ಲಡಾಖ್: ಗಾಲ್ವಾನ್ ನದಿ ಕಣಿವೆಯಲ್ಲಿ ಚೀನಾ ವಿರುದ್ಧ ಪ್ರಧಾನ ಮಂತ್ರಿ ನರೇಂದ್ರ ಮೋದಿ ಘರ್ಜಿಸಿದ್ದು, ಭಾರತೀಯ ಯೋಧರಿಗೆ ಧೈರ್ಯ ತುಂಬಿದ್ದಾರೆ.
ಲಡಾಖ್ ಸೇನೆ ನೆಲೆ ಲೇಹ್‌ನಲ್ಲಿ ಯೋಧರ ಉದ್ದೇಶಿಸಿ ಮಾತನಾಡಿದ ಅವರು, ಯೋಧರ ತ್ಯಾಗ ಬಲಿದಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಿಮ್ಮ ತ್ಯಾಗ ಸಾಹಸಕ್ಕೆ ಜೈ ಎಂದು ಹುರಿದುಂಬಿಸಿದ್ದಾರೆ.
ಎಂದೆಂದಿಗೂ ನಮಗೇ ಜಯವಾಗಲಿದೆ ನೀವು ಭಯ ಪಡುವ ಅಗತ್ಯ ವಿಲ್ಲ ಎಂದು ಲಡಾಖ್‌ನ ಗಾಲ್ವಾನ್ ನದಿ ದಡದಲ್ಲೇ ಚೀನಾ ಹೆಸರೇಳದೆ ಭಾರತೀಯ ಸೈನಿಕರಿಗೆ ಪ್ರಧಾನಿ ನರೇಂದ್ರ ಮೋದಿ ಧೈರ್ಯತುಂಬಿದ್ದಾರೆ.
ಇಡೀ ವಿಶ್ವಕ್ಕೆ ನಿಮ್ಮ ಧೈರ್ಯ ತಿಳಿದಿದೆ. ನಿಮ್ಮ ತ್ಯಾಗ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ. ನಿಮ್ಮೊಂದಿಗೆ ದೇಶವಿದೆ. ಇಡೀ ವಿಶ್ವದಲ್ಲೇ ಭಾರತವನ್ನು ಮುಟ್ಟಲು ಸಾಧ್ಯವಿಲ್ಲ ಕಾರಣ ನಿಮ್ಮ ಭುಜಗಳು ಬೆಟ್ಟದಷ್ಟೆ ಗಟ್ಟಿಯಾಗಿವೆ ಎಂದು ತಿಳಿಸಿದರು.
ಗಡಿಯಲ್ಲಿ ಮೂಲ ಭೂತ ಸೌಲಭ್ಯ ಒದಗಿಸಿಕೊಡಲಾಗುತ್ತಿದೆ. ಯೋಧರೆ ಈ ದೇಶದ ಶಕ್ತಿ. ನಿಮ್ಮ ಇಚ್ಚಾಶಕ್ತಿ ಪರ್ವತದಂತೆ ಅಚಲ. ಇದು ವಿಕಾಸಯುಗ, ಇದುವೇ ಭಾರತದ ಪರ್ವಕಾಲದ ಸಮಯ ಮತ್ತು ಭವಿಷ್ಯ ಎಂದು ಹೇಳಿದರು.
ಯೋಧರಿಗೆ ಈ ಮೂಲಕ ಧೈರ್ಯ ತುಂಬಿದ ಮೋದಿ, ನಮ್ಮಲ್ಲಿ ತಂತ್ರಜ್ಞಾನದ ಕೊರತೆ ಇಲ್ಲ. ಎಲ್ಲದರಲ್ಲೂ ನಾವು ಮುಂದಿದ್ದೇವೆ. ಯುದ್ಧಕ್ಕೆ ಬೇಕಾದ ಎಲ್ಲರೀತಿಯೂ ಸಜ್ಜಾಗಿದ್ದೇವೆ ಎಂದು ಚೀನಾಕ್ಕೆ ಪರೋಕ್ಷವಾಗಿಯೇ ಎಚ್ಚರಿಕೆ ನೀಡಿದರು.