CRIMENEWSಕ್ರೀಡೆಸಿನಿಪಥ

ಜನರ ಮಧ್ಯೆ ಸಿಲುಕಿ ನನಗೂ ಉಸಿರಾಡಲು ಕಷ್ಟ ಆಯಿತು: ರ‍್ಯಾಪರ್ ಚಂದನ್ ಶೆಟ್ಟಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬುಧವಾರ ನಡೆದ ಘಟನೆಯನ್ನು ನಾನು ಕಣ್ಣಾರೆ ನೋಡಿದ್ದು, ಅಲ್ಲದೆ ನನಗೂ ಕೂಡ ಜನಗಳ ಮಧ್ಯೆ ಉರಿರುಗಟ್ಟಿತು ಎಂದು ರ‍್ಯಾಪರ್ ಚಂದನ್ ಶೆಟ್ಟಿ ಹೇಳಿದ್ದಾರೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಗೆಲುವಿನ ಸಂಭ್ರಮಾಚರಣೆಯಲ್ಲಿ ಕಾಲ್ತುಳಿತ ಉಂಟಾಗಿ 11 ಮಂದಿ ಯುವಕ ಯುವತಿಯರು ಮೃತಪಟ್ಟಿರುವುದ ಕುರಿತು ಮಾತನಾಡಿದರು.

ಗೇಟ್ ನಂಬರ್ 3ರಲ್ಲಿ ಹೋಗಲು ನನಗೆ ಪಾಸ್ ಸಿಕ್ಕಿತ್ತು. ಗೇಟ್ ನಂಬರ್ 3ಕ್ಕೆ ತಲುಪಲು ಆಗಲೇ ಇಲ್ಲ, ಅಷ್ಟು ಜನ ಸೇರಿದ್ದರು. ಗೇಟ್ ನಂಬರ್ 10ಕ್ಕೆ ಹೋದೆ, ಅಲ್ಲೂ ತುಂಬಾ ಜನರಿದ್ದರು. ಜನರ ಮಧ್ಯೆ ಸಿಲುಕಿ ನನಗೂ ಉಸಿರಾಡಲು ಕಷ್ಟ ಆಯಿತು ಎಂದು ನಿನ್ನೆ ನಡೆದ ಘಟನೆ ಬಗ್ಗೆ ತಿಳಿಸಿದ್ದಾರೆ.

ಇನ್ನು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತಕ್ಕೆ 11 ಆರ್‌ಸಿಬಿ ಅಭಿಮಾನಿಗಳು ದುರ್ಮರಣಕ್ಕೀಡಾಗಿದ್ದಾರೆ. 50ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದು ಮೃತರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು, ನೋಡಲು ಆಗುತ್ತಿಲ್ಲ.

Megha
the authorMegha

Leave a Reply

error: Content is protected !!
Latest news
KSRTC: ಪಲ್ಲಕ್ಕಿಯಲ್ಲಿ ಆಕಸ್ಮಿಕ ಬೆಂಕಿ- ಧಗಧಗಿಸಿದ ಬಸ್‌- ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ KSRTC ಕಡೂರು: ಘಟಕದಲ್ಲೊಬ್ಬಳು ಟಾರ್ಚರ್‌ ಟಿಸಿ- ನೌಕರರಿಗೆ ಮಾನಸಿಕ ಕಿರುಕುಳ- ರಜೆ ಬದಲು ಗೈರು ತೋರಿಸುವ ನಟ ಭಯಂಕರಿ! EPS ಪಿಂಚಣಿದಾರರ 100ನೇ ಮಾಸಿಕ, ಶತದಿನೋತ್ಸವದಲ್ಲಿ ಮುಸ್ಸಂಜೆಯ ತರುಣರ ಸಂಭ್ರಮ KSRTC: ಫ್ರೀಡಂ ಪಾರ್ಕ್‌ನಲ್ಲಿ ಸರಿ ಸಮಾನ ವೇತನ, 38 ತಿಂಗಳ ಹಿಂಬಾಕಿಗೆ ಆಗ್ರಹಿಸಿ ಸಾರಿಗೆ ನೌಕರರ ಪ್ರತಿಭಟನೆ- ಸರ್ಕಾರ... ಗೆದ್ದ3ವರ್ಷದ ಬಳಿಕ ಶಾಸಕರಾದ ಜೀವರಾಜ್: ಅಧಿಕಾರಿಗಳ ಎಡವಟ್ಟಿಗೆ ಸೋತರು 3ವರ್ಷ ಶಾಸಕರಾಗಿದ್ದ ರಾಜೇಗೌಡ KSRTC: ಇಂದು ಸರಿ ಸಮಾನ ವೇತನ, 38 ತಿಂಗಳ ಹಿಂಬಾಕಿ ಕೊಡಲು ಆಗ್ರಹಿಸಿ ಸಾರಿಗೆ ನೌಕರರ ಧರಣಿ ಸತ್ಯಾಗ್ರಹ KSRTC: ನಾಳೆ ಸರಿ ಸಮಾನ ವೇತನ, 38 ತಿಂಗಳ ಹಿಂಬಾಕಿ ಕೊಡದ ಸರ್ಕಾರದ ವಿರುದ್ಧ ಸಾರಿಗೆ ನೌಕರರ ಧರಣಿ ಸತ್ಯಾಗ್ರಹ KKRTC: ನೋಡಿ ಎಂಡಿ ಅವರೇ ನಿಮ್ಮ ಸಂಸ್ಥೆಯಲ್ಲಿ ಚಾಲನಾ ಸಿಬ್ಬಂದಿಗಳು ಮೇ 1ರಂದು ರಜೆ ತೆಗೆದುಕೊಂಡರೆ ಆಬ್ಸೆಂಟ್‌ ಹಾಕುವ ... ಪ್ರಾಮಾಣಿಕತೆ ಮೆರೆದ KSRTC ಸಿಬ್ಬಂದಿ - ಆಭರಣ ಅಡವಿಟ್ಟು ತಂದಿದ್ದ ಹಣ ಕಳೆದು ಕೊಂಡ ಪ್ರಯಾಣಿಕನಿಗೆ ಮರಳಿ ಕೊಟ್ಟ ನೌಕರರ... KSRTC: ಚಾಲನಾ ಸಿಬ್ಬಂದಿ ವಿರುದ್ಧ ಮೆಮೊ ನೀಡುವುದಕಷ್ಟೇ ತಮ್ಮ ಕಾರ್ಯ ವ್ಯಾಪ್ತಿಯ ಸೀಮಿತಗೊಳಿಸಿಕೊಂಡ ತನಿಖಾಧಿಕಾರಿಗಳು?...