ಬೆಂಗಳೂರು: ರಾಜಧಾನಿಯಲ್ಲಿ ಇಂದು ಕೊರೊನಾ ಸ್ಫೋಟವಾಗಿದ್ದು, ಈ ಹಿಂದಿನಕ್ಕಿಂತಲು ಇಂದು ಅಂದರೆ 994 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ರಾಜ್ಯದಲ್ಲಿ 1,694 ಹೊಸ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 19,710 ಕ್ಕೆ ಏರಿಕೆಯಾಗಿದೆ.
ಇಂದು 21 ಜನ ಕೊರೊನಾಗೆ ಬಲಿಯಾಗಿದ್ದು, ಒಟ್ಟಾರೆ ರಾಜ್ಯದಲ್ಲಿ ಸಾವಿನ ಸಂಖ್ಯೆ 297ಕ್ಕೆ (ಅನ್ಯಕಾರಣಕ್ಕೆ 4 ಮಂದಿ ಸೇರಿ) ಏರಿಕೆಯಾಗಿದೆ. ಇನ್ನು ಐಸಿಯುನಲ್ಲಿ 201 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯದಲ್ಲಿ ಒಟ್ಟು 19,710ರಲ್ಲಿ 10608 ಸಕ್ರಿಯ ಕೊರೊನಾ ಪ್ರಕರಣಗಳಿವೆ. ಇಂದು ಒಟ್ಟು 471 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಈವರೆಗೆ ರಾಜ್ಯದಲ್ಲಿ 8805 ಮಂದಿ ಗುಣಮುಖರಾಗಿದ್ದಾರೆ. ಇತ್ತ ಬೆಂಗಳೂರು ಕೊರೊನಾ ಸಾವಿನ ಸಂಖ್ಯೆಯಲ್ಲಿ ಶತಕ ದಾಖಲಿಸಿದೆ. ಇಂದು ರಾಜ್ಯದಲ್ಲಿ 21 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
ಇನ್ನು ಬೆಂಗಳೂರಿನಲ್ಲಿ 994, ದಕ್ಷಿಣ ಕನ್ನಡ 97, ಬಳ್ಳಾರಿ 97, ಬೆಂಗಳೂರು ಗ್ರಾಮಾಂತರ 44, ಧಾರವಾಡ 38, ಮೈಸೂರು 35, ಕಲಬುರಗಿ 72, ಬೀದರ್ 28, ತುಮಕೂರು 57, ಶಿವಮೊಗ್ಗ 23, ಮಂಡ್ಯ 33, ವಿಜಯಪುರ 4, ರಾಮನಗರ 10, ಉತ್ತರ ಕನ್ನಡ 5, ಹಾಸನ 13, ಉಡುಪಿ 16, ಕೋಲಾರ 11, ರಾಯಚೂರು 7, ಬಾಗಲಕೋಟೆ 8, ದಾವಣಗೆರೆ 5, ಯಾದಗಿರಿ 14, ಬೆಳಗಾವಿ 13, ಕೊಡಗು 16, ಹಾವೇರಿ 1, ಕೊಪ್ಪಳ 4, ಚಿತ್ರದುರ್ಗ 3, ಗದಗ 19, ಚಿಕ್ಕಬಳ್ಳಾಪುರ 3, ಚಾಮರಾಜನಗರ 24 ಪ್ರಕರಣ ಬೆಳಕಿಗೆ ಬಂದಿದೆ.