ಬೆಂಗಳೂರು: ಕೇಂದ್ರ ಸರ್ಕಾರವು 2019-20ನೇ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ FAQ ಗುಣಮಟ್ಟದ ತೊಗರಿಗೆ ಪ್ರತಿ ಕ್ವಿಂಟಾಲ್ ಗೆ 6100 ರೂ. ನಂತೆ ಖರೀದಿಸಲು ಆದೇಶಿಸಿದೆ. ಅದರಂತೆ 3.18 ಲಕ್ಷ ರೈತರು ನೋಂದಾಯಿಸಿಕೊಂಡಿದ್ದು, 2.53 ಲಕ್ಷ ರೈತರಿಂದ 22.75 ಲಕ್ಷ ಕ್ವಿಂಟಾಲ್ ತೊಗರಿಯನ್ನು ಈಗಾಗಲೇ ಖರೀದಿಸಲಾಗಿದೆ.
ಬೆಂಬಲ ಬೆಲೆ ಯೋಜನೆಯಡಿ ಪ್ರತಿ ರೈತರಿಂದ ಗರಿಷ್ಠ 10 ಕ್ವಿಂಟಾಲ್ ಮಾತ್ರ ತೊಗರಿ ಖರೀದಿಸಲಾಗಿದ್ದು, ಕೇಂದ್ರ ಸರ್ಕಾರವು ಇನ್ನೂ 5 ಕ್ವಿಂಟಾಲ್ ತೊಗರಿಯನ್ನು ಈಗಾಗಲೇ ನೋಂದಾಯಿಸಿಕೊಂಡು ಮಾರಾಟ ಮಾಡಿದ ರೈತರಿಂದ ಖರೀದಿಸಲು ಅನುಮತಿಸಿದೆ.
ಬೆಂಬಲ ಬೆಲೆ ಯೋಜನೆಯ ಪ್ರಯೋಜನ ಪಡೆಯದೇ ಬಾಕಿ ಉಳಿದ 65.316 ಜನ ರೈತರಿಂದ ಬೆಲೆ ಸ್ಥಿರೀಕರಣ ಯೋಜನೆಯಡಿ (PSಈ) ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಾಲ್ ತೊಗರಿಯನ್ನು ಖರೀದಿಸಲು ಕೇಂದ್ರ ಸರ್ಕಾರ ಅನುಮತಿಸಿರುತ್ತದೆ. ಆದುದರಿಂದ ಬೆಂಬಲ ಬೆಲೆ ಯೋಜನೆಯಡಿ ನೊಂದಾಯಿಸಿ ಪ್ರಯೋಜನ ಪಡೆಯದ ರೈತರು ಕೂಡಲೇ ಖರೀದಿ ಕೇಂದ್ರಕ್ಕೆ ಹೋಗಿ ತಾವು ಬೆಳೆದ ತೊಗರಿಯನ್ನು ಪ್ರತಿ ಕ್ವಿಂಟಾಲ್ ಗೆ 6100 ರೂ.ನಂತೆ ಬೆಲೆ ಸ್ಥಿರೀಕರಣ ಯೋಜನೆಯಡಿ ಮಾರಾಟ ಮಾಡಬಹದು ಏ.20ಕ್ಕೆ ಅಂತ್ಯವಾಗುವಂತೆ 32,421 ರೈತರಿಂದ ಒಟ್ಟು 2.98 ಲಕ್ವ ಕ್ವಿಂಟಾಲ್ ತೊಗರಿ ಖರಿದಿಸಿರುವುದಾಗಿ ಮಾರ್ಕ್‍ಫೆಡ್ (ಕರ್ನಾಟಕ ಸಹಕಾರ ಮಾರಾಟ ಮಹಾ ಮಂಡಳ) ತಿಳಿಸಿದೆ.
ಕೊವಿಡ್ -19 ವ್ಯವಸ್ಥೆಗೆ ಯಾವುದೇ ಭಂಗವಾಗದ ರೀತಿಯಲ್ಲಿ ರೈತರುಗಳು ಸಹಕರಿಸಿ, ಇದರ ಪ್ರಯೋಜನವನ್ನು ಪಡೆಯಬಹುದು ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ತಿಳಿಸಿದ್ದಾರೆ.
ಕಡಲೆ: ಕೇಂದ್ರ ಸರ್ಕಾರವು ಗುಣಮಟ್ಟದ ಕಡಲೆಗೆ ಪ್ರತಿ ಕ್ವಿಂಟಾಲ್ ಗೆ 4875 ರೂ.ನಂತೆ ಗರಿಷ್ಢ 14.34 ಲಕ್ಷ ಕ್ವಿಂಟಾಲ್ ಖರೀದಿಸಲು ಅನುಮತಿಸಿದೆ. ಈವರೆವಿಗೆ 1,04,313 ಜನ ರೈತರು ನೊಂದಾಯಿಸಿಕೊಂಡಿದ್ದು, ಏ.21ರ ಅಂತ್ಯಕ್ಕೆ 51,172 ಜನ ರೈತರಿಂದ 4.42 ಲಕ್ಷ ಕ್ವಿಂಟಾಲ್ ಖರೀದಿಸಿರುವುದಾಗಿ ಮಾರ್ಕ್‍ಫೆಡ್ ಸಂಸ್ಥೆ ತಿಳಿಸಿದೆ. ಮಾರ್ಕ್‍ಫೆಡ್ ಸಂಸ್ಥೆ ಖರೀದಿ ಮಾಡುತ್ತಿದ್ದು, ಕಡಲೆ ಬೆಳೆಗಾರರು ಇದರ ಪ್ರಯೋಜನವನ್ನು ಪಡೆಯಬಹುದು ಎಂದು ಬೆಳಗುರ್ಕಿ ತಿಳಿಸಿದ್ದಾರೆ.