NEWSನಮ್ಮಜಿಲ್ಲೆ

KSRTC ಮಡಿಕೇರಿ: 30-35 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ನೌಕರರಿಗೆ ಬೀಳ್ಕೊಡುಗೆ

ವಿಜಯಪಥ ಸಮಗ್ರ ಸುದ್ದಿ

ಮಡಿಕೇರಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗ ಮಡಿಕೇರಿ ಘಟಕದ ಚಾಲಕ ಬೋಧಕ ಮತ್ತು ಚಾಲಕರಾಗಿದ್ದ ಪಿ.ಎಸ್.ವೈಲೇಶ ಹಾಗೂ ಚಾಲಕ ಮಹಾಬಲ ಶೆಟ್ಟಿ, ಸಂಚಾರ ನಿಯಂತ್ರಕ ಶ್ರೀನಿವಾಸ್ ಅವರು ನಿವೃತ್ತಿಹೊಂದಿದ ಹಿನ್ನೆಲೆಯಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಅದ್ದೂರಿಯಾಗಿ ಆಯೋಜಿಸಿ ಬೀಳ್ಕೊಡಲಾಯಿತು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪ್ರಭಾರ ವಿಭಾಗೀಯ ಸಂಚಲನಾಧಿಕಾರಿ ಅಧ್ಯಕ್ಷತೆಯಲ್ಲಿ ಸಂಸ್ಥೆಯ ವತಿಯಿಂದ ಮೂವರಿಗೂ ಕನ್ನಡ ಪೇಟ, ಮಣಿ ಹಾರ ಮತ್ತು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸುವ ಮೂಲಕ ಬೀಳ್ಕೊಡಲಾಯಿತು.

ಈ ವೇಳೆ ಮಾತನಾಡಿದ ಘಟಕ ವ್ಯವಸ್ಥಾಕರು ಹಾಗೂ ಪ್ರಭಾರಿ ವಿಭಾಗೀಯ ಸಂಚಲನಾಧಿಕಾರಿ ವರ್ಗಾವಣೆ, ನಿವತ್ತಿ ಸರ್ಕಾರಿ ನೌಕರರಿಗೆ ಸಹಜ. 30-35 ವರ್ಷ ಚಾಲಕರಾಗಿ‌ ಸಂಚಾರ ನಿಯಂತ್ರಕರಾಗಿ ಸೇವೆ ಸಲ್ಲಿಸಿ ನಿವತ್ತಿಯಾಗುತ್ತಿರುವ ಸಿಬ್ಬಂದಿ ಮುಂದಿನ ತಮ್ಮ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಹರಸಿದರು.

ವಯಸ್ಸನ್ನು ಆಧರಿಸಿ ಸರ್ಕಾರ ನಿಗದಿಪಡಿಸಿದ ನಿಯಮದಂತೆ ನಿವೃತ್ತಿ ಆಗಲೇಬೇಕು. ಯುವಕರಿಗೆ ಜಾಗ ಮಾಡಿಕೊಡಬೇಕು. ಚಾಲಕರ ಹಾಗೂ ನಿರ್ವಾಹಕರು ಅತ್ಯಂತ ಒತ್ತಡದ ಪರಿಸ್ಥಿತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಘಟಕವು ಈ ಹಿಂದೆ ರಾಜ್ಯದಲ್ಲಿಯೇ ಅತ್ಯುತ್ಯಮ ಸಾರಿಗೆ ಘಟಕ ಎಂದು ಹೆಸರು ಪಡೆದಿತ್ತು. ಮತ್ತೆ ಅದನ್ನು ವಾಪಾಸ್ ಪಡೆಯಲು ಸಿಬ್ಬಂದಿಗಳಿಂದ ಪ್ರಾಮಾಣಿಕ ಸೇವೆ ಮೂಡಿ ಬರಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಶೇಷ ಅತಿಥಿಯಾಗಿ ಆಗಮಿಸಿದ ಕನ್ನಡ ಸಾಹಿತ್ಯ ಪರಿಷತ್‌ ನಿಕಟಪೂರ್ವ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಅವರು ಸಂಸ್ಥೆಯ ಚಾಲಕ ಬೋಧಕ ಹಾಗೂ ಕವಿಗಳಾದ ವೈಲೇಶ್ ಅವರು ಸೇರಿದಂತೆ ನಿವೃತ್ತರಾಗಿರುವ ಎಲ್ಲ ಜೀವನ ಸುಖಕರವಾಗಿರಲಿ ಎಂದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪರಿಶಿಷ್ಟ ಜಾತಿ ಮತ್ತು ಪಂಗಡದ ರಾಜ್ಯ ಮಟ್ಟದ ಮುಖಂಡ ಶ್ರೀನಿವಾಸ ಅವರ ಜತೆಗೆ ಈ ಇಬ್ಬರಿಗೂ ಸಂಸ್ಥೆಯ ಪಜಾ ಮತ್ತು ಪಪಂ. ಸಂಘದ ವಿಭಾಗೀಯ ಅಧ್ಯಕ್ಷ ಬಿ.ಎಸ್.ಕುಮಾರಸ್ವಾಮಿ ಮತ್ತು ಮಡಿಕೇರಿ ಘಟಕದ ಅಧ್ಯಕ್ಷ ರಾಮಚಂದ್ರ ಅವರ ಉಸ್ತುವಾರಿಯಲ್ಲಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ನಾರಾಯಣ ಹೆಬ್ಬಾಳ್ ಮತ್ತು ಮಿತ್ರ ಮಂಜುಗೌಡ ವೈಲೇಶ್ ಅವರನ್ನು ಸನ್ಮಾನಿಸಿದರು. ಘಟಕ ವ್ಯವಸ್ಥಾಕರು ಹಾಗೂ ಪ್ರಭಾರಿ ವಿಭಾಗೀಯ ಸಂಚಲನಾಧಿಕಾರಿ ನಿವೃತ್ತರನ್ನು ಶ್ಲಾಘಿಸಿ ನೌಕರರನ್ನು ಉದ್ದೇಶಿಸಿ ಮಾತನಾಡಿದರು. ನಾರಾಯಣ ಮೂರ್ತಿ ನಿರೂಪಿಸಿದರೆ ಮದನಕುಮಾರ್ ನಿವೃತ್ತರ ಪರಿಚಯ ಮಾಡಿಕೊಟ್ಟರು.

Megha
the authorMegha

Leave a Reply

error: Content is protected !!