ಬೆಂಗಳೂರು: ನಮ್ಮ ಪಕ್ಷದ ಕೆಲವು ಶಾಸಕರೊಂದಿಗೆ ಚರ್ಚಿಸಲು ನಾನು ತುರ್ತು ಸಭೆ ಕರೆದಿದ್ದೇನೆ ಎನ್ನುವ ಸುದ್ದಿ ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವುದನ್ನು ಗಮನಿಸಿದ್ದೇನೆ. ಇದು ಸತ್ಯಕ್ಕೆ ದೂರವಾದ ಸಂಗತಿ. ಅಂತಹ ಯಾವುದೇ ಸಭೆಯನ್ನು ನಾನು ಕರೆದಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇನೆ ಎಂದು ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಈ ಬಗ್ಗೆ ತಮ್ಮ ಟ್ವಿಟ್‌ನಲ್ಲಿ ತಿಳಿಸಿರುವ ಅವರು, ನಮ್ಮಲ್ಲಿ ಯಾವುದೇ ಭಂಡಾಯ ಶಾಸಕರು ಇಲ್ಲ. ಭಿನ್ನಮತ ಇಲ್ಲ ಹೀಗಾಗಿ ನಾನು ಯಾವ ಶಾಸಕರ ಸಭೆಯನ್ನು ಕರೆದಿಲ್ಲ. ನಾವು ಸಭೆ ಕರೆದಿದ್ದೇವೆ ಎಂದು ಮಾಧ್ಯಮಗಳಲಿ ಬರುತ್ತಿರುವುದು ಸುಳ್ಳು ಎಂದು ತಿಳಿಸಿರುವ ಅವರು, ಈ ಹಿಂದೆ ಸರ್ಕಾರದಿಂದ ನಿಗದಿಯಾಗಿರುವ ಸಭೆಯಲ್ಲಿ ಭಾಗವಹಿಸುತ್ತಿದ್ದೇವೆ. ಅದನ್ಜು ಬಿಟ್ಟು ಬೇರೆ ಯಾವುದೇ ವಿಷಯವಿಲ್ಲ ಎಂದು ತಿಳಿಸಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail