ಹಾಸನ: ಕೊರೊನಾ ವೈರಸ್ ಸಮಸ್ಯೆ ಎಲ್ಲೆಡೆ ತನ್ನ ಕರಾಳ ಹಸ್ತ ಚಾಚಿದ ಹಿನ್ನೆಯಲ್ಲಿ ಎಲ್ಲೆಡೆ ನಿರಾಸೆ ಮೂಡಿದ್ದರೇ ತೆಲಂಗಾಣ ಕಾರ್ಮಿಕರ ಮಕ್ಕಳ ಮುಖದಲ್ಲಿ ಮಂದಹಾಸ ಮೂಡಿಸಿದೆ.
ದೂರದ ಊರಿನಿಂದ ಕೆಲಸಕ್ಕೆಂದು ಬಂದ ಮೂವತ್ತೈದಕ್ಕೂ ಹೆಚ್ಚು ಕುಟುಂಬಗಳು ಹಳೆ ಅರಣ್ಯ ಇಲಾಖೆಯ ಗಂಧದ ಕೋಠಿಯಲ್ಲಿ ತಾತ್ಕಾಲಿಕ ಶೆಡ್ ಗಳಲ್ಲಿ ವಾಸವಿದ್ದಾರೆ.
ಕಷ್ಟದ ಕಾಲದಲ್ಲಿ ಇವರಿಗೆ ಹಾಸನ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯ ಆಯುಕ್ತ ವೀರಭದ್ರಪ್ಪ ಅವರು ಮತ್ತು ಸ್ಕೌಟ್ಸ್ ಅಧಿಕಾರಿಗಳು ಕಾರ್ಮಿಕರ ಮಕ್ಕಳಿಗೆ ಹೊಸ ಬಟ್ಟೆ ವಿತರಿಸಿದರು.
ರಾತ್ರಿ ಊಟದ ಜೊತೆಗೆ ಜಿಲೇಬಿ ಪಾಯಸ ಮತ್ತು ಬಾಳೆಹಣ್ಣು ಕೊಟ್ಟು ಕಾರ್ಮಿಕರ ಮುಖದಲ್ಲಿ ಮಂದಹಾಸ ಮೂಡಿಸಿದರು.
ಇವರ ಈ ಕಾರ್ಯದಲ್ಲಿ ವಾರ್ತಾ ಇಲಾಖೆ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದ ಕೊರೋನ ಸೈನಿಕರು ಸಹಕಾರ ನೀಡಿ ಸಾಮಾಜಿಕ ಅಂತರದ ಬಗ್ಗೆ ಜಾಗೃತಿ ಮೂಡಿಸಿದರು.