ನ್ಯೂಡೆಲ್ಲಿ: ಭಾರತೀಯ ಸಮುದ್ರ ತೀರ ರಕ್ಷಣಾ ಪಡೆಯ ಹಡಗು (ಐಸಿಜಿಎಸ್) ‘ಸಾಚೇತ್’ ಮತ್ತು 2 ಪ್ರತಿಬಂಧಕ ನಾವೆ (ಐಬಿಎಸ್) ಸಿ – 450 ಮತ್ತು ಸಿ – 451 ಗಳಿಗೆ ಗೋವಾದಲ್ಲಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಇಂದು ಚಾಲನೆ ನೀಡಿದರು.
ಐದು ಕಡಲಾಚೆಯ ಗಸ್ತು ಹಡಗುಗಳ (ಒಪಿವಿಗಳು) ಸರಣಿಯಲ್ಲಿ ಐಸಿಜಿಎಸ್ ಸಚೇತ್ ಮೊದಲನೇಯಾಗಿದ್ದು ಗೋವಾ ಶಿಪ್ ಯಾರ್ಡ್ ಲಿಮಿಟೆಡ್ (ಜಿ ಎಸ್ ಎಲ್) ಸ್ಥಳೀಯವಾಗಿ ಅದರ ವಿನ್ಯಾಸ ಮತ್ತು ನಿರ್ಮಾಣ ಕೆಲಸವನ್ನು ಮಾಡಿದೆ ಮತ್ತು ಇದರಲ್ಲಿ ಅತ್ಯಾಧುನಿಕ ನ್ಯಾವಿಗೇಶನ್ ಮತ್ತು ಸಂವಹನ ಪರಿಕರಗನ್ನು ಅಳವಡಿಸಲಾಗಿದೆ ಎಂದು ಈ ವೇಳೆ ಸಚಿವರು ತಿಳಿಸಿದರು.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಡಿಜಿಟಲ್ ಮಾಧ್ಯಮದ ಮೂಲಕ ಕಾರ್ಯಾರಂಭ ಮಾಡಿದ ಈ ಉಪಕ್ರಮಕ್ಕಾಗಿ ಐಸಿಜಿ ಮತ್ತು ಜಿ ಎಸ್ ಎಲ್ ನ್ನು ಶ್ಲಾಘಿಸಿದ ರಾಜ್ ನಾಥ್ ಸಿಂಗ್ “ಈ ಹಡಗುಗಳ ನಿಯೋಜನೆ ಭಾರತದ ಕರಾವಳಿ ತೀರದ ಸಾಮರ್ಥ್ಯ ಹೆಚ್ಚಿಸುವಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ ಅಲ್ಲದೆ ಕೋವಿಡ್ – 19 ರಂತಹ ಸವಾಲುಗಳಿದ್ದರೂ ನಮ್ಮ ದೇಶದ ಭದ್ರತೆ ಮತ್ತು ಸುರಕ್ಷತೆಗಾಗಿ ಬದ್ಧತೆ ಮತ್ತುದೃಢ ನಿರ್ಧಾರಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ, ‘ನಮ್ಮ ಸಮುದ್ರ ತೀರದ ರಕ್ಷಕರು,’ ಐಸಿಜಿ ಮತ್ತು ಭಾರತೀಯ ಹಡಗು ನಿರ್ಮಾಣ ುದ್ಯಮದಲ್ಲಿ ಹೆಚ್ಚುತ್ತಿರುವ ಶಕ್ತಿ ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸು ‘ಸಾಗರ್’ (ಸೆಕ್ಯುರಿಟಿ ಆಂಡ್ ಗ್ರೋತ್ ಫಾರ್ ಆಲ್ ಇನ್ ದಿ ರೀಜನ್) ಬಗ್ಗೆ ಉಲ್ಲೇಖಿಸಿದ ರಕ್ಷಣಾ ಸಚಿವರು, “ಸಾಗರಗಳು ಕೇವಲ ನಮ್ಮ ದೇಶಕ್ಕಷ್ಟೇ ಅಲ್ಲ ಜಾಗತಿಕ ಸಮೃದ್ಧಿಯ ಜೀವಾಳವಾಗಿವೆ” ಎಂದು ಹೇಳದರು. ಸುರಕ್ಷಿತ ಮತ್ತು ಸಂರಕ್ಷಿತ ಮತ್ತು ಸ್ವಚ್ಛ ಸಮುದ್ರಗಳು ರಾಷ್ಟ್ರ ನಿರ್ಮಾಣಕ್ಕೆ ಆರ್ಥಿಕ ಅವಕಾಶಗಳನ್ನು ಒದಗಿಸುತ್ತವೆ. ಭಾರತ ಉದಯೋನ್ಮುಖ ಸಮುದ್ರ ತೀರದ ಶಕ್ತಿಯಾಗಿದ್ದು ನಮ್ಮ ಸಮೃದ್ಧಿಯೂ ಸಹ ಸಮುದ್ರದ ಮೇಲೆ ಅವಲಂಬಿತವಾಗಿದೆ. ಜವಾಬ್ದಾರಿಯುತ ಸಮುದ್ರ ತೀರದ ಶಕ್ತಿಯಾಗಿರುವುದರಿಂದ ಸಾಗರಗಳು ಸರ್ಕಾರದ ಆದ್ಯತೆಯಾಗಿವೆ ಎಂದು ಹೇಳಿದರು.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ದೇಶದ್ರೋಹಿ ಶಕ್ತಿಗಳಿಂದ ಪ್ರಚೋದಿಸಲ್ಪಟ್ಟ ಯಾವುದೇ ಬಗೆಯ ಅಪಾಯಗಳಿಗೆ ಸಮುದ್ರ ಒಂದು ಮಾಧ್ಯಮವಾಗಬಹುದು ಎಂದು ರಕ್ಷಣಾ ಸಚಿವರು ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ ಎಲ್ಲ ಪಾಲುದಾರರೊಂದಿಗೆ ಸಹಕಾರಯುತ ಮತ್ತು ಜಂಟಿಯಾಗಿ ಕಾರ್ಯನಿರ್ವಹಿಸುವಂತಹ ವಿಧಾನವನ್ನು ಅಭಿವೃದ್ಧಿಪಡಿಸುವುದು ಬಹಳ ಮುಖ್ಯ. ಕಡಲ ತೀರದ ಭಯೋತ್ಪಾದನೆ, ಮಾದಕ ವಸ್ತುಗಳ ಕಳ್ಳ ಸಾಗಾಣೆ, ಕಳ್ಳ ಸಾಗಾಣೆ, ಸಮುದ್ರ ತೀರದಲ್ಲಿ ಕಾನೂನು ಜಾರಿಗೊಳಿಸುವುದು ಮತ್ತು ಬೆದರಿಕೆಗೆ ಒಳಗಾದಂತಹ ನಾವಿಕರನ್ನು ಹುಡುಕಿ, ಕಾಪಾಡುವಂಥ ಸವಾಲುಗಳನ್ನು ಎದುರಿಸಲು ಇಂದು ಕಡಲ ತೀರದ ರಕ್ಷಣಾ ನೌಕೆಗಳು ಸೇರ್ಪಡೆಗೊಂಡಿರುವುದು ಈ ನಿಟ್ಟಿನಲ್ಲಿ ಮತ್ತಷ್ಟು ಬಲ ನೀಡಿದ್ದು ಈ ಸವಾಲುಗಳನ್ನು ಎದುರಿಸುವಲ್ಲಿ ಸಹಕಾರಿಯಾ ಆಗಲಿದೆ ಎಂದು ಹೇಳಿದರು.
ಭಾರತೀಯ ಕಡಲ ತೀರ ಸಂರಕ್ಷಣಾ ಪಡೆಯ ಮಹಾನಿರ್ದೇಶಕ ಕೃಷ್ಣಸ್ವಾಮಿ ನಟರಾಜನ್, ಕೋವಿಡ್ – 19 ಸೃಷ್ಟಿಸಿದ ಅಡೆತಡೆಗಳ ನಡುವೆಯೂ ಐಸಿಜಿ, ಮುಂದೆ ಸಾಗುತ್ತಿದೆ ಎಂಬುದನ್ನು ಈ ನಿಯೋಜನೆ ಸಾಬೀತುಪಡಿಸಿದೆ ಎಂದು ಹೇಳಿದರು.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಐಸಿಜಿ ಹಡಗುಗಳ ಹೊಸ ಸೇರ್ಪಡೆ ಐಸಿಜಿಗೆ ಸಮುದ್ರದಲ್ಲಿ ನಿರಂತರ ನಿಗಾವಹಿಸಲು ಸಹಾಯ ಮಾಡುತ್ತದೆ ಮತ್ತು ಕೋವಿಡ್ – 19 ರ ವಿರುದ್ಧ ಹೋರಾಡಲು ರಾಷ್ಟ್ರಕ್ಕೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
105 ಮೀಟರ್ ಉದ್ದದ ಹಡಗು ‘ಸಚೇತ್’ ಸುಮಾರು 2,350ಟನ್ ಗಳನ್ನು ಸ್ಥಳಾಂತರಿಸುವ ಸಾಮರ್ಥ್ಯ ಹೊಂದಿದೆ, ಮತ್ತು 26 ನಾಟ್ ಗರಿಷ್ಟ ವೇಗ ಪಡೆಯಲು 9,100 ಕಿಲೊ ವ್ಯಾಟ್ನ ಸಾಮರ್ಥ್ಯದ 2 ಡಿಸೇಲ್ ಇಂಜಿನ್ ಗಳನ್ನು ಇದಕ್ಕೆಂದೇ ವಿನ್ಯಾಸಗೊಳಿಸಲಾಗಿದ್ದು 6000 ದೂರ ಕ್ರಮಿಸಬಲ್ಲ ಸಾಮರ್ಥ್ಯ ಹೊಂದಿದೆ.
ಇತ್ತೀಚಿನ ಉಪಕರಣಗಳು ಮತ್ತು ವ್ಯವಸ್ಥೆಗಳೊಂದಿಗೆ ಇದರ ಸುಸ್ಥಿರತೆ ಮತ್ತು ವ್ಯಾಪ್ತಿಯು ಮುನ್ನಡೆಸಬಹುದಾದ ವೇದಿಕೆಯ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಲು ಮತ್ತು ಐಸಿಜಿ ಚಾರ್ಟರ್ ಕೈಗೊಳ್ಳುವ ಕಾರ್ಯಗಳನ್ನು ಪೂರ್ಣಗೊಳಿಸಲು ಸಾಮರ್ಥ್ಯವನ್ನು ಒದಗಿಸುತ್ತದೆ. 2 ಇಂಜಿನ್ ವುಳ್ಳ ಹೆಲಿಕಾಪ್ಟರ್ ಮತ್ತು 4 ಅತಿ ವೇಗದ ಬೋಟ್ ಗಳನ್ನು ಮತ್ತು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ತ್ವರಿತಗತಿಯಲ್ಲಿ ಇಳಿಯಲು ಅನುಕೂಲವಾಗುವಂತಹ ಗಾಳಿ ತುಂಬಬಹುದಾದ ಒಂದು ಬೋಟ್ ಹೊಂದಿದ ಈ ನೌಕೆಯನ್ನು ವಿನ್ಯಾಸಗೊಳಿಸಲಾಗಿದೆ. ಕನಿಷ್ಟ ಪ್ರದೂಷಣೆ ಜವಾಬ್ದಾರಿಯನ್ನೂ ಮತ್ತು ಸಮುದ್ರದಲ್ಲಿ ತೈಲ ಸೋರಿಕೆಯಾಗುವುದನ್ನು ತಡೆಗಟ್ಟುವ ಸಾಮರ್ಥ್ಯವನ್ನೂ ಈ ಹಡಗು ಹೊಂದಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಸಚೇತ್ ಎಂದರೆ ಎಚ್ಚರಿಕೆ ಎಂದರ್ಥ. ಇದು ರಾಷ್ಟ್ರದ ಸಮುದ್ರ ತೀರದ ಹಿತಾಸಕ್ತಿಗೆ ‘ಸೇವೆ ಸಲ್ಲಿಸಲು ಮತ್ತು ರಕ್ಷಿಸಲು’ ಐಸಿಜಿ ಸದಾ ಸಿದ್ಧವಾಗಿರುತ್ತದೆ ಮತ್ತು ಆಸಕ್ತಿ ಹಾಗೂ ಬದ್ಧತೆಯನ್ನು ಹೊಂದಿದೆ. 11 ಅಧಿಕಾರಿಗಳು ಮತ್ತು 110 ಸಿಬ್ಬಂದಿ ನಿರ್ವಹಣೆಯ ಐಸಿಜಿ ಎಸ್ ಸಚೇತ್ ಅನ್ನು ಡೆಪ್ಯುಟಿ ಇನಸ್ಪೆಕ್ಟರ್ ಜನರಲ್ ರಾಜೇಶ್ ಮಿತ್ತಲ್ ಅವರು ಮುನ್ನಡೆಸುತ್ತಿದ್ದಾರೆ. ಕೋವಿಡ್ – 19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕಟ್ಟುನಿಟ್ಟಾದ ಸಾಮಾಜಿಕ ಅಂತರ ಕಾಪಾಡಿಕೊಂಡು ಡಿಜಿಟಲ್ ಮಾಧ್ಯಮದ ಮೂಲಕ ನೌಕೆಯನ್ನು ನಿಯೋಜಿಸುತ್ತಿರುವುದು ಭಾರತದ ಕಡಲ ತೀರದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಆಗಿದೆ ಎಂದು ಹೇಳಿದರು.
ರಕ್ಷಣಾ ಕಾರ್ಯದರ್ಶಿ ಡಾ. ಅಜಯ್ ಕುಮಾರ್, ಕಾರ್ಯದರ್ಶಿ (ರಕ್ಷಣಾ ಉತ್ಪಾದನೆ) ರಾಜ್ ಕುಮಾರ್, ಕಾರ್ಯದರ್ಶಿ (ರಕ್ಷಣಾ ಹಣಕಾಸು ಶ್ರೀಮತಿ ಗಾರ್ಗಿ ಕೌಲ್ ಮತ್ತು ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಗಳು ದೆಹಲಿಯಲ್ಲಿ ಹಾಜರಿದ್ದರೆ, ಸಹಾಯಕ ರಕ್ಷಣಾ ಸಚಿವ ಶ್ರೀಪಾದ್ ನಾಯಕ್, ಗೋವಾ ಶಿಪ್ ಯಾರ್ಡ್ ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಕಾಮ್ರೇಡ್ ಭರತ್ ಭೂಷಣ್ ನಾಗ್ಪಾಲ್ (ನಿವೃತ್ತ) ಗೋವಾದಲ್ಲಿ ಹಾಜರಿದ್ದರು.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail