ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಬೋನಸ್ ಕೊಟ್ಟಿಲ್ಲ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಎಲೆಕ್ಟ್ರಿಕ್ ಬಸ್ ಚಾಲಕರು ಡಿಪೋದಿಂದ ಬಸ್‌ಗಳನ್ನು ಹೊರತೆಗೆಯದೆ ಪ್ರತಿಭಟನೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಮಧ್ಯಾಹ್ನ ನಗರದ ಯಲಹಂಕದಲ್ಲಿರುವ ಬಿಎಂಟಿಸಿ 30ನೇ ಘಟಕದ ಎಲೆಕ್ಟ್ರಿಕ್ ಬಸ್ ಚಾಲಕರು 70ಕ್ಕೂ ಹೆಚ್ಚು ಬಸ್‌ಗಳನ್ನು ಹೊರತೆಗೆಯದೆ ಪ್ರತಿಭಟ ಮಾಡಿದ್ದು, ನಮಗೆ ಕೊಡಬೇಕಿರುವ ಬೋನಸ್ ಕೊಡುವವರೆಗೂ ನಾವು ಡ್ಯೂಟಿಗೆ ಹೋಗುವುದಿಲ್ಲ ಎಂದು ಪಟ್ಟುಹಿಡಿದು ಕುಳಿತ್ತಿದ್ದರು.
ಈ ವೇಳೆ ಗುತ್ತಿಗೆದಾರರ ವ್ಯವಸ್ಥಾಪಕರು ಸ್ಥಳಕ್ಕೆ ಬಂದು ಪ್ರತಿಭಟನೆ ನಿರತ ಚಾಲಕರಲ್ಲಿ ಬೋನಸ್ ಕೊಡುವುದಕ್ಕೆ ಸಮಯಕೊಡಿ ಈಗ ಬಸ್ ತೆಗೆಯಿತಿ ಎಂದು ಮನವಿ ಮಾಡಿದ್ದರಿಂದ ಸಂಜೆ ಸುಮಾರು 5.30ರ ಬಳಿಕ ಪ್ರತಿಭಟನೆ ಕೈಬಿಟ್ಟು ಡ್ಯೂಟಿಗೆ ಹೋಗಿದ್ದಾರೆ.
ಇನ್ನು ಮೊನ್ನೆ ಇದೇರೀತಿ ಬೋನಸ್ ಕೊಟ್ಟಿಲ್ಲ ಎಂದು 120ಕ್ಕೂ ಹೆಚ್ಚು ಬಸ್‌ಗಳನ್ನು ನಿಲ್ಲಿಸಿ ಜಯನಗರದಲ್ಲಿರುವ ಬಿಎಂಟಿಸಿ ಘಟಕ-4ರಲ್ಲೂ ಚಾಲಕರು ಡಿಪೋದಿಂದ ಹೊರಗೆ ಬಸ್ ತೆಗೆಯದೆ ತಮ್ಮ ಆಕ್ರೋಶ ಹೊರಹಾಕಿದ್ದರು.
ಬೋನಸ್ ಕೊಡೋವರೆಗೂ ನಾವು ಬಸ್ ತೆಗೆಯಲ್ಲ ಎಂದು ಚಾಲಕರು ಪಟ್ಟು ಹಿಡಿದಿದ್ದರ ಪರಿಣಾಮ, ಬಸ್‌ಗಳು ಡಿಪೋದಲ್ಲಿ ನಿಂತಿತ್ತವು. ಎಲೆಕ್ಟ್ರಿಕ್ ಬಸ್ ಚಾಲಕರು ಗುತ್ತಿಗೆದಾರರ ಸಂಸ್ಥೆ ವಿರುದ್ಧ ಆಕ್ರೋಶ ಹೊರ ಹಾಕಿದ್ದರು.

ಆ ಬಳಿಕ ಜಯನಗರದಲ್ಲೂ ಗುತ್ತಿಗೆದಾರರ ವ್ಯವಸ್ಥಾಪಕರು ಬಂದು ಬೋನಸ್ ಕೊಡುವುದಕ್ಕೆ ಕಾಲವಕಾಶ ಕೇಳಿ ಮನವಿ ಮಾಡಿದ ಬಳಿಕ ಪ್ರತಿಭಟನಾ ನಿರತರು ಡ್ಯೂಟಿಗೆ ಮರಳಿದ್ದರು.
ಇತ್ತ ಚಾಲಕರು ಬೋನಸ್ ಕೊಟ್ಟಿಲ್ಲ ಎಂದು ಪ್ರತಿಭಟನೆಗಿಳಿದ ಪರಣಾಮ ಕೆಲ ಭಾಗದ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಅಲ್ಲದೆ, ಆದರೆ ಸಂಜೆ ಬಳಿಕ ಬಸ್‌ಗಳು ರಸ್ತೆಗಳಿದ ಪರಿಣಾಮ ಸದ್ಯ ಎಲ್ಲವೂ ಸರಿಯಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
Related
