ನ್ಯೂಡೆಲ್ಲಿ: ವಿದೇಶಿ ನೇರ ಬಂಡವಾಳ ಹೂಡಿಕೆಗಾಗಿ (ಎಫ್‌ಡಿಐ) ಭಾರತ ಮಾಡಿರುವ ಹೊಸ ಮಾನದಂಡಗಳು ವಿಶ್ವ ವ್ಯಾಪಾರ ಸಂಘಟನೆಯ ತಾರತಮ್ಯ ರಹಿತ ತತ್ವಗಳು ಹಾಗೂ ಮುಕ್ತ ವ್ಯಾಪಾರದ ಸಾಮಾನ್ಯ ಪ್ರವೃತ್ತಿಗಳಿಗೆ ವಿರುದ್ಧವಾಗಿವೆ ಎಂದು ಚೀನಾದ ರಾಯಭಾರ ಕಚೇರಿಯ ವಕ್ತಾರ ಜಿ ರಾಂಗ್ ಟೀಕಿಸಿದ್ದಾರೆ.
ಸೋಮವಾರ ಈ ಕುರಿತು ಹೇಳಿಕೆ ನೀಡಿರುವ ಚೀನಾ ಅಧಿಕಾರಿ ನಿರ್ದಿಷ್ಟ ದೇಶಗಳಿಂದ ವಿದೇಶಿ ನೇರ ಹೂಡಿಕೆಗಾಗಿ ಭಾರತ ಹೊಸದಾಗಿ ಪರಿಚಯಿಸಿರುವ ‘ಹೆಚ್ಚುವರಿ ಅಡೆತಡೆಗಳು’ ನೀತಿಗಳು ಮುಕ್ತ, ನ್ಯಾಯ ಸಮ್ಮತ, ತಾರತಮ್ಯ ರಹಿತ, ಪ್ರಾಮಾಣಿಕ ವಾತಾವರಣ ಸೃಷ್ಟಿಸಬೇಕು ಆದರೆ ಇವು ಜಿ-20 ಗುಂಪಿನಿಂದ ಹೊರಬಂದ ಒಮ್ಮತದ ನಿರ್ಣಯಗಳಿಗೂ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.
ಕೊರೊನಾ ಸಾಂಕ್ರಾಮಿಕ ರೋಗ ಉಲ್ಬಣದ ನಂತರ ಭಾರತದೊಂದಿಗೆ ಭೂ ಗಡಿಯನ್ನು ಹಂಚಿಕೊಳ್ಳುವ ದೇಶಗಳಿಂದ ವಿದೇಶಿ ಹೂಡಿಕೆಗಳಿಗೆ ಅನುಮತಿಯನ್ನು ಭಾರತ ಕಳೆದ ವಾರ ಕಡ್ಡಾಯಗೊಳಿಸಿದೆ. ಇದರಿಂದ ಡಬ್ಲ್ಯುಟಿಒ ತತ್ವಗಳು ಉಲ್ಲಂಘನೆಯಾಗಿವೆ ಎಂದು ತಿಳಿಸಿದ್ದಾರೆ.
ನಿರ್ದಿಷ್ಟ ರಾಷ್ಟ್ರಗಳಿಂದ ವಿದೇಶಿ ನೇರ ಹೂಡಿಕೆಗಾಗಿ ಭಾರತ ರೂಪಿಸಿರುವ ಹೆಚ್ಚುವರಿ ಅಡೆತಡೆಗಳು ನೀತಿಯಿಂದಾಗಿ ಉದಾರೀಕರಣ ಮತ್ತು ವ್ಯಾಪಾರ ಮತ್ತು ಹೂಡಿಕೆಯ ಅನುಕೂಲತೆಯ ಸಾಮಾನ್ಯ ಪ್ರವೃತ್ತಿಗೆ ವಿರುದ್ಧವಾಗಿದೆ ಎಂದು ತಿಳಿಸಿದ್ದಾರೆ.