ಪುಣೆ: ನಿತ್ಯ 9-10 ಕೆಜಿ ಬಂಗಾವರವನ್ನು ಮೈಮೇಲೆ ಹಾಕಿಕೊಂಡು ತಿರುಗಾಡುತ್ತಿದ್ದ ಗೋಲ್ಡ್ಮ್ಯಾನ್ ಹೃದಯಾಘಾತದಿಂದ ಇಂದು ಕೊನೆಯುಸಿರೆಳೆದಿದ್ದಾರೆ.
ಕತ್ತು, ಕೈ ಹೀಗೆ ದೇಹದ ನಾನಾ ಭಾಗದಲ್ಲಿ ಬರೋಬ್ಬರಿ 10 ಕೆಜಿ ಚಿನ್ನ ಧರಿಸುತ್ತಿದ್ದ ಈ ಕಾರಣಕ್ಕೆ ಗೋಲ್ಡ್ಮ್ಯಾನ್ ಎಂದೇ ಖ್ಯಾತಿ ಪಡೆದಿದ್ದ ಸಾಮ್ರಾಟ್ ಮೊಜೆ (39) ಪುಣೆಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ .
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ನಿನ್ನೆ ಹಠಾತ್ ಹೃದಯಘಾತವಾಗಿದೆ. ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು ಎಂದು ಕುಟುಂಬದ ಮೂಲಗಳು ಖಚಿತಪಡಿಸಿವೆ. ಇನ್ನು ಲಾಕ್ಡೌನ್ ಜಾರಿಯಲ್ಲಿದ್ದಿದ್ದರಿಂದ ಸಾಮ್ರಾಟ್ ಅವರ ಅಂತ್ಯಕ್ರಿಯೆ ಪುಣೆಯ ಯರವಾಡದಲ್ಲಿ ನೆರೆವೇರಿತು. .
ಗೋಲ್ಡ್ಮ್ಯಾನ್ ಎಂದ ಖ್ಯಾತಿ ಪಡೆದಿದ್ದ ಸಾಮ್ರಾಟ್ ದಪ್ಪದಾದ ಸರಗಳು , ಕೈಯಲ್ಲಿ ದಪ್ಪದ ಬ್ರಾಸ್ಲೈಟ್ಗಳನ್ನ ಧರಿಸಿಯೇ ಪುಣೆ ನಗರದಲ್ಲಿ ತಿರುಗಾಡುತ್ತಿದ್ದರು. ಈ ಹಿನ್ನೆಲೆ ಮೊಜೆ ಅವರನ್ನ ಜನರು ಗೋಲ್ಡ್ ಮ್ಯಾನ್ ಎಂದೇ ಕರೆಯುತ್ತಿದ್ದರು.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಇನ್ನಿಬ್ಬರು ಗೋಲ್ಡ್ಮ್ಯಾನ್ಗಳು ಇಲ್ಲ..!
ಮಹಾರಾಷ್ಟ್ರದಲ್ಲಿ ಸಾಮ್ರಾಟ್ ಮೊಜೆ ಅವರಂತೆ ಇನ್ನು ಹಲವರು 9 ರಿಂದ 10 ಕೆಜಿಯಷ್ಟು ಚಿನ್ನ ಧರಿಸಿ ಓಡಾಡುವ ಉದ್ಯಮಿಗಳಿದ್ದಾರೆ. ಆ ಪೈಕಿ ಈಗಾಗಲೇ ಇಬ್ಬರು ಮೃತಪಟ್ಟಿದ್ದಾರೆ. ಎಂಎನ್ಎಸ್ ಶಾಸಕ ರಮೇಶ್ ಎಂಬುವವರು ಕೂಡ ಇದೇ ರೀತಿ ಚಿನ್ನ ಧರಿಸುತ್ತಿದ್ದರು. ಅವರೂ 2011ರಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಇನ್ನು ಚಿನ್ನದ ಅಂಗಿ(ಶರ್ಟ್) ಧರಿಸುತ್ತಿದ್ದ ಉದ್ಯಮಿ ದತ್ತಾತ್ರೇಯ ಪುಂಗೆ ಎಂಬವರನ್ನು ದುಷ್ಕರ್ಮಿಗಳು 2016ರಲ್ಲಿ ಹತ್ಯೆಮಾಡಿದ್ದರು. ಇಂದು ಮೊಜೆ ನಿಧನರಾಗಿದ್ದು ಒಟ್ಟಾರೆ ಮೂವರು ಗೋಲ್ಡ್ ಮ್ಯಾನ್ಗಳನ್ನು ದೇಶ ಕಳೆದುಕೊಂಡಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
RIP