ದಾವಣಗೆರೆ: ಖಾಸಗಿ ಲ್ಯಾಬ್ ನಲ್ಲಿ ಆದ ಎಡವಟ್ಟಿನಿಂದ ಏಳು ದಿನದ ಹಸುಗೂಸು ತಾಯಿಯ ಹಾಲಿಲ್ಲದೆ ಮೃತಪಟ್ಟಿರುವ ಧಾರುಣ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಕಳೆದ 15ದಿನದ ಹಿಂದೆ ಹಿಂದೆ ಗರ್ಭಿಣಿಯ ಸ್ವಾಬ್ ಟೆಸ್ಟ್ ಮಾಡಿದ ಖಾಸಗಿ ಲ್ಯಾಬ್ ನವರು ಆಕೆಗೆ ಕೊರೊನಾ ಇಲ್ಲದಿದ್ದರು, ಪಾಸಿಟಿವ್ ಇದೆ ಎಂದು ವರದಿಕೊಟ್ಟಿರು, ಇದರಿಂದ ಆಕೆಯನ್ನು ಕೋವಿಡ್ ಆಸ್ಪತ್ರೆಯಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಈ ನಡುವೆ ಕಳೆದ ಏಳು ದಿನಗಳಲ್ಲಿ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದರು.
ಈ ನವ ಜಾತಶಿಶುವಿಗೆ ಕೊರೊನಾ ಬರುತ್ತದೆ ಎಂದು ಕೋವಿಡ್ ಆಸ್ಪತ್ರೆಯಲ್ಲಿ ಅಮ್ಮನಿಂದ ಮಗುವನ್ನು ದೂರ ಇಟ್ಟಿದ್ದರು. ಇದರಿಂದ ಮಗುವಿಗೆ ಸರಿಯಾದ ಹಾಲು ಸಿಗದೆ ಮೃತಪಟ್ಟಿದೆ. ಇದರಿಂದ ಕುಟುಂಬದವರು ಗೋಳಾಡುತ್ತಿದ್ದಾರೆ.
ವಿಪರ್ಯಾಸ ಎಂದರೆ ನಿಜವಾಗಲೂ ಆ ತಾಯಿಗೆ ಕೊರೊನಾ ಪಾಸಿಟಿವ್ ಇಲ್ಲ ಎಂದು ಸರ್ಕಾರಿ ಲ್ಯಾಬ್‌ನಲ್ಲಿ ವರದಿ ಬಂದಿದೆ. ಆದರೂ ಆಕೆಯನ್ನು ಮಗು ನೋಡಲು ಆಸ್ಪತ್ರೆಯ ಸಿಬ್ಬಂದಿ ಬಿಟ್ಟಿಲ್ಲ. ಇದರಿಂದ ಮಗು ಅಸುನೀಗಿದೆ. ಅಲ್ಲದೆ ಆ ಕಂದಮ್ಮ ಮೃತಪಟ್ಟ ಮೇಲು ಅದನ್ನು ನೋಡಲು ತಾಯಿಯನ್ನು ಬಿಡಲೇ ಇಲ್ಲ. ಇದು ಮನೆಯವರ ಆಕ್ರೋಶಕ್ಕೂ ಕಾರಣವಾಗಿದೆ.
ಇನ್ನು ಈ ಖಾಸಗಿ ಲ್ಯಾಬ್ ನವರು ಮಾಡಿದ ಎಡವಟ್ಟಿನಿಂದ ನವಜಾತ ಶಿಶು ತಾಯಿಯ ಅಪ್ಪುಗೆ, ಹಾಲು ಇಲ್ಲದೆ ಹಸಿವಿನಿಂದ ಬಳಲಿ ಮೃತಪಟ್ಟಿರುವುದು ಎಲ್ಲರ ಕಣ್ಣಾಲೆಗಳನ್ನು ತೇವಮಾಡದೆ ಇರದು. ಇತ್ತ ಹಸುಗೂಸನ್ನು ಕಳೆದು ಕೊಂಡ ಕುಟುಂಬ ಶೋಕದಲ್ಲಿ ಮುಳುಗಿದೆ.
Bejavabdari sarkara kelsanu age agide bidu