Vijayapatha – ವಿಜಯಪಥ
Friday, November 1, 2024
CrimeNEWSದೇಶ-ವಿದೇಶರಾಜಕೀಯ

ಅಪ್ಪ-ಮಗನ ಲಾಕಪ್‌ಡೆತ್‌: ಎಸ್‌ಐ, ಮುಖ್ಯಪೇದೆ ಬಂಧನ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ತೂತುಕುಡಿ: ತಮಿಳುನಾಡಿನಲ್ಲಿ ಲಾಕ್‌ಡೌನ್‌ವೇಳೆ ತಮ್ಮ ಮೊಬೈಲ್‌ ಅಂಗಡಿ ತೆರೆದಿದ್ದರು ಎಂದು ಅಪ್ಪ ಮಗನಿಗೆ ಮನಬಂದಂತೆ ತಳಿಸಿದ್ದರಿಂದ ಇಬ್ಬರೂ ಲಾಕಪ್‌ಡೆತ್‌ ಆಗಿದ್ದರು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ತಮಿಳುನಾಡು ಸರ್ಕಾರ ಎಸ್‌ಐ ಮತ್ತು ಮುಖ್ಯಪೇಟೆಯನ್ನು ಬಂಧಿಸಿದ್ದು, ಮತ್ತಿಬ್ಬರ ವಿರುದ್ಧವು ಎಫ್‌ಐಆರ್‌ ದಾಖಲಿಸಿದೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಅಪ್ಪ-ಮಗನ ಲಾಕಪ್‌ಡೆತ್ ಪ್ರಕರಣ ದೇಶದಾದ್ಯಂತ ಭಾರಿ ವಿವಾದ ಸೃಷ್ಟಿಸಿದ್ದು,ಈ ಅತಾಚೂರ್ಯಕ್ಕೆ ಎಸ್‌ಐ ರಘು ಗಣೇಶ್ ಹಾಗೂ ಮುಖ್ಯ ಪೇದೆ ಮುರುಗನ್ ಎಂಬುವರೇ  ಪ್ರಮುಖ ಕಾರಣ ಎಂದು ಪ್ರಥಮ ತನಿಖೆಯಿಂದ ತಿಳಿದು ಬಂದಿದೆ.

ಪಿ.ಜಯರಾಜ್‌ ಮತ್ತು ಅವರ ಮಗ ಫೆನಿಕ್ಸ್‌ ಎಂಬುವರನ್ನು ಮೊಬೈಲ್‌ ಅಂಗಡಿ ತೆರೆದು ಲಾಕ್‌ಡೌನ್‌ ನಿಯಮ ಉಲ್ಲಂಘಿಸಿದ್ದೀರ ಎಂದು   ಪೊಲೀಸರು ಆರೋಪಿಸಿ ವಶಕ್ಕೆ ಪಡೆದುಕೊಂಡಿದ್ದರು.

ಈ ಸಮಯದಲ್ಲಿ ಇಬ್ಬರ ಮೇಲು ತೀವ್ರ ಹಲ್ಲೆ ನಡೆಸಿದ್ದರು ಇದರಿಂದ ಒಂದು ವಾರದಲ್ಲೇ ಇಬ್ಬರು ಮೃತಪಟ್ಟಿದ್ದರು. ಈ ಪ್ರಕರಣ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಯಿತು.

ಇದನ್ನು ಗಂಭೀರವಾಗಿ ಪರಿಗಣಿಸಿದ ತಮಿಳುನಾಡು ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು. ಅದರಂತೆ ತನಖಾಧಿಕಾರಿಗಳು ಬುಧವಾರ ಐಪಿಸಿ ಸೆಕ್ಷನ್‌ 302 (ಕೊಲೆ) ರಡಿ ಎಫ್‌ಐಆರ್‌ ದಾಖಲಿಸಿ ಅದರಂತೆ ಎಸ್‌ಐ ಮತ್ತು ಮುಖ್ಯಪೇದೆ ಇಬ್ಬರನ್ನು ಬಂಧಿಸಲಾಗಿದೆ.

ಮತ್ತಿಬ್ಬರು ಆರೋಪಿಗಳಾದ ಎಸ್ಐ ಬಾಲಕೃಷ್ಣ ಹಾಗೂ ಪೇದೆ ಮುತ್ತುರಾಜ್ ವಿರುದ್ಧ ಎಫ್ಐಆರ್ ದಾಖಲಾದ್ದು, ಈ ನಡುವೆ ಎಸ್ಐ ಬಾಲಕೃಷ್ಣ ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆ ಕಾರ್ಯದಲ್ಲಿ ತೊಡಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬಂಧನಕ್ಕೊಳಗಾಗಿರುವ ಗಣೇಶ್ ಅವರನ್ನು ಗುರುವಾರ ಬೆಳಿಗಿನ ಜಾವ ತೂತುಕುಡಿ ಮುಖ್ಯ ನ್ಯಾಯಾಲಯದ ನ್ಯಾಯಾಧೀಶರಾದ ಎಸ್. ಹೇಮಾ ಅವರ ಮುಂದೆ ಹಾಜರುಪಡಿಸಲಾಯಿತು. ತೂತುಕುಡಿ ಸರ್ಕಾರಿ ಆಸ್ಪತ್ರೆಯ ವೈದ್ಯರು ವೈದ್ಯಕೀಯ ವರದಿ ನೀಡಿದ ಬಳಿಕ ಗಣೇಶ್ ಅವರನ್ನು ಜುಲೈ 14 ರವರೆಗೆ ಪೊಲೀಸರ ವಶಕ್ಕೆ ನೀಡಿದ್ದು, ಸದ್ಯ ಪೆರುರಾಣಿ ಜಿಲ್ಲಾ ಕಾರಾಗೃಹಕ್ಕೆ ಗಣೇಶ್ ಅವರನ್ನು ಹಾಕಿದ್ದು, ತೀವ್ರ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

1 Comment

Leave a Reply

error: Content is protected !!
LATEST
KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ: ಈಗಲೇ ಅರ್ಜಿ ಹಾಕಿ ಬಿಬಿಎಂಪಿ: ಅನಧಿಕೃತ ಹೆಚ್ಚುವರಿ ಮಹಡಿಗಳು, ಪಾದಚಾರಿ ಮಾರ್ಗ ಒತ್ತುವರಿ ತೆರವು KSRTC ಸಮಸ್ತ 4ನಿಗಮಗಳ ಅಧಿಕಾರಿಗಳು ನೌಕರರು ಒಗ್ಗಟ್ಟಾಗಿ: ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವತ್ತ ಚಿಂತಿಸಿದರೆ ಅಸಾ...