀಡುತ್ತಿರುವುದು ಗುಟ್ಟಾಗೇನು ಉಳಿದಿಲ್ಲ.

ಆದರೂ ಕೂಡ ಈ ಭ್ರಷ್ಟರ ವಿರುದ್ದ ಮೇಲಧಿಕಾರಿಗಳು ಅಂದರೆ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಂಬಂಧಪಟ್ಟ ಭದ್ರತಾ ಜಾಗೃತಾಧಿಕಾರಿಗಳು ಕೂಡ ನಮಗೇನು ಗೊತ್ತಿಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಇನ್ನು ಸಾರಿಗೆ ಸಚಿವರ ಗಮನಕ್ಕೆ ಇಂಥ ವಿಷಯಗಳನ್ನು ಈ ಅಧಿಕಾರಿಗಳೆ ಮುಟ್ಟಿಸಬೇಕಿದೆ. ಆದರೆ ಈ ಭ್ರಷ್ಟ ಅಧಿಕಾರಿಗಳು ಸಚಿವರ ಹತ್ತಿರಕ್ಕೂ ಈ ವಿಷಯ ಸುಳಿಯದ ರೀತಿ ನೋಡಿಕೊಳ್ಳುವುದರಿಂದ ಸಚಿವರು ಕೂಡ ಏನು ಕ್ರಮ ತೆಗೆದುಕೊಳ್ಳಲಾಗುವುದಿಲ್ಲ.

ಒಟ್ಟಾರೆ ಈ ಅಧಿಕಾರಿಗಳು ಉನ್ನತ ಅಧಿಕಾರಿಗಳಿಗೆ ಹಾಗೂ ಸಚಿವರಿಗೆ ಎಷ್ಟೋ ವಿಷಯಗಳನ್ನು ತಿಳಿಸದೆ ಡಿಪೋಗಳು ಮತ್ತು ವಿಭಾಗೀಯ ಮಟ್ಟದಲ್ಲೇ ನಿಯಮಬಾಹಿರವಾಗಿ ನೌಕರರಿಂದ ಲಂಚ ವಸೂಲಿ ಮಾಡುವುದರಲ್ಲಿ ಈ ರೀತಿ ದಂಡ ಕಟ್ಟಿಸುವುರಲ್ಲೇ ಬಹುತೇಕ ಅಧಿಕಾರಿಗಳು ನಿರತರಾಗಿದ್ದಾರೆ. ಇದು ಸಾಮಾನ್ಯ ನೌಕರರಿಗೆ ಭಾರಿ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಹೀಗಾಗಿ ಸಚಿವರು ಹಾಗೂ ಎಂಡಿಗಳು ಈ ಬಗ್ಗೆ ಗಮನಹರಿಬೇಕಿದೆ.

Megha
the authorMegha

Leave a Reply

error: Content is protected !!