ಬೆಲ್ಗ್ರೇಡ್: ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರ ನೋವಾಕ್ ಜೋಕೊವಿಚ್ ಅವರು ಬೆಲ್‌ಗ್ರೇಡ್‌ನಲ್ಲಿ ಕೊರೊನಾ ಟೆಸ್ಟ್ ಗೆ ಒಳಗಾಗಿದ್ದು ಪಾಸಿಟಿವ್ ಎಂದು ವರದಿ ಬಂದಿದೆ.
ಜೊಕೊವಿಕ್ ಪತ್ನಿ ಜೆಲೆನಾಗೂ ಕೊರೊನಾ ಪಾಸಿಟಿವ್ ಬಂದಿದ್ದೂ ಮಕ್ಕಳ ವರದಿ ನೆಗೆಟಿವ್ ಬಂದಿದೆ ಎಂದು ತಿಳಿಸಿದ್ದಾರೆ.
ಇನ್ನು 14 ದಿನಗಳು ಕ್ವಾರಂಟೈನ್ ನಲ್ಲಿರುವುದಾಗಿ ತಿಳಿಸಿರುವ ಅವರು ದಿನಕ್ಕೊಮ್ಮೆ ಕೊರೊನಾ ಟೆಸ್ಟ್ ಗೆ ಒಳಗಾಗುವುದಾಗಿ ಹೇಳಿದ್ದಾರೆ.
ವಿಶ್ವ ಟೆನಿಸ್ ಸಂಸ್ಥೆ ಕೊರೊನಾ ಸೋಂಕು ಭೀತಿಯಿಂದ ಪಂದ್ಯಾವಳಿಯನ್ನು ರದ್ದು ಗೊಳಿಸಿದೆ. ಈ ನಡುವೆ ಕ್ರೀಡೆಯನ್ನು ಉತ್ತೇಜಿಸಲು ಮತ್ತು ಅಗತ್ಯವಿರುವವರಿಗೆ ಹಣ ಸಂಗ್ರಹಿಸಲು ಜೊಕೊವಿಕ್ ಆಡ್ರಿಯಾ ಟೂರ್ ಟೆನಿಸ್ ಪಂದ್ಯಾವಳಿ ಆಯೋಜಿಸಿದ್ದರು. ಆದರೆ ಅವರಿಗೇ ಕೊರೊನಾ ದೃಢಪಟ್ಟಿರುವುದರಿಂದ ಸಂಕಷ್ಟದಲ್ಲಿ ಇರುವ ಕ್ರೀಡಾಪಟುಗಳ ಸಮಸ್ಯೆ ಇನ್ನಷ್ಟು ಹೆಚ್ಚಾದಂತ್ತಾಗಿದೆ.
Idu korona mahamaari yarannu biduvudilla antha narthisuthide