NEWSಕ್ರೀಡೆದೇಶ-ವಿದೇಶ

ಕೊರೊನಾ ಸೋಂಕಿಗೆ ಬೆಚ್ಚಿದ ಕ್ರಿಕೆಟಿಗರು

ಇಂಗ್ಲೆಂಡ್‌ ಪ್ರವಾಸದಿಂದ ಹಿಂದೆ ಸರಿದ ಅಮೀರ್‌, ಸೋಹೇಲ್‌

ವಿಜಯಪಥ ಸಮಗ್ರ ಸುದ್ದಿ

ಲಾಹೋರ್: ಇಂಗ್ಲೆಂಡ್ ಪ್ರವಾಸ ಕೈಗೊಳ್ಳುವ ಪಾಕ್ ತಂಡದಿಂದ ಪಾಕಿಸ್ತಾನ ತಂಡದ ಮಧ್ಯಮ ಕ್ರಮಾಂಕದ ಆಟಗಾರ ಹ್ಯಾರಿಸ್ ಸೊಹೇಲ್  ಹಿಂದೆ ಸರಿದಿದ್ದಾರೆ.

ಕೊರೊನಾ ಸೋಂಕು ಆತಂಕದ ಕಾರಣ ನೀಡಿ ಅವರು ಹಿಂದೆ ಸರಿದಿದ್ದು, ಈ ಮೂಲಕ ಆಟವಾಡಲು ಹಿಂದೆ ಸರಿದ ಮೊದಲ ಆಟಗಾರ ಎನಿಸಿದ್ದಾರೆ.

ಪ್ರಮುಖ ವೇಗದ ಬೌಲರ್ ಮಹಮ್ಮದ್ ಅಮೀರ್ ಕೂಡ ವೈಯಕ್ತಿಕ ಕಾರಣ ನೀಡಿ ಹಿಂದೆ ಸರಿದಿದ್ದಾರೆ ಎಂದು ಪಾಕ್ ಕ್ರಿಕೆಟ್ ಮಂಡಳಿ ವಕ್ತಾರರು ತಿಳಿಸಿದ್ದಾರೆ. ಅಮೀರ್ ಅವರ ಮನೆಗೆ ಆಗಸ್ಟ್‌ನಲ್ಲಿ ಎರಡನೇ ಅತಿಥಿ ಆಗಮನವಾಗುವ ನಿರೀಕ್ಷೆಯಲ್ಲಿರುವುದರಿಂದ ತಮ್ಮ ಗರ್ಭಿಣಿ ಪತ್ನಿ ಕಡೆ ಹೆಚ್ಚಿನ ಗಮನ ಕೊಡಬೇಕಾಗಿದೆ. ಈ ಕಾರಣದಿಂದ ಪಂದ್ಯದಲ್ಲಿ ಭಾಗವಹಿಸಲು ಆಗುತ್ತಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಆಮೀರ್ ಟೆಸ್ಟ್ ಕ್ರಿಕೆಟ್ ನಿಂದ ಕಳೆದ ವರ್ಷ ನಿವೃತ್ತಿ ಘೋಷಿಸಿದ್ದು ಟ್ವೆಂಟಿ-20 ಸರಣಿಯಲ್ಲಿ ಆಡಬೇಕಿತ್ತು. ಪಾಕಿಸ್ತಾನ ತಂಡವು ಆಗಸ್ಟ್ ಹಾಗೂ ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್ ಎದುರು ನಡೆಯಲಿರುವ ತಲಾ ಮೂರು ಪಂದ್ಯಗಳ ಟೆಸ್ಟ್ ಹಾಗೂ ಟ್ವೆಂಟಿ -20 ಸರಣಿ ಆಡಲಿದ್ದು 28 ಆಟಗಾರರು ಹಾಗೂ 14 ನೆರವು ಸಿಬ್ಬಂದಿಯನ್ನು ಕಳುಹಿಸಲಿದೆ.

ಈ ಮೊದಲೇ ವಿಶ್ವ ಮಾರಿ ಕೊರೊನಾ ಪ್ರಕರಣವು ಏರುಗತಿಯಲ್ಲಿ ಸಾಗುತ್ತಿರುವ ಕಾರಣ ಪಾಕ್ ತಂಡವು ತನ್ನ ತರಬೇತಿ ಶಿಬಿರವನ್ನು ರದ್ದುಗೊಳಿಸಿತ್ತು. ವೆಸ್ಟ್ ಇಂಡೀಸ್ ತಂಡದ ಮೂವರು ಆಟಗಾರರಾದ ಡ್ಯಾರೆನ್ ಬ್ರೇವೋ, ಸಿಮ್ರಾನ್ ಹೆಟ್ಮೇಯರ್‌ ಮತ್ತು ಕಿಮೋ ಪಾಲ್ ಅವರು  ಇಂಗ್ಲೆಂಡ್ ಪ್ರವಾಸದಿಂದ ಹಿಂದೆ ಸರಿಯುವುದಾಗಿ ಕಳೆದ ತಿಂಗಳು ಪ್ರಕಟಿಸಿದ್ದರು. ವೆಸ್ಟ್ ಇಂಡೀಸ್ ಈಗಾಗಲೇ ಇಂಗ್ಲೆಂಡ್ ತಲುಪಿದ್ದು ಜುಲೈ 8 ರಿಂದ ಸೌತಾಂಪ್ಟನ್‌ನಲ್ಲಿ ಮೊದಲ ಟೆಸ್ಟ್ ಆಡಲಿದೆ.

Leave a Reply

error: Content is protected !!
LATEST
KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ ಮೇಲುಸೇತುವೆ-ಕೆಳಸೇತುವೆಗಳ ನಿರ್ವಹಣೆ ಸರಿಯಾಗಿ ಮಾಡಿ: ತುಷಾರ್ ಗಿರಿನಾಥ್ ದೆಹಲಿ ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಅತಿಶಿ: ಎಎಪಿ ನಾಯಕರ ಸಭೆಯಲ್ಲಿ ನಿರ್ಧಾರ BMTC 1500 ನಿವೃತ್ತ ನೌಕರರ ಗ್ರಾಚ್ಯುಟಿ, EL ಹಣ 400 ಕೋಟಿ ರೂ.ಬಾಕಿ: 16-18 ತಿಂಗಳಿನಿಂದ ಕೇಂದ್ರ ಕಚೇರಿಗೆ ಅಲೆದಾಟ!! ಸುಪ್ರೀಂ ಕೋರ್ಟ್ ಅಧಿಕೃತ  ಭಾಷೆ ಇಂಗ್ಲಿಷ್- ಹಿಂದಿಯಲ್ಲಿ ವಾದಕ್ಕೆ ಅನುಮತಿ ಇಲ್ಲ: ವಕೀಲರಿಗೆ ನೆನಪಿಸಿದ ಕೋರ್ಟ್‌ ಕೃಷಿ ಉತ್ಪನ್ನಗಳ ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ಖರೀದಿ ಮಾಡದಂತ ಕಟ್ಟುನಿಟ್ಟಿನ ಕಾನೂನು ಜಾರಿಗೆ ರೈತ ಮುಖಂಡರ ಆಗ್ರಹ KSRTC ಬಸ್‌ -ಕಾರು ನಡುವೆ ಅಪಘಾತ: ಅನಾರೋಗ್ಯದ ನಡುವೆ ಕಾರು ಚಲಾಯಿಸಿದ ಪತಿ ಮೃತ- ಪತ್ನಿ ಪ್ರಾಣಾಪಾಯದಿಂದ ಪಾರು