ಬೆಂಗಳೂರು: ಕೆ.ಆರ್.ಮಾರ್ಕೆಟ್ ಕಾರ್ಪೋರೇಟರ್ ನಾಜಿಮಾ ಖಾನ್ ಮೇಲೆ ಹಲ್ಲೆ ಮಾಡಿದ ಇನ್‍ಸ್ಪೆಕ್ಟರ್ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಟಿಪ್ಪು ನಗರದ ಮಹಿಳೆಯರು ಕಂಟೈನ್‍ಮೆಂಟ್ ಜೋನ್‌ನಲ್ಲೇ ಪ್ರತಿಭಟನೆ ನಡೆಸಿದರು.
ಶುಕ್ರವಾರ ಚಾಮರಾಜಪೇಟೆಯ ಇನ್‍ಸ್ಪೆಕ್ಟರ್ ಕುಮಾರಸ್ವಾಮಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನಾಜಿಮಾ ಖಾನ್ ಆರೋಪಿಸಿದ್ದರು. ಅದರಿಂದ ಬೇಸರಗೊಂಡ ನಾಜಿಮಾ ಖಾನ್ ಬೆಂಬಲಿಗ ಮಹಿಳೆಯರು ಹಲ್ಲೆ ಮಾಡಿರುವ ಇನ್‍ಸ್ಪೆಕ್ಟರ್ ವಿರುದ್ಧ ಇಂದು ಟಿಪ್ಪುನಗರದಲ್ಲಿ ಪ್ರತಿಭಟನೆ ನಡೆಸಿದ್ದು, ಸ್ಥಳಕ್ಕೆ ಶಾಸಕ ಜಮೀರ್ ಅಹಮದ್ ಬರುವಂತೆ ಒತ್ತಾಯಿಸಿದರು.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಲಾಕ್‍ಡೌನ್ ನಿಯಮ ಉಲ್ಲಂಘಿಸಿ ಕಂಟೈನ್‍ಮೆಂಟ್ ಜೋನ್‌ನಲ್ಲಿ ಕಾರ್ಪೋರೇಟರ್ ಓಡಾಡಿದ್ದರು ಎಂದು ಕರ್ತವ್ಯದಲ್ಲಿದ್ದ ಇನ್‍ಸ್ಪೆಕ್ಟರ್ ನಜಿಮಾ ಅವರ ಐಡಿ ಕಾರ್ಡ್ನ್ನು ವಶಕ್ಕೆ ಪಡೆದುಕೊಂಡಿದ್ದರು. ಆದರೆ ಇನ್‍ಸ್ಪೆಕ್ಟರ್ ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಮುಂದ್ದರು ಎಂದು ನಜಿಮಾ ಆರೋಪಿಸಿದ್ದಾರೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಒಬ್ಬ ಜನಪ್ರತಿನಿಧಿ ತಮ್ಮ ಏರಿಯಾದಲ್ಲಿ ಓಡಾಡಬಾರದು ಎಂದು ಪೊಲೀಸರು ತಡೆದರೆ ಬಡವರ ಸಮಸ್ಯೆಯನ್ನು ಆಲಿಸುವವರು ಯಾರು. ಬಡವರಿಗೆ ಸ್ಪಂದಿಸದಿದ್ದರೆ ಅವರ ಜೀವನದ ಗತಿಏನು ಎಂದು ಪ್ರತಿಭಟನಾಕಾರರು ಪೊಲೀಸರ ನಡೆಯನ್ನು ಖಂಡಿಸಿದ್ದು ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
Yatha raja thattha praje