ಚಾಮರಾಜನಗರ: ನನ್ನ ವಿರುದ್ಧವೇ ಪೊಲೀಸ್ ಠಾಣೆಗೆ ದೂರು ಕೊಡಲು ಹೋಗುತ್ತೀಯ ಎಂದು ದೂರು ನೀಡಲು ಬರುತ್ತಿದ್ದ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಪತಿಯೇ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಇಂದು ನಡೆದಿದೆ.
ಮಂಗಳವಾರ (ಜೂ.3) ನಗರದ ಸೋಮವಾರಪೇಟೆ ನಿವಾಸಿ ಗಿರೀಶ್ ಎಂಬಾತನೆ ತನ್ನ ಪತ್ನಿ ವಿದ್ಯಾಳನ್ನು ಕೊಡಲಿಯಿಂದ ಹೊಡೆದು ಹತ್ಯೆ ಮಾಡಿದ ಕೀರಾತಕ.
ಆರು ತಿಂಗಳ ಹಿಂದೆ ಗಂಡ-ಹೆಂಡತಿ ನಡುವೆ ಕಲಹ ಉಂಟಾಗಿತ್ತು. ಆ ವೇಳೆಯೇ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಇನ್ನು ವಿದ್ಯಾಳನ್ನು ಏನಾದರು ಮಾಡಿಬಿಡುತ್ತೇನೆ ಎಂಬ ಭಯದಲ್ಲೇ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿತ್ತು.
ಇನ್ನು ಪತಿ ಸೇರಿದಂತೆ ಆತನ ಕುಟುಂಬದವರ ವಿರುದ್ಧ ಇಂದು ಠಾಣೆಗೆ ದೂರು ನೀಡಲು ಬರುತ್ತಿದ್ದ ಪತ್ನಿಯನ್ನು ನನ್ನ ಕುಟುಂಬವರ ವಿರುದ್ಧವೇ ದೂರು ನೀಡಲು ಹೋಗುತ್ತೀಯ ಎಂದು ಆಕ್ರೋಶಗೊಂಡ ಗಿರೀಶ್ ಕೊಡಲಿಯಿಂದ ಹೊಡೆದು ಹತ್ಯೆ ಮಾಡಿ, ಬಳಿಕ ಪರಾರಿಯಾಗಿದ್ದಾನೆ.
ಇತ್ತ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಸಿಮ್ಸ್ ಆಸ್ಪತ್ರೆಗೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಹತ್ಯೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರು ಪೊಲೀಸರು ಗಿರೀಶ್ ಪತ್ತೆಗೆ ಬಲೆ ಬೀಸಿದ್ದಾರೆ.
Related

 










