NEWSನಮ್ಮಜಿಲ್ಲೆನಮ್ಮರಾಜ್ಯ

BMTC ಯಲಹಂಕ: ಬೋನಸ್‌ ಕೊಡದಿದ್ದಕ್ಕೆ ಆಕ್ರೋಶ- ಚಾಲಕರಿಂದ ದಿಢೀರ್‌ ಪ್ರತಿಭಟನೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಬೋನಸ್ ಕೊಟ್ಟಿಲ್ಲ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಎಲೆಕ್ಟ್ರಿಕ್‌ ಬಸ್‌ ಚಾಲಕರು ಡಿಪೋದಿಂದ ಬಸ್‌ಗಳನ್ನು ಹೊರತೆಗೆಯದೆ ಪ್ರತಿಭಟನೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಮಧ್ಯಾಹ್ನ ನಗರದ ಯಲಹಂಕದಲ್ಲಿರುವ ಬಿಎಂಟಿಸಿ 30ನೇ ಘಟಕದ ಎಲೆಕ್ಟ್ರಿಕ್‌ ಬಸ್‌ ಚಾಲಕರು 70ಕ್ಕೂ ಹೆಚ್ಚು ಬಸ್‌ಗಳನ್ನು ಹೊರತೆಗೆಯದೆ ಪ್ರತಿಭಟ ಮಾಡಿದ್ದು, ನಮಗೆ ಕೊಡಬೇಕಿರುವ ಬೋನಸ್‌ ಕೊಡುವವರೆಗೂ ನಾವು ಡ್ಯೂಟಿಗೆ ಹೋಗುವುದಿಲ್ಲ ಎಂದು ಪಟ್ಟುಹಿಡಿದು ಕುಳಿತ್ತಿದ್ದರು.

ಈ ವೇಳೆ ಗುತ್ತಿಗೆದಾರರ ವ್ಯವಸ್ಥಾಪಕರು ಸ್ಥಳಕ್ಕೆ ಬಂದು ಪ್ರತಿಭಟನೆ ನಿರತ ಚಾಲಕರಲ್ಲಿ ಬೋನಸ್‌ ಕೊಡುವುದಕ್ಕೆ ಸಮಯಕೊಡಿ ಈಗ ಬಸ್‌ ತೆಗೆಯಿತಿ ಎಂದು ಮನವಿ ಮಾಡಿದ್ದರಿಂದ ಸಂಜೆ ಸುಮಾರು 5.30ರ ಬಳಿಕ ಪ್ರತಿಭಟನೆ ಕೈಬಿಟ್ಟು ಡ್ಯೂಟಿಗೆ ಹೋಗಿದ್ದಾರೆ.

ಇನ್ನು ಮೊನ್ನೆ ಇದೇರೀತಿ ಬೋನಸ್ ಕೊಟ್ಟಿಲ್ಲ ಎಂದು 120ಕ್ಕೂ ಹೆಚ್ಚು ಬಸ್‌ಗಳನ್ನು ನಿಲ್ಲಿಸಿ ಜಯನಗರದಲ್ಲಿರುವ ಬಿಎಂಟಿಸಿ ಘಟಕ-4ರಲ್ಲೂ ಚಾಲಕರು ಡಿಪೋದಿಂದ ಹೊರಗೆ ಬಸ್‌ ತೆಗೆಯದೆ ತಮ್ಮ ಆಕ್ರೋಶ ಹೊರಹಾಕಿದ್ದರು.

ಬೋನಸ್ ಕೊಡೋವರೆಗೂ ನಾವು ಬಸ್ ತೆಗೆಯಲ್ಲ ಎಂದು ಚಾಲಕರು ಪಟ್ಟು ಹಿಡಿದಿದ್ದರ ಪರಿಣಾಮ, ಬಸ್‌ಗಳು ಡಿಪೋದಲ್ಲಿ ನಿಂತಿತ್ತವು. ಎಲೆಕ್ಟ್ರಿಕ್‌ ಬಸ್ ಚಾಲಕರು ಗುತ್ತಿಗೆದಾರರ ಸಂಸ್ಥೆ ವಿರುದ್ಧ ಆಕ್ರೋಶ ಹೊರ ಹಾಕಿದ್ದರು.

ಆ ಬಳಿಕ ಜಯನಗರದಲ್ಲೂ ಗುತ್ತಿಗೆದಾರರ ವ್ಯವಸ್ಥಾಪಕರು ಬಂದು ಬೋನಸ್‌ ಕೊಡುವುದಕ್ಕೆ ಕಾಲವಕಾಶ ಕೇಳಿ ಮನವಿ ಮಾಡಿದ ಬಳಿಕ ಪ್ರತಿಭಟನಾ ನಿರತರು ಡ್ಯೂಟಿಗೆ ಮರಳಿದ್ದರು.

ಇತ್ತ ಚಾಲಕರು ಬೋನಸ್‌ ಕೊಟ್ಟಿಲ್ಲ ಎಂದು ಪ್ರತಿಭಟನೆಗಿಳಿದ ಪರಣಾಮ ಕೆಲ ಭಾಗದ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಅಲ್ಲದೆ, ಆದರೆ ಸಂಜೆ ಬಳಿಕ ಬಸ್‌ಗಳು ರಸ್ತೆಗಳಿದ ಪರಿಣಾಮ ಸದ್ಯ ಎಲ್ಲವೂ ಸರಿಯಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

Megha
the authorMegha

Leave a Reply

error: Content is protected !!
Latest news
ಇಂದು ರಾತ್ರಿ 8.30ರಿಂದ 9.30ರವರೆಗೆ KSRTC ಎಂಡಿ ಅಕ್ರಮ್‌ ಪಾಷರ ಭೇಟಿ ಮಾಡಿ ಗೌಪ್ಯ ಸಭೆ ನಡೆಸಿದ ಜಂಟಿ ಮುಖಂಡರು! ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿದ್ದ ಮುಷ್ಕರದಿಂದ ಹಿಂದೆ ಸರಿದ KSRTC ಪ.ಜಾ.-ಪ.ಪಂ ನೌಕರರ ಸಂಘ ಗುಡುಗು ಸಿಡಿಲಿನ ಆರ್ಭಟ: ಮನೆ ಮುಂದೆ ನಿಂತಿದ್ದ ಶಿಕ್ಷಕ ಹೃದಯಾಘಾತಕ್ಕೆ ಬಲಿ ಕೇರಳದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ವಿ.ಡಿ.ಸತೀಶನ್ ಇಂದು ಕೇರಳದ ನೂತನ ಸಿಎಂಆಗಿ ವಿ.ಡಿ. ಸತೀಶನ್‌ ಪ್ರಮಾಣ ವಚನ ಸ್ವೀಕಾರ KSRTC ಜಂಟಿ ಸಮಿತಿ ಒಳೊಪ್ಪಂದ ಬಯಲು; 2.5 ಕೋಟಿ ರೂ.ಗೆ ಸೇಲಾದರ ನೀಚರು, ನೌಕರರ ದಾರಿತಪ್ಪಿಸುತ್ತಿರುವುದರ ಹಿಂದಿನ ಮರ್ಮ... ವಿಜಯಪಥ ವರದಿ ಪರಿಣಾಮ: ಎಚ್ಚೆತ್ತ BMTC ಅಧಿಕಾರಿಗಳು- ಆದೇಶದ ದಿನಾಂಕಕ್ಕಿಂತ ಮೂರು ದಿನ ಮುಂಚಿತವಾಗಿಯೇ ನೌಕರರಿಗೆ 11 ತ... ಸಾರಿಗೆ ನೌಕರರಿಗೆ ಸೆಡ್ಡು ಹೊಡೆಯಲು ಸರ್ಕಾರ ತಂತ್ರ: ಬಸ್ ಸಂಚಾರ ನಿಲ್ಲಿಸಿ ಮುಷ್ಕರಕ್ಕೆ ಮುಂದಾಗಿರುವ ನೌಕರರಿಗೆ ಶಾಕ್ ... KSRTC: ಸರ್ಕಾರದ ಸಾಧನ ಸಮಾವೇಶದಲ್ಲಿ ಕಪ್ಪು ಬಾವುಟ, ಕಪ್ಪು ಪಟ್ಟಿ ಧರಿಸಿ ಸಾರಿಗೆ ನೌಕರರ ಪ್ರತಿಭಟನೆ !? BMTC ನೌಕರರಿಗೆ ಮೇ 19ರಂದು 11 ತಿಂಗಳ ಹಿಂಬಾಕಿ ಪಾವತಿಗೆ ಕ್ರಮ- ಎಂಡಿ ಆದೇಶಕ್ಕೂ ಕಿಮ್ಮತ್ತಿಲ್ಲದರ ಪರಿಣಾಮ ಈ ವಿಳಂಬ!