CRIMENEWSನಮ್ಮಜಿಲ್ಲೆ

ಕಾಲು ಜಾರಿ ಕೆರೆಬಿದ್ದ ಬಾಲಕಿ, ರಕ್ಷಿಸಲು ಹೋದ ಇಬ್ಬರು ಸೇರಿ ಮೂವರು ನೀರುಪಾಲು

ವಿಜಯಪಥ ಸಮಗ್ರ ಸುದ್ದಿ

ತುಮಕೂರು: ಕಾಲು ಜಾರಿ ಕೆರೆಗೆ ಬಿದ್ದ ಬಾಲಕಿಯನ್ನು ರಕ್ಷಿಸಲು ಮತ್ತೊಬ್ಬ ಬಾಲಕಿ ಹೋಗಿದ್ದಾಳೆ ಈ ಇಬ್ಬರನ್ನು ರಕ್ಷಿಸಲು ಅವರ ತಂದೆ ಹೋಗಿದ್ದಾರೆ. ಈ ವೇಳೆ ಈಜು ಬಾರದೆ ಮೂವರು ಮೃತಪಟ್ಟಿದ್ದಾರೆ.

ದೀಪಾವಳಿ ಹಬ್ಬದಂದೇ ಈ ಮೂವರು ದಾರುಣವಾಗಿ ಅಸುನೀಗಿದ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಯರೆಕಟ್ಟೆ ಗ್ರಾಮದಲ್ಲಿ ನಡೆದಿದೆ ನಡೆದಿದೆ.

ಗ್ರಾಮದ ಶ್ರಾವ್ಯಾ (12), ಪುಣ್ಯಾ(12), ಶ್ರಾವ್ಯಾಳ ತಂದೆ ವೆಂಕಟೇಶ್ (50) ಮೃತರು. ಮೂತ್ರ ವಿಸರ್ಜನೆ ವೇಳೆ ಶ್ರಾವ್ಯಾ ಕಾಲು ಜಾರಿ ಕೆರೆಗೆ ಬಿದ್ದಳು. ಶ್ರಾವ್ಯಾಳನ್ನ ರಕ್ಷಿಸಲು ಪುಣ್ಯಾ ಕೆರೆಗೆ ಇಳಿದಿದ್ದಾಳೆ. ಇವರಿಬ್ಬರನ್ನೂ ರಕ್ಷಿಸಲು ವೆಂಕಟೇಶ್‌ ನೀರಿಗೆ ಹಾರಿದ್ದಾರೆ. ಮೂವರಿಗೂ ಈಜು ಬಾರದೆ ಮೃತಪಟ್ಟಿದ್ದಾರೆ.

ಮಂಗಳವಾರ ಸಂಜೆ ನಾಲ್ಕು ಮೂವತ್ತರ ವೇಳೆಯಲ್ಲಿ ದುರ್ಘಟನೆ ನಡೆದಿದ್ದು, ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ಶೋಧಕಾರ್ಯ ನಡೆಸಿದರು.

ಸದ್ಯ ಮೂರು ಮೃತದೇಹಗಳನ್ನ ಹೊರತೆಗೆದು ಚಿಕ್ಕನಾಯಕನಹಳ್ಳಿ‌ ಸಾರ್ವಜನಿಕ‌ ಆಸ್ಪತ್ರೆಯ ಶವಾಗಾರಕ್ಕೆ‌ ರವಾನೆ ಮಾಡಲಾಗಿದೆ. ಈ ಅವಘಡ ಸಂಬಂಧ ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Megha
the authorMegha

Leave a Reply

error: Content is protected !!