CRIMENEWSನಮ್ಮರಾಜ್ಯ

BMTC: ಯುವತಿ ಮೇಲೆ ಬಸ್‌ ನುಗ್ಗಿಸಲು ಯತ್ನ ಪ್ರಕರಣದ FIRಗೆ ಹೈ ಕೋರ್ಟ್‌ ತಡೆ

ವಿಜಯಪಥ ಸಮಗ್ರ ಸುದ್ದಿ
  • ಬಿಎಂಟಿಸಿ ಚಾಲಕನ ಪರ ವಕ್ಕಾಲತ್ತು ವಹಿಸಿದ್ದ ಸುಪ್ರೀಂ ಕೋರ್ಟ್‌ ಹಾಗೂ ಹೈ ಕೋರ್ಟ್‌ ವಕೀಲ ಎಚ್‌.ಬಿ.ಶಿವರಾಜು
  • ಬಹುತೇಕ ಸಾರಿಗೆ ನೌಕರರ ಎಲ್ಲ ಪ್ರಕರಣಗಳಲ್ಲೂ ಜಾಣ್ಮೆಯ ವಾದ ಮಂಡಿಸಿ ನ್ಯಾಯ ಕೊಡಿಸಿರುವ ವಕೀಲರು

ಬೆಂಗಳೂರು: ಬಸ್ ಅಡ್ಡಗಟ್ಟಿದ ಯುವತಿ ಮೇಲೆ ಬೆಂಗಳೂರು ಮಹಾನಗರ ಸಾರಿಗೆ ಬಸ್‌ ಚಾಲಕ ಆಕೆ ಮೇಲೆ ಬಸ್‌ ನುಗ್ಗಿಸಲು ಯತ್ನಿಸಿದ ಆರೋಪದ ಮೇರೆಗೆ ದಾಖಲಾಗಿದ್ದ ಪ್ರಕರಣಕ್ಕೆ ಹೈ ಕೋರ್ಟ್‌ ತಡೆ ನೀಡಿ ಆದೇಶ ಹೊರಡಿಸಿದೆ.

ಈ ಸಂಬಂಧ ಸಂಚಾರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ಗೆ ತಡೆ ನೀಡುವಂತೆ ಬಿಎಂಟಿಸಿ ಚಾಲಕ ಪ್ರಶಾಂತ್ ಹೈ ಕೋರ್ಟ್‌ ಮೆಟ್ಟಿಲೇರಿದ್ದರು.  ಮಂಗಳವಾರ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ಕೃಷ್ಣಕುಮಾರ್‌ ಅವರಿದ್ದ ಏಕ ಸದಸ್ಯ ನ್ಯಾಯಪೀಠ ವಾದ ಪ್ರತಿವಾದವನ್ನು ಆಲಿಸಿದ ಬಳಿಕ ತಡೆ ನೀಡಿದೆ.

ಇದರ ಜತೆಗೆ ಮತ್ತು ಒಂದು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಕ್ರಿಮಿನಲ್‌  ಪ್ರಕರಣವನ್ನು ದಾಖಲಿಸಿದ್ದರು. ಇದರ ವಿಚಾರಣೆ  (WP 8056/2025)  ಇಂದು ನಡೆದಿದ್ದು ಮತ್ತೆ ಇದಕ್ಕೂ ತಡೆ ನೀಡಿ ಕೋರ್ಟ್‌ ಆದೇಶ ಮಾಡಿದೆ.

ಮೇ 23ರಂದು ನಡೆದ ಘಟನೆ ಸಂಬಂಧ ಜೂನ್‌ 1ರಂದು ಚಾಲಕ ಪ್ರಶಾಂತ್ ಅವರನ್ನು ಸಂಸ್ಥೆ ಅಮಾನತು ಮಾಡಿದ್ದು, ಇಲಾಖೆ ವಿಚಾರಣೆ ಕೂಡ ನಡೆಸುತ್ತಿದೆ.

ಘಟನೆ ವಿವರ: ಮೇ 23ರಂದು ಸಂಜೆ 5.40ಕ್ಕೆ ಕಬ್ಬನ್ ಪೇಟೆ ಸಿಗ್ನಲ್‌ನಲ್ಲಿ ಈ ಘಟನೆ ನಡೆದಿತ್ತು. ಈ ವೇಳೆ ಯುವತಿ ಜಸ್ಟ್ ಮಿಸ್ ಆಗಿದ್ದಾಳೆ ಎಂಬ ದೃಶ್ಯ ಕಾರಿನ ಡ್ಯಾಶ್ ಕ್ಯಾಮೆರಾ ಹಾಗೂ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ ಯುವತಿ ಬಸ್‌ಗೆ ಅಡ್ಡವಾಗಿ ನಿಲ್ಲುವುದಕ್ಕೆ ಮುಂಚೆ ನಡೆದಿದ್ದೇನು ಅನ್ನೋ ತನಿಖೆ ಸಹ ಮುಂದುವರಿದಿದೆ.

ನಿಜವಾಗಿ ಅಂದು ನಡೆದಿದ್ದೇನು?:  ಮೇ 23ರಂದು ಬಿಎಂಟಿಸಿ ಬಸ್ ಚಾಲಕ ಮತ್ತು ಯುವತಿ ನಡುವೆ ಕಿರಿಕ್ ಆಗಿತ್ತು. ರೊಚ್ಚಿಗೆದ್ದ ಯುವತಿ ಬಸ್ ಚಾಲಕನ ಪ್ರಶ್ನೆ ಮಾಡಲು ಬಸ್ ಅಡ್ಡಗಟ್ಟಿದ್ದರು. ಆದರೆ ಡ್ರೈವರ್‌ ಯುವತಿ ಜತೆಗೆ ಹೆಚ್ಚಿಗೆ ಮಾತನಾಡದೆ ಬಸ್ಸನ್ನು ಮುಂದೆಕ್ಕೆ ಚಲಾಯಿಸಿದ. ಆದರೆ ಚಾಲಕನ ಬಗ್ಗೆ ತಪ್ಪಾಗಿ ತಿಳಿದುಕೊಂಡ ಜನ ಅಂದು ಚಾಲಕನ ನಡೆಯನ್ನು ವಿರೋಧಿಸಿದರು.

ಬಿಎಂಟಿಸಿ ಚಾಲಕ ಪ್ರಶಾಂತ್ ಆ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ, ಘಟನೆ ಬಗ್ಗೆ ಮಾಹಿತಿ ನೀಡಿದ್ದರು. ಇದು ಕಬ್ಬನ್ ಪೇಟೆ ಸಿಗ್ನಲ್‌ನಲ್ಲಿ ನಡೆದಿದ್ದು. ಅದಕ್ಕೂ ಮುಂಚೆ ಹಡ್ಸನ್ ಸಿಗ್ನಲ್‌ನಲ್ಲಿ ಟ್ಯಾಂಕರ್ ಹಾಗೂ ಬಿಎಂಟಿಸಿ ಬಸ್ ಮುಂದೆ ಲೇಡಿ ಕಾರು ಓಡಿಸಿಕೊಂಡು ಬಂದರು. ಆಗ ಲೇಡಿಗೆ ಟ್ಯಾಂಕರ್ ಚಾಲಕ ಬೈದಿದ್ದರು.

ನಂತರ ಕಾರ್ಪೋರೇಷನ್ ಸಿಗ್ನಲ್‌ನಲ್ಲಿ ಜನ ಹತ್ತಿಸಿಕೊಳ್ಳುವಾಗ ನಾನು ನಿಮ್ಮ ಜಗಳದಲ್ಲಿ ನಮಗೆ ಒಂದು ಸಿಗ್ನಲ್ ಹೋಯ್ತು ಅಂತಾ ಹೇಳಿದೆ. ಅಷ್ಟಕ್ಕೆ ಆ ಯುವತಿ ಕಾರನ್ನು ಬಸ್‌ ಮುಂದಕ್ಕೆ ಹೋಗದ ಹಾಗೆ ಅಡ್ಡಾದಿಡ್ಡಿ ಚಾಲನೆ ಮಾಡಿಕೊಂಡು ಹೋದರು.

ಕಬ್ಬನ್ ಪೇಟೆ ಸಿಗ್ನಲ್‌ನಲ್ಲಿ ಬಸ್ ನಿಲ್ಲಿಸಿದಾಗ ನನಗೆ ಅವಾಚ್ಯ ಶಬ್ದದಿಂದ ಬೈದು ನನ್ನ ‌ಮೇಲೆ ‌ಹಲ್ಲೆ ಮಾಡಲು ಮುಂದಾದ್ರು. ಬಸ್‌ನಿಂದ ಕೆಳಗೆ ಇಳಿ ಅಂತಾ ಅವಾಜ್ ಕೂಡ ಹಾಕಿದ್ರು. ನನ್ನ ತಪ್ಪು ಇಲ್ಲದೇ ನಾನು ಯಾಕೆ ಕೆಳಗೆ ಇಳಿಯಬೇಕು ಅಂತ ನಾನು ಇಳಿದಿಲ್ಲ. ಯುವತಿಯ ಎಡಭಾಗಕ್ಕೆ ಬಸ್ ಚಲಾಯಿಸಿದೇ ಹೊರತು ನಾನು ಯುವತಿ ಮೇಲೆ ನುಗ್ಗಿಸಲು ಪ್ರಯತ್ನಿಸಿಲ್ಲ. ಕಬ್ಬನ್ ಪೇಟೆ ಪೊಲೀಸ್ ಠಾಣೆಯಲ್ಲಿ ನನ್ನ ಮೇಲೆ ಎಎಫ್‌ಆರ್ ಆಗಿದೆ ಎಂದು ತಿಳಿಸಿದ್ದರು.

ಕಬ್ಬನ್ ಪೇಟೆ ಪೊಲೀಸ್ ಠಾಣೆಯಲ್ಲಿ ಎಎಫ್‌ಆರ್ ಆಗಿರುವುದಕ್ಕೆ ತಡೆ ನೀಡುವಂತೆ ಚಾಲಕ ಪ್ರಶಾಂತ್‌ ಹೈ ಕೋರ್ಟ್‌ ಮೊರೆ ಹೋದರು, ಇವರ ಪರವಾಗಿ ಸುಪ್ರೀಂ ಕೋರ್ಟ್‌ ಹಾಗೂ ಹೈ ಕೋರ್ಟ್‌ ವಕೀಲ ಎಚ್‌.ಬಿ.ಶಿವರಾಜು ವಕ್ಕಾಲತ್ತು ಹಾಕಿದರು.

ಇನ್ನು ಮಂಗಳವಾರ ಮತ್ತು ಬುಧವಾರ  ನಡೆದ ವಾದ ಪ್ರತಿವಾದದಲ್ಲಿ ನ್ಯಾಯಯೂರ್ತಿಗಳು ಬಸ್‌ ಓಡಿಸಿದ ವೇಳೆ ಮಹಿಳೆಗೆ ಏನಾದರೂ ಗಾಯವಾಗಿದೆಯೇ ಎಂದು ಪ್ರಶ್ನಿಸಿದರು. ಅದಕ್ಕೆ ಇಲ್ಲ ಕಾರಿಗೆ ಸ್ವಲ್ಪ ಹಾಲಿಯಾಗಿದೆ ಎಂದು ವಕೀಲರು ವಾದ ಮಂಡಿಸಿದರು. ಹೀಗೆ ವಾದ ಪ್ರತಿವಾದ ಆಲಿಸಿದ ಬಳಿಕ ಚಾಲಕ ಪ್ರಶಂತ್‌ ಪ್ರಕರಣಕ್ಕೆ ತಡೆ ನೀಡಿ ಆದೇಶ ಹೊರಡಿಸಿದರು.

Megha
the authorMegha

Leave a Reply

error: Content is protected !!
Latest news
ಗೃಹಲಕ್ಷ್ಮಿ, ಗೃಹಜ್ಯೋತಿಗೆ  ಹೊಸದಾಗಿ ಅರ್ಜಿ ಸಲ್ಲಿಸಬೇಕೆಂಬ ನಿರ್ಧಾರ ಸ್ವಾಗತಾರ್ಹ KSRTC ಪುತ್ತೂರು: ಡ್ರಿಂಕ್ಸ್ ಪರೀಕ್ಷಿಸಲು ಮಷೀನ್ ತಂದಿದ್ದಾರೆ ಎಂದು ತಪ್ಪು ತಿಳಿದು ಹೆದರಿದ ನೌಕರ- ಮೆಟ್ಟಲುಗಳಿಂದ ಬಿ... 2037ರ ವೇಳೆಗೆ ಬೆಂಗಳೂರು ಆಗಲಿದೆ ಜಾಗತಿಕ ಆರ್ಥಿಕ ಶಕ್ತಿಕೇಂದ್ರ: 35 ಲಕ್ಷ ಕೋಟಿ ರೂ.ಗೂ ಅಧಿಕ ಕಾಂಚಾಣ, 30 ಲಕ್ಷ ಹೊಸ ... ಪಂಜಾಬ್ ಮಾದರಿ ಕರ್ನಾಟಕದಲ್ಲೂ ಹೆದ್ದಾರಿ ಟೋಲ್‌ ರದ್ದತಿಗೆ ಆಗ್ರಹಿಸಿ 23ರಂದು ರೈತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ KSRTC ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಓಂಕಾರಪ್ಪನ ಸಹಿ ಮಾಡುವ ಅಧಿಕಾರ ರದ್ದುಗೊಳಿಸಿ ತನಿಖೆಗೆ ಹೈ ಕೋರ್ಟ್‌ ಆದೇಶ BMTC: 30ನೇ ಘಟಕದ ಎಲೆಕ್ಟ್ರಿಕ್‌ ಬಸ್‌ಗಳ ಅಸಮರ್ಪಕ ಕಾರ್ಯಾಚರಣೆ ವಿರುದ್ಧ ಸಿಎಸ್‌ಗೆ ದೂರು ನೀಡಿದ ನಿರ್ವಾಹಕರು ಪಬ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡ -ಅಬಕಾರಿ ಡಿಸಿ ಅಮಾನತಿಗೆ ಶಿಫಾರಸು: ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೊಲದ ಕೂಲಿ ಕೆಲಸ ಬಿಟ್ಟು ಮತ್ತೆ ಶಿಕ್ಷಣದತ್ತ ಹೆಜ್ಜೆ ಇಟ್ಟ ವಿದ್ಯಾರ್ಥಿನಿ: ಪ್ರಾಂಶುಪಾಲರ ಮಾನವೀಯತೆಗೆ ಬೆಲೆ ಕಟ್ಟಲಾದ... ಕನಿಷ್ಠ ವಿದ್ಯಾರ್ಹತೆ SSLC ಪಾಸ್‌: ಡಿಪ್ಲೊಮಾ ಇನ್ ಕೋ ಆಪರೇಟಿವ್ ಮ್ಯಾನೇಜ್‌ಮೆಂಟ್ ಪ್ರವೇಶಕ್ಕೆ ಅರ್ಜಿ ಆಹ್ವಾನ ಕರ್ನಾಟಕದಲ್ಲಿ ‘ಕರ್ತವ್ಯ’ ಕ್ರಾಂತಿ: ಸ್ವದೇಶಿ ಎಐ ತಂತ್ರಜ್ಞಾನದ ಹೊಸ ಹೆಜ್ಜೆ