NEWSಕ್ರೀಡೆದೇಶ-ವಿದೇಶ

ವಿಶ್ವಕಪ್​ ಫೈನಲ್​ ಪಂದ್ಯ ಗೆಲುವ ವನಿತೆಯರ ಟೀಮ್​ಗೆ ದೊಡ್ಡ ಮಟ್ಟದ ಬಹುಮಾನ

ವಿಜಯಪಥ ಸಮಗ್ರ ಸುದ್ದಿ

ನಿತೆಯರ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಯಾರು ಗೆಲುವು ಸಾಧಿಸುತ್ತಾರೋ ಆ ಟೀಮ್​ಗೆ ದೊಡ್ಡ ಮಟ್ಟದಲ್ಲೇ ಹಣದ ಹೊಳೆ ಹರಿಯಲಿದೆ. ಕಾರಣ ಪುರುಷ ಆಟಗಾರರಿಗೆ ಕೊಟ್ಟಂತೆಯೇ ಮಹಿಳಾ ಆಟಗಾರರಿಗೂ ಬಹುಮಾನ ಸಿಗಲಿದೆ.

ದಕ್ಷಿಣ ಆಫ್ರಿಕಾ ಹಾಗೂ ಭಾರತದ ವನಿತೆಯರ ನಡುವೆ ಹೈವೋಲ್ಟೇಜ್ ಮ್ಯಾಚ್ ನಡೆಯಲಿದೆ. ಇಲ್ಲಿ ಪುರುಷ ಆಟಗಾರರಿಗೆ ಕೊಟ್ಟಂತೆ ಮಹಿಳಾ ಆಟಗಾರರಿಗೂ ಬಹುಮಾನವನ್ನು ಸಮಾನವಾಗಿ ಕೊಡಲಾಗುವುದು ಎಂದು ಹೇಳಲಾಗುತ್ತಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಹರ್ಮನ್​ಪ್ರೀತ್ ಪಡೆ ವಿಶ್ವಕಪ್​ ಗೆದ್ದರೇ ಎಷ್ಟು ಕೋಟಿ ರೂ.ಸಿಗಲಿದೆ ಗೊತ್ತೆ?

ಈಗಾಗಲೇ ವಿಶ್ವಕಪ್​ ಫೈನಲ್ ಪಂದ್ಯದಲ್ಲಿ ಎರಡು ಬಾರಿ ಕೈಸುಟ್ಟುಕೊಂಡಿರುವ ಟೀಮ್ ಇಂಡಿಯಾ ಮೂರನೇ ಬಾರಿಗೆ ಬಹುದೊಡ್ಡ ನಿರೀಕ್ಷೆ ಇಟ್ಟುಕೊಂಡು ಅಖಾಡಕ್ಕೆ ಇಳಿಯುತ್ತಿದೆ. ಇನ್ನು ಸೌತ್ ಆಫ್ರಿಕಾ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ ಟೀಮ್ ಆಗಿದೆ. ಈ ಮೊದಲೇ ವಿಜಯ ಸಾಧಿಸಿದ ತಂಡಕ್ಕೆ ಪ್ರಶಸ್ತಿ ಜತೆಗೆ ಭಾರೀ ಮೊತ್ತದ ಹಣ ನೀಡಲಾಗುವುದು ಎಂದು ಐಸಿಸಿ (International Cricket Council) ಹೇಳಿದೆ.

2025ರ ಸೆಪ್ಟೆಂಬರ್​ 30 ರಂದು ಆರಂಭವಾದ ಈ ವಿಶ್ವಕಪ್​ ಪಂದ್ಯಾವಳಿಗೆ ಈ ಹಿಂದೆ ಎಂದೂ ಘೋಷಿಸಿದಷ್ಟು ದಾಖಲೆ ಮಟ್ಟದಲ್ಲಿ ಹಣವನ್ನು ಐಸಿಸಿ ಘೋಷಿಸಿದೆ. ವಿಜೇತ ತಂಡವೂ ಯುಎಸ್​ಡಿ 4.48 ಮಿಲಿಯನ್ ಅಂದರೆ 40 ಕೋಟಿ ರೂ.ಗಳನ್ನು ಪಡೆಯಲಿದೆ. ಈ ಬಾರಿಯ ಒಟ್ಟು ಟೂರ್ನಿಯೂ ಬಹುಮಾನ ನಿಧಿ ಯುಎಸ್​ಡಿ $13.88 ಮಿಲಿಯನ್ ಅಂದರೆ 123 ಕೋಟಿ ರೂಪಾಯಿ ಆಗಿದೆ.

2022ರ ವಿಶ್ವಕಪ್​ಗಿಂತ ಶೇ.297 ರಷ್ಟು ಈ ಸಲ ಹಣ ಏರಿಕೆ ಮಾಡಲಾಗಿದೆ. ಅಲ್ಲದೇ ಪುರುಷರ ವಿಶ್ವಕಪ್​ ಪಂದ್ಯಾವಳಿಗಿಂತ ಶೇ.4 ಮಿಲಿಯನ್ ಅಷ್ಟು ಹೆಚ್ಚಳವಾಗಿದೆ. ಇನ್ನು ಗೆದ್ದವರಿಗೆ ಅಷ್ಟೇ ಖುಷಿ ಅಲ್ಲ, ರನ್ನರ್ ಅಪ್ ಬರುವ ತಂಡವೂ ದೊಡ್ಡ ಮೊತ್ತದಲ್ಲೇ ಹಣ ಪಡೆಯಲಿದೆ. ಅಂದರೆ ಗೆಲುವು ಪಡೆದ ತಂಡಕ್ಕಿಂತ ಅರ್ಧದಷ್ಟು ಹಣ ಪಡೆಯಲಿದೆ. 2.24 ಮಿಲಿಯನ್ ಅಂದರೆ ಅಂದಾಜು 20 ಕೋಟಿ ರೂ. ರನ್ನರ್ ಅಪ್ ಟೀಮ್ ಪಾಲಾಗಲಿದೆ.

Megha
the authorMegha

Leave a Reply

error: Content is protected !!
Latest news
KSRTC: ಅತೀ ಶೀಘ್ರದಲ್ಲೇ ಶೇ.15ರಿಂದ 20ರಷ್ಟು ಬಸ್‌ ಪ್ರಯಾಣ ದರ ಏರಿಕೆ- ಸುಳಿವುಕೊಟ್ಟ ಮುಖ್ಯಮಂತ್ರಿ ಡಿಕೆಶಿ ವಿದ್ಯುತ್‌ ಖಾಸಗೀಕರಣ ನಿಲ್ಲಿಸಲು ಆಗ್ರಹಿಸಿ ಅತ್ತಹಳ್ಳಿ ದೇವರಾಜ್ ನೇತೃತ್ವದಲ್ಲಿ ಪ್ರತಿಭಟನೆ NWKRTC: ಡೋರ್‌ ಹಾಕದಿದ್ದರೆ, ಚಾಲಕರ ಬಳಿ ಕುಳಿತಿದ್ದರೆ ಕಂಡಕ್ಟರ್‌ ವಿರುದ್ಧ ಪ್ರಕರಣ ದಾಖಲಿಸಿ- ತನಿಖಾಧಿಕಾರಿಗಳಿ ಡಿಸ... ಇದು ನಿಗಮಗೆ ಗೊತ್ತೆ? ಗ್ರಾಚ್ಯುಟಿ, ರಜೆ ನಗದೀಕರಣ ಸೇರಿ 10 ಆದಾಯಗಳ ಮೇಲೆ ಸರ್ಕಾರ ಯಾವುದೇ ತೆರಿಗೆ ವಿಧಿಸುವಂತಿಲ್ಲ 4-6 ತಿಂಗಳಿನಲ್ಲಿ ಬೆಂಗಳೂರಿನ ರಸ್ತೆಗಳಿಗೆ ಹೊಸ ಲುಕ್‌: ಸಚಿವ ಕೃಷ್ಣ ಬೈರೇಗೌಡ BMTC ಬಸ್‌- ಬೈಕ್‌ಗೆ ಡಿಕ್ಕಿ: ಬೈಕ್‌ನಲ್ಲಿದ್ದ ಮಗು, ದಂಪತಿ ಸೇರಿ ಮೂವರು ಮೃತ ಮತ್ತೊಂದು ಮಗುವಿನ ಸ್ಥಿತಿ ಚಿಂತಾಜನಕ BMTC: ಮುಂದಿನ ವರ್ಷದಿಂದ ನಿರ್ವಾಹಕರ ಮುಂಬಡ್ತಿ ಜೇಷ್ಠತಾ ಪಟ್ಟಿಯಲ್ಲಿ ನಿಧನ, ವಜಾ, ನಿವೃತ್ತರ ಹೆಸರು ಸೇರ್ಪಡೆ ಆಗಲ್ಲ-... ವಿದ್ಯುತ್ ಖಾಸಗೀಕರಣ ವಿರೋಧಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ಇಂದು KSRTC ನೂತನ ಎಂಡಿಯಾಗಿ ಅಧಿಕಾರ ವಹಿಸಿಕೊಂಡ ಶಿವಕುಮಾರ್ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಇಳಿದಿದೆ ಪೆಟ್ರೋಲ್, ಡೀಸೆಲ್ ಬೆಲೆ ಕೂಡಲೇ ಕಡಿತಗೊಳಿಸಿ – ಕೇಂದ್ರಕ್ಕೆ ಅಶೋಕ್ ಆಗ್ರಹ