ಬೆಂಗಳೂರು: ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಹೊಸದಾಗಿ ಅನಾವರಣಗೊಂಡ ಕೈಗಾರಿಕಾ ನೀತಿ 2025-30 ಅನ್ನು ಸ್ವಾಗತಿಸುತ್ತದೆ. ಈ ನೀತಿಯು ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಪ್ರಗತಿಪರ ಮಾರ್ಗಸೂಚಿಯನ್ನು ಪ್ರಸ್ತುತಪಡಿಸುತ್ತದೆ.
20 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಮತ್ತು 7.5 ಲಕ್ಷ ಕೋಟಿ ರೂ. ಮೌಲ್ಯದ ಹೂಡಿಕೆಗಳನ್ನು ಆಕರ್ಷಿಸುವ ಮಹತ್ವಾಕಾಂಕ್ಷೆಯ ಗುರಿಯೊಂದಿಗೆ, ಸುಸ್ಥಿರ ಮತ್ತು ಸಮಗ್ರ ಅಭಿವೃದ್ಧಿಗೆ ಬಲವಾದ ಅಡಿಪಾಯವನ್ನು ಹಾಕುತ್ತದೆ ಎಂದು ಕಾಸಿಯಾ ಅಧ್ಯಕ್ಷ ಎಂ.ಜಿ. ರಾಜಗೋಪಾಲ್ ತಿಳಿಸಿದರು.
ಸಮತೋಲಿತ ಪ್ರಾದೇಶಿಕ ಬೆಳವಣಿಗೆಯನ್ನು ಉತ್ತೇಜಿಸಲು, ಏಕ ಗವಾಕ್ಷಿ ವ್ಯವಸ್ಥೆಯ ಮೂಲಕ ಸುಲಲಿತ ವ್ಯಾಪಾರ ವಹಿವಾಟನ್ನು ಹೆಚ್ಚಿಸಲು ಮತ್ತು ಹಸಿರು ಉತ್ಪಾದನೆಯನ್ನು ಉತ್ತೇಜಿಸುವ ಸರ್ಕಾರದ ಬದ್ಧತೆಯನ್ನು ಶ್ಲಾಘಿಸಿದರು. ಹಿಂದುಳಿದ ಮತ್ತು ಅತ್ಯಂತ ಹಿಂದುಳಿದ ತಾಲ್ಲೂಕುಗಳಲ್ಲಿ ಎಂ.ಎಸ್.ಎಂ.ಇ.ಗಳಿಗೆ ವಿಶೇಷ ಪ್ರೋತ್ಸಾಹದ ಜೊತೆಗೆ, ಲಾಜಿಸ್ಟಿಕ್ಸ್ ಮತ್ತು ದಾಸ್ತಾನು ಮಳಿಗೆ ಉದ್ಯಮವನ್ನು ಒಂದು ಉದ್ಯಮವಾಗಿ ಪರಿಗಣಿಸಿರುವುದು ಸಮಾನ ಕೈಗಾರಿಕೀಕರಣದತ್ತ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದರು.
ಈ ಉಪಕ್ರಮಗಳ ಯಶಸ್ವಿ ಅನುಷ್ಠಾನವು ದೃಢವಾದ ಆಯವ್ಯಯದ ಬೆಂಬಲ ಮತ್ತು ಸ್ಪಷ್ಟ ಅನುಷ್ಠಾನ ಕಾರ್ಯವಿಧಾನಗಳನ್ನು ಅವಲಂಬಿಸಿರುತ್ತದೆ. ಕರ್ನಾಟಕ ಸರ್ಕಾರವು ಎಂ.ಎಸ್.ಎಂ.ಇ.ಗಳಿಗೆ ಘೋಷಿಸಲಾದ ಪ್ರೋತ್ಸಾಹ ಧನವನ್ನು ಆಯಾ ಹಣಕಾಸು ವರ್ಷಗಳ ಆಯವ್ಯಯ ಹಂಚಿಕೆಯಲ್ಲಿ ಸಮರ್ಪಕವಾಗಿ ಸೇರಿಸಬೇಕೆಂದು ಕಾಸಿಯಾ ಒತ್ತಾಯಿಸುತ್ತದೆ. ವಿತರಣೆಯಲ್ಲಿನ ವಿಳಂಬವನ್ನು ತಪ್ಪಿಸಲು ಮತ್ತು ಹಣಕಾಸಿನ ಅನಿಶ್ಚಿತತೆಗಳಿಲ್ಲದೆ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳು ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಇದು ನಿರ್ಣಾಯಕವಾಗಿದೆ.
ಹೆಚ್ಚುವರಿಯಾಗಿ, ವಿದ್ಯುತ್ ಸುಂಕಗಳು, ತೆರಿಗೆಗಳು ಅಥವಾ ಇತರ ವರ್ಗಗಳಲ್ಲಿನ ಯಾವುದೇ ವಿನಾಯಿತಿಗಳು ಅಥವಾ ರಿಯಾಯಿತಿಗಳನ್ನು ಆಯಾ ಇಲಾಖೆಗಳು ತಪ್ಪದೆ ಪ್ರತ್ಯೇಕವಾಗಿ ತಿಳಿಸಬೇಕು. ಸಕಾಲಿಕ ಅಧಿಸೂಚನೆಗಳ ಕೊರತೆಯು ಹೆಚ್ಚಾಗಿ ಎಂ.ಎಸ್.ಎಂ.ಇ.ಗಳಿಗೆ ಅವಕಾಶಗಳನ್ನು ಕಳೆದುಕೊಳ್ಳಲು ಕಾರಣವಾಗುತ್ತದೆ. ಈ ರಿಯಾಯಿತಿಗಳನ್ನು ತಿಳಿಸಲು ಸುವ್ಯವಸ್ಥಿತ ಮತ್ತು ಪಾರದರ್ಶಕ ಕಾರ್ಯವಿಧಾನವು ಸಣ್ಣ ಪ್ರಮಾಣದ ಕೈಗಾರಿಕೆಗಳಲ್ಲಿ ವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ರಾಜ್ಯದ ಕೈಗಾರಿಕಾ ಪರಿಸರ ವ್ಯವಸ್ಥೆಯಲ್ಲಿ ವ್ಯಾಪಕ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತದೆ.
ಹೆಚ್ಚುವರಿಯಾಗಿ, ವಲಯ 3 ರ ಅಡಿಯಲ್ಲಿ ಸೂಕ್ಷ್ಮ ಕೈಗಾರಿಕೆಗಳಿಗೆ ಬಂಡವಾಳ ಹೂಡಿಕೆ ಉತ್ತೇಜನಾ ಸಹಾಯಧನವನ್ನು ವಲಯ -1 ಮತ್ತು 2 ಕ್ಕೆ ಮಾತ್ರ ಸೀಮಿತಗೊಳಿಸಲಾಗಿದ್ದರೂ, ದೊಡ್ಡ ಕೈಗಾರಿಕೆಗಳನ್ನು ಬೆಂಬಲಿಸುವ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳನ್ನು ವಲಯ -3 ರ ಅಡಿಯಲ್ಲಿ ಬಂಡವಾಳ ಹೂಡಿಕೆ ಉತ್ತೇಜನಾ ಸಹಾಯಧನವನ್ನು ಪರಿಗಣಿಸಬೇಕು ಎಂದು ಅವರು ಸಲಹೆ ನೀಡಿದರು.
ಬ್ಯಾಂಕ್ ಸಾಲಗಳಿಗೆ ಮೇಲಾಧಾರದ ಮೇಲಿನ ಹೈಪೋಥಿಕೇಶನ್ ವiತ್ತು ಅಡನಮಾನಗಳ ನೋಂದಣಿಗೆ ಮುದ್ರಾಂಕ ಶುಲ್ಕದ ಮೇಲಿನ ಮಿತಿಯನ್ನು (ಪ್ರಸ್ತುತ 0.5%) ತೆಗೆದುಹಾಕಲಾಗಿದೆ ಮತ್ತು ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಮುದ್ರಾಂಕ ಶುಲ್ಕವನ್ನು ವಿನಾಯಿತಿ ಅಥವಾ ಕಡಿಮೆ ಮಾಡುವ ನಮ್ಮ ವಿನಂತಿಯನ್ನು ಸರ್ಕಾರ ಒಪ್ಪಿಕೊಳ್ಳದಿರುವುದು ನಿರಾಶಾದಾಯಕವಾಗಿದೆ ಎಂದು ಅವರು ಹೇಳಿದರು.
ಎಂ.ಎಸ್.ಎಂ.ಇ.ಗಳಿಗೆ ಕೈಗಾರಿಕಾ ಭೂಮಿ ಬೆಲೆಯು ತುಂಬಾ ದುಬಾರಿಯಾಗಿದೆ. ಕೆಐಎಡಿಬಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡ ನಂತರ ಕೆಐಎಇಡಿಬಿ ಹಂಚಿಕೆ ದರದಲ್ಲಿ ಕೆ.ಎಸ್.ಸ್.ಐ.ಡಿ.ಸಿ.ಗೆ ವರ್ಗಾಯಿಸುತ್ತಿರುವುದರಿಂದ, ಎಂ.ಎಸ್.ಎಂ.ಇ.ಗಳಿಗೆ ಕೈಗೆಟುಕುವ ಬೆಲೆಯಲ್ಲಿ ಭೂಮಿಯನ್ನು ಒದಗಿಸಲು ಕೆ.ಎಸ್.ಸ್.ಐ.ಡಿ.ಸಿ.ಗೆ ಸಾಧ್ಯವಾಗಿಲ್ಲ.
ಕೆ.ಎಸ್.ಸ್.ಐ.ಡಿ.ಸಿ.ಗೆ ನೇರವಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಗುವಂತೆ ಭೂ ಸುಧಾರಣಾ ಕಾಯ್ದೆಗೆ ಸೂಕ್ತ ತಿದ್ದುಪಡಿ ತರುವಂತೆ ಅಥವಾ ಕೆಐಎಡಿಬಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡ ದರದಲ್ಲಿ ಅಭಿವೃದ್ಧಿಯಾಗದ ಭೂಮಿಯನ್ನು ಕೆ.ಎಸ್.ಸ್.ಐ.ಡಿ.ಸಿ.ಗೆ ಯಾವುದೇ ಅಭಿವೃದ್ಧಿ ಶುಲ್ಕವನ್ನು ಸೇರಿಸದೇ ಹಂಚಿಕೆ ಮಾಡಬೇಕೆಂದು ಅವರು ಒತ್ತಾಯಿಸಿದರು. ಅಂತಹ ತಿದ್ದುಪಡಿಗಳ ಕೊರತೆಯಿಂದಾಗಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳು ಕಂದಾಯ ಪ್ರದೇಶಗಳಿಗೆ ಸ್ಥಳಾಂತರಗೊಳ್ಳಲು ಒತ್ತಾಯಿಸಲ್ಪಟ್ಟಿವೆ ಎಂದು ತಿಳಿಸಿದರು.
ಏಕ-ಗವಾಕ್ಷಿ ವ್ಯವಸ್ಥೆ ಸ್ವಾಗತ: ಏಕ ಗವಾಕ್ಷಿ ವ್ಯವಸ್ಥೆ ಮತ್ತು ಕೃತಕ ಬುದ್ಧಿಮತ್ತೆ-ಚಾಲಿತ ಉದ್ಯೋಗ ಮಿತ್ರ ಸಹಾಯಕ ಪರಿಚಯವು ಅನುಮೋದನೆಗಳನ್ನು ಸರಳಗೊಳಿಸಲು ಮತ್ತು ಹೂಡಿಕೆದಾರರ ಅನುಭವವನ್ನು ಹೆಚ್ಚಿಸಲು ಸ್ವಾಗತಾರ್ಹ ಕ್ರಮಗಳಾಗಿದ್ದರೂ, ಈ ಡಿಜಿಟಲ್ ಪ್ಲಾಟ್‌ಫಾರ್ಮ್ಗಳನ್ನು ನ್ಯಾವಿಗೇಟ್ ಮಾಡುವಲ್ಲಿ ಎಂ.ಎಸ್.ಎಂ.ಇ.ಗಳನ್ನು ಕೈಹಿಡಿಯುವ ಅಗತ್ಯವನ್ನು ಕಾಸಿಯಾ ಒತ್ತಿಹೇಳುತ್ತದೆ. ಈ ವ್ಯವಸ್ಥೆಗಳು ಬಳಕೆದಾರ ಸ್ನೇಹಿಯಾಗಿವೆ ಮತ್ತು ತಾಂತ್ರಿಕ ಪರಿಣತಿಯ ಕೊರತೆಯಿರುವ ಸಣ್ಣ ಉದ್ಯಮಿಗಳು ಸಹ ಪ್ರವೇಶಿಸಬಹುದಾಗಿದೆ ಎಂದು ಸರ್ಕಾರ ಖಚಿತಪಡಿಸಿಕೊಳ್ಳಬೇಕು ಎಂದರು.
ಹೊಸ ಕೈಗಾರಿಕಾ ನೀತಿಯ ಪ್ರಯೋಜನಗಳು ಎಲ್ಲ ಫಲಾನುಭವಿಗಳಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಕಾಸಿಯಾ ಸರ್ಕಾರದೊಂದಿಗೆ ಕೆಲಸ ಮಾಡಲು ಬದ್ಧವಾಗಿದೆ. ರಾಜ್ಯದ ಆರ್ಥಿಕತೆಯ ಬೆನ್ನೆಲುಬಾಗಿರುವ ಕರ್ನಾಟಕದ ಒSಒಇ ವಲಯವನ್ನು ಬಲಪಡಿಸುವಲ್ಲಿ ಸಹಯೋಗದ ಪ್ರಯತ್ನಗಳನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.