ನ್ಯೂಡೆಲ್ಲಿ: ದೇಶದಲ್ಲಿ ಕೊರೊನಾ ಮಹಾಮಾರಿ ತನ್ನ ಅಟ್ಟಹಾಸ ಮುಂದುವರಿಸಿದ್ದು, ಸೋಂಕಿತರ ಸಂಖ್ಯೆ 90 ಸಾವಿರ ಗಡಿಯನ್ನು ದಾಟಿದೆ. ಈ ಮೂಲಕ ನಿತ್ಯ ತನ್ನ ರೌದ್ರ ನರ್ತನಕ್ಕೆ ಮತ್ತಷ್ಟು ವೇಗ ಕೊಟ್ಟಿದ್ದು ಜನರನ್ನು ಆತಂಕ ಮಡುವಿಗೆ ದೂಡುವಲ್ಲಿ ಸಫಲವಾಗುತ್ತಿದೆ.
ಹೌದು ಈ ವರೆಗೆ 90,927 ಮಂದಿಯಲ್ಲಿ ಒಳಹೊಕ್ಕಿರುವ ಕೊರೊನಾ ವೈರಸ್ ಸೋಂಕಿತರ ಅಕ್ಕಪಕ್ಕದಲ್ಲಿರುವವರನ್ನು ಕಾಡುವಲ್ಲಿ ಮುಂದಾಗುತ್ತಿದೆ. ಇನ್ನು ನಿನ್ನೆ ಒಂದೇ ದಿನ ದೇಸದಲ್ಲಿ 280 ಜನರನ್ನು ಬಲಿಪಡೆದಿದ್ದು, ಈ ವರೆಗೆ 2,872 ಮಂದಿ ಮೃತಪಟ್ಟಿದ್ದಾರೆ.
34,224 ಮಂದಿ ಕೊರೊನಾದಿಂದ ಪಾರಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಇನ್ನೂ 53,831 ಜನರು ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ಇದನ್ನು ಮಟ್ಟಹಾಕಲು ಸೂಕ್ತ ಚಿಕಿತ್ಸೆ ಇಲ್ಲದಿರುವುದರಿಂದ ಜೋರಾಗಿ ಗುಡುಗುವ ಮೂಲಕ ಕೇಕೆ ಹಾಕುತ್ತಾ ಸರವೇಗದಲ್ಲೇ ಮುನ್ನುಗುತ್ತಿದೆ. ಇದರಿಂದ ನಿನ್ನೆ ಒಂದೇ ದಿನ ಸುಮಾರು 5000 ಮಂದಿಯನ್ನು ತನ್ನ ತೆಕ್ಕೆಯೊಳಕ್ಕೆ ತೆಗೆದುಕೊಂಡು ಕೊಡಬಾರದ ಹಿಂಸೆ ನೀಡುತ್ತಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಇದರಿಂದ ಇಡೀ ದೇಶದ ಆರ್ಥಿಕ ವ್ಯವಸ್ಥೆಯೇ ನೆಲಕಚ್ಚುವ ಹಂತಕ್ಕೆ ತಲುಪಿದೆ. ಆದರೂ ಕೃಷಿ ಕ್ಷೇತ್ರದಲ್ಲಿ ಯಾವುದೇ ಕೊರತೆ ಇಲ್ಲದಂತೆ ನಮ್ಮ ಅನ್ನದಾತರು ಬೆಳೆಗಳನ್ನು ಬೆಳೆಯುತ್ತಿರುವುದರಿಂದ ನಿತ್ಯದ ಆಹಾರಕ್ಕೆ ಯಾವುದೇ ತೊಂದರೆ ಅಗುತ್ತಿಲ್ಲ. ಆದರೆ ಆರ್ಥಿಕವಾಗಿ ಸ್ವಲ್ಪ ಹಿನ್ನಡೆಯನ್ನು ಜಾಗತಿಕ ಮಟ್ಟದಲ್ಲಿ ಎದುರಿಸಬಹುದು ಎಂದು ಹೇಳಲಾಗುತ್ತಿದೆ.
ಇನ್ನೂ ಎರಡು ವರ್ಷಕ್ಕೆ ಸಾಕಾಗುವಷ್ಟು ಆಹಾರ ಪದಾರ್ಥಗಳ ದಾಸ್ತಾನು ದೇಶದಲ್ಲಿ ಇದೆ. ಇದರಿಂದ ದೇಶದ ಯಾವುದೇ ಪ್ರಜೆಯೂ ಆಹಾರವಿಲ್ಲದೆ ನರಳಬಾರದು ಎಂಬ ದೃಷ್ಟಿಯನ್ನು ಹೊಂದಲಾಗಿದೆ. ಆದರೆ ಅದು ಹಸಿದವರಿಗೆ ಸರಿಯಾದ ಸಮಯಕ್ಕೆ ತಲುಪಿಸುವಲ್ಲಿ ಆಡಲಿತ ರೂಢಪಕ್ಷಗಳ ನಾಯಕರು ಮತ್ತು ಸ್ಥಳೀಯ ಸರ್ಕಾರಿ ಸಂಸ್ಥೆಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಅದಕ್ಕೆ ವಿಪಕ್ಷ ಸ್ಥಾನದಲ್ಲಿರುವ ಜನನಾಯಕರು ಕಾಳಜಿ ವಹಿಸಬೇಕಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ನಮ್ಮ ದೇಶದಲ್ಲಿ ಆಹಾರದ ಕೊರತೆ ಇಲ್ಲದಿದ್ದರೂ ಕೆಲ ಕಿಡಿಗೇಡಿಗಳು ನಾವು ಏನೋ ಸಾಧಿಸುತ್ತೇವೆ ಎಂಬ ಭ್ರಮೆಯಲ್ಲಿ ಸರ್ಕಾರ ಬಡವರಿಗೆ ಕೊಡುವ ಆಹಾರವನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡು ಹಸಿವಿನಿಂದ ಜನರು ನರಳುವಂತೆ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಎಲ್ಲಾ ಪಕ್ಷಗಳ ಮತ್ತು ಸ್ಥಳೀಯವಾಗಿ ಗ್ರಾಮೀಣ ಭಾಗದ ಊರುಗಳ ಮುಖಂಡರ ಪಾತ್ರವು ಹಿರಿದಾಗಿದ್ದು, ಅವರು ಅರ್ಹರಿಗೆ ಆಹಾರದ ಕಿಟ್ ತಲುಪುವಂತೆ ನೋಡಿಕೊಳ್ಳಬೇಕಿದೆ.
ಇದರಿಂದ ದೇಶದ ಪ್ರತಿಯೊಬ್ಬ ಪ್ರಜೆಯೂ ಜೀವಿಸಲು ಅವಕಾಶ ನೀಡಿದಂತ್ತಾಗುತ್ತದೆ. ಆದ್ದರಿಂದ ಉಳ್ಳವರು ದೇವರಿಗೆ ಹೊತ್ತಿರುವ ಹರಕೆ ಎಂದು ಭಾವಿಸಿಯಾದರೂ ತಮ್ಮೂರಿನಲ್ಲಿ ಒಂದು ಹೊತ್ತಿನ ಊಟಕ್ಕಾಗಿ ಪರಿತಪ್ಪಿಸುವವರ ನೆರವಿಗೆ ಧಾವಿಸಬೇಕು. ಇದರಿಂದ ನಿಮ್ಮ ಕೊಡುವ ಕೈಗಳಿಗೆ ಇನ್ನಷ್ಟು ಬಲ ಬರಲಿದೆ ಎಂಬುವುದು ಆ ಹಸಿದವರ ಮನದಾಳ ಜತೆಗೆ ಪ್ರಕೃತಿದತ್ತಾವಾಗಿಯೂ ಇದು ಸತ್ಯವಾದದ್ದು.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail