CRIMENEWSನಮ್ಮಜಿಲ್ಲೆ

KKRTC: ಬಸ್‌ ತಡೆದು ನಿರ್ವಾಹಕನ ಮೇಲೆ ಕಿಡಿಗೇಡಿಗಳಿಂದ ಹಲ್ಲೆ- 3 ಸಾವಿರ ರೂ. ಚಿನ್ನದ ಸರ ಎಗರಿಸಿ ಪರಾರಿ: FIR ದಾಖಲು

ವಿಜಯಪಥ ಸಮಗ್ರ ಸುದ್ದಿ

ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್‌ ತಡೆದ ಕಿಡಿಗೇಡಿಗಳು ನಿರ್ವಾಹಕನ ಮೇಲೆ ಹಲ್ಲೆ ಮಾಡಿ, ಟಿಕೆಟ್‌ನಿಂದ ಸಗ್ರಹವಾಗಿದ್ದ 3 ಸಾವಿರ ರೂಪಾಯಿ ಹಾಗೂ ನಿರ್ವಾಹಕನ ಕೊರಳಲ್ಲಿದ್ದ ಚಿನ್ನದ ಸರವನ್ನು ಕಸಿದು ಪರಾರಿಯಾಗಿರುವ ಘಟನೆ ಸಿಂದಗಿ ತಾಲೂಕಿನ ಕನ್ನೊಳ್ಳಿಯಲ್ಲಿ ಬೆಳಕಿಗೆ ಬಂದಿದೆ.

KKRTC ಸಿಂದಗಿ ಘಟಕದ ಚಾಲಕ ಕಂ ನಿರ್ವಾಹಕ ಶಂಕರಗೌಡ ಶಿವಲಿಂಗಪ್ಪಗೌಡ ಪಾಟೀಲ ಎಂಬುವರೆ ಹಲ್ಲೆಗೊಳಗಾದವರು. ಐವರಿದ್ದ ಗುಂಪೊಂದು ನಿರ್ವಾಹಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಲ್ಲದೆ ಹಣ ಕಸಿದುಕೊಂಡು ಜೀವ ಬೆದರಿಕೆ ಕೂಡ ಹಾಕಿದ್ದಾರೆ ಪಾಪಿಗಳು.

ಘಟನೆಯಲ್ಲಿ ಟಿಕೆಟ್‌ನಿಂದ ಸಗ್ರಹವಾಗಿದ್ದ 3 ಸಾವಿರ ರೂಪಾಯಿ ನಗದು ಹಾಗೂ ಕೊರಳಲ್ಲಿದ್ದ ಚಿನ್ನದ ಸರವನ್ನು ಎಗರಿಸಿದ್ದಾರೆ ಎಂದು ನಿರ್ವಾಹಕ ಆರೋಪಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಪ್ಪ ಬಸಪ್ಪ ಚೌದರಿ, ಬಲಭೀಮ ಗೋಲ್ಲಾಳಪ್ಪ ಚೌದರಿ, ಗೋಲ್ಲಾಳಪ್ಪ ಬಸಪ್ಪ ಚೌದರಿ, ಪವನ ಗೋಲ್ಲಾಳಪ್ಪ ಚೌದರಿ ಹಾಗೂ ಮಲ್ಲು ಪೂಜಾರಿ ಎಂಬುವರ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಜು.19ರಂದು ಕನ್ನೊಳ್ಳಿ ಟೋಲ್‌ಗೇಟ್‌ನಲ್ಲಿ ಟೋಲ್ ಕಟ್ಟಲೆಂದು ಬಸ್ ನಿಲ್ಲಿಸಿದ ಸಂದರ್ಭ ಹಿಂದಿನಿಂದ ಟಂಟಂನಲ್ಲಿ ಬಂದ ಐವರು ಬಸ್‌ಗೆ ಕೈಯಿಂದ ಜೋರಾಗಿ ಬಡಿಯಲಾರಂಭಿಸಿದ್ದಾರೆ. ಬಸ್ ಮುಂದಕ್ಕೆ ತೆಗೆದುಕೊಂಡು ಹೋಗಿ ನಿಲ್ಲಿಸಿದ ಶಂಕರಗೌಡ ವಾಪಸ್ ಬಂದು ವಿಚಾರಿಸಿದಾಗ ಟಂಟಂದಲ್ಲಿದ್ದವರು ಹಲ್ಲೆ ಮಾಡಿದ್ದಾರೆ.

ಅಷ್ಟೇ ಅಲ್ಲದೆ ಬಸ್ ಕನ್ನೊಳ್ಳಿಗೆ ಬಂದು ನಿಂತಾಗ ಹಿಂದಿನಿಂದ ಬಂದ ಈ ಕಿಡಿಗೇಡಿಗಳು ಡ್ಯೂಟಿ ಮೇಲಿದ್ದ ಶಂಕರಗೌಡ ಅವರ ಅಂಗಿ ಕಾಲರ್ ಹಿಡಿದು ಎಳೆದಾಡಿ, ಕೊರಳಲ್ಲಿದ್ದ ಇಟಿಎಂ ಯಂತ್ರ ಕಸಿದುಕೊಂಡು ಒಡೆದು ಹಾಕಿದ್ದಾರೆ. ಆಗ ಸಂಸ್ಥೆಯ ಆದಾಯದ ಹಣ 3 ಸಾವಿರ ರೂಪಾಯಿ ಹಾಗೂ ಕೊರಳಲ್ಲಿದ್ದ ಚಿನ್ನದ ಸರ ಕಳೆದು ಹೋಗಿದೆ.

ಇಷ್ಟೆಲ್ಲ ಗಲಾಟೆ ಬಳಿಕ ಬಳಿಕವೂ ನೀನು ಇನ್ಮುಂದೆ ಈ ಊರ ಮೇಲೆ ಹೇಗೆ ಡ್ಯೂಟಿ ಮಾಡುತ್ತಿ ನೋಡುತ್ತೇವೆ ಎಂದು ಜೀವ ಬೆದರಿಕೆ ಹಾಕಿದ್ದಾರೆಂದು ಶಂಕರಗೌಡ ಸಿಂದಗಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

Megha
the authorMegha

Leave a Reply

error: Content is protected !!
Latest news
ಸಾರಿಗೆ ನೌಕರರಿಗೆ 26 ತಿಂಗಳ ವೇತನ ಹಿಂಬಾಕಿ ಪಾವತಿಗೆ ಮೊದಲ ಹಂತವಾಗಿ 450 ಕೋಟಿ ರೂ. ಬಿಡುಗಡೆ ಮಾಡಿದ ಸರ್ಕಾರ ! KSRTC: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಗುಡ್ಡಕ್ಕೆ ಡಿಕ್ಕಿ ಹೊಡೆದು ನಿಂತ ಬಸ್‌- ತಪ್ಪಿದ ಭಾರಿ ಅನಾಹುತ KSRTC ಪ್ರಮುಖ ಬೇಡಿಕೆಗಳ ಸರ್ಕಾರ ಇನ್ನೂ ನೌಕರರ ಶ್ರಮಕ್ಕನ್ವಯ ಇತ್ಯರ್ಥಪಡಿಸಿಲ್ಲ: ಜ್ಯೋತಿ ಅನಂತಸುಬ್ಬರಾವ್ ಅಸಮಾಧಾನ ಇಂದು ಸಾರಿಗೆ ಸಚಿವರ ಅಧ್ಯಕ್ಷತೇಲಿ ನೌಕರರ ವೇತನ ಹೆಚ್ಚಳ, 38 ತಿಂಗಳ ಹಿಂಬಾಕಿ ಕುರಿತು ಮತ್ತೇ ಒಕ್ಕೂಟದ ಜತೆ ಸಭೆ ಕೆಲ ಸಾರಿಗೆ ಅಧಿಕಾರಿಗಳಿಗೆ ವರದಾನವಾದ 17/1ನಿಯಮ- ಮೇ 10ರೊಳಗೆ ರದ್ದುಗೊಳಿಸಿ ಮೂಲ ಹುದ್ದೆಗೆ ನಿಯೋಜಿಸಲು ಎಂಡಿಗೆ ಸಾರಿ... ನಾಲ್ಕೂ ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆ ಓಕೆನಾ ಅಥವಾ ವೇತನ ಆಯೋಗನಾ? ನೌಕರರ ಅಭಿಪ್ರಾಯವೇನು? KKRTC ವಿಜಯಪುರ: ಪ್ರತಿಷ್ಠಿತ ಸಾರಿಗೆ ಕಲ್ಯಾಣ ರಥ ಸ್ವಂತಕ್ಕೆ ಬಳಸುತ್ತಿರುವ ಕೆಲ ಅಧಿಕಾರಿಗಳು- ಮೌನವಾಗಿರುವ ಡಿಸಿ ಅಮಾ... ಕೇಂದ್ರ ಸರ್ಕಾರ 1966ರ ಸಕ್ಕರೆ ನಿಯಂತ್ರಣ ಕಾಯ್ದೆ ಬಗ್ಗೆ ಕೇಳಿರುವ ಅಭಿಪ್ರಾಯಕ್ಕೆ ರಾಜ್ಯ ಸರ್ಕಾರ ಸಮಿತಿ ರಚಿಸಿ ವರದಿ ... ಮೇ 15ರೊಳಗೆ ಡಿಕೆಶಿಗೆ ಹೈಕಮಾಂಡ್​ನಿಂದ ಸಿಗಲಿದೆಯೇ ಬಿಗ್ ಬರ್ತ್​ಡೇ ಗಿಫ್ಟ್? ನಿಗೂಢವಾಗಿ ಮೃತಪಟ್ಟ ಪ್ರತಿಷ್ಠಿತ ಖಾಸಗಿ ಕಂಪನಿಯೊಂದರ ಮಹಿಳಾ ಉದ್ಯೋಗಿ: ಬೆತ್ತಲೆ, ಅರೆಕೊಳೆತ ಸ್ಥಿತಿಯಲ್ಲಿ ಪತ್ತೆ