ಧಾರವಾಡ: ಲಾಕ್ ಡೌನ್ ಜಾರಿಯಿಂದಾಗಿ ದೂರದ ರಾಜಸ್ಥಾನದಲ್ಲಿದ್ದ ತಮ್ಮ ಪಾಲಕರನ್ನು ಸೇರಲಾಗದೇ ಆತಂಕಕ್ಕೀಡಾಗಿದ್ದ 10 ವರ್ಷದ ರೋಮುಕುಮಾರಿ,08 ವರ್ಷದ ಪೋಸುಕುಮಾರಿ ಇಬ್ಬರು ಬಾಲಕಿಯರು ಶುಕ್ರವಾರ ( ಮೇ8) ರಾತ್ರಿ, ರಾಜಸ್ಥಾನದ ಸಿರೋಹಿ ಜಿಲ್ಲೆಯ ಮೆಮಂಡ್ವಾರ ಗ್ರಾಮದಲ್ಲಿರುವ ಹೆತ್ತ ತಂದೆ ತಾಯಿಗಳ ಮಡಿಲು ಸೇರಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಿ: https://play.google.com/store/apps/detail
ಕಳೆದ ಐವತ್ತು ದಿನಗಳಿಂದ ಹೆತ್ತವರಿಂದ ಅಗಲಿದ್ದ ಈ ಮಕ್ಕಳನ್ನು ಅವರ ಪಾಲಕರೊಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ದೀಪಾ ಚೋಳನ್, ಹುಬ್ಬಳ್ಳಿ ಶಹರ ತಹಸೀಲ್ದಾರ್ ಶಶಿಧರ ಮಾಡ್ಯಾಳ ಸೇರಿದಂತೆ ಹಲವರು ವಿಶೇಷ ಪ್ರಯತ್ನ ಮಾಡಿದ್ದರು.
ಮೇ 7ರಂದು ಜಿಲ್ಲಾಧಿಕಾರಿ ಶುಭ ಹಾರೈಸಿ ಮಕ್ಕಳನ್ನು ಬೀಳ್ಕೊಟ್ಟಿದ್ದರು. ರಮೇಶ್ ರಾವಲ್ ತಮ್ಮ ಸ್ವಂತ ಕಾರನ್ನು ಸ್ವತಃ ಚಾಲನೆ ಮಾಡಿಕೊಂಡು ದೂರದ ರಾಜಸ್ಥಾನವರೆಗೆ ಹೋಗಿ ಮಕ್ಕಳನ್ನು ಕರೆತಂದು ಪಾಲಕರಿಗೆ ಒಪ್ಪಿಸಿದ್ದಾರೆ. ಮಕ್ಕಳು ತಲುಪಿರುವ ಕುರಿತು ರಾಜಸ್ಥಾನದ ಸಿರೋಹಿ ಜಿಲ್ಲಾಧಿಕಾರಿ ಭಗವತಿ ಪ್ರಸಾದ್ ಅವರು ಧಾರವಾಡ ಜಿಲ್ಲಾಧಿಕಾರಿಗೆ ಪತ್ರವನ್ನೂ ಸಹ ಬರೆದಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಿ: https://play.google.com/store/apps/detail