ಬೆಂಗಳೂರು: ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್‌ಗೆ ಕೊಟ್ಟಿರುವ ಮಾಹಿತಿಯಂತೆ ಅಕ್ಟೋಬರ್ ತಿಂಗಳಿನಲ್ಲಿ ಚುನಾವಣೆ ನಡೆಸಲು ಮುಂದಾಗಿದೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಗ್ರಾಪಂ ಚುನಾವಣೆಗೆ ಮತದಾರರ ಪಟ್ಟಿ ತಯಾರಿಸುವುದನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ರಾಜ್ಯ ಚುನಾವಣಾ ಆಯೋಗ ಸೂಚಿಸಿತ್ತು.
ಆದರೆ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಕೆಯಾಗಿದ್ದು, ಈ ಸಂಬಂಧ ಜೂ.24ರಂದು ನಡೆದ ಸಬೆಯಲ್ಲಿ ಜಿಲ್ಲಾಧಿಕಾರಿಗಳು ಕೊಟ್ಟಿದ್ದ ಅಭಿಪ್ರಾಯದಂತೆ ಅಕ್ಟೋಬರ್ ನಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ಚುನಾವಣೆ ನಡೆಸುವ ಬಗ್ಗೆ ಹೈಕೋರ್ಟ್ ಗಮನಕ್ಕೆ ಆಯೋಗ ತಂದಿದೆ.
ಹೀಗಾಗಿ 13/07/2020 ರಿಂದ 18/07/2020ರ ವರೆಗೆ ಮತದಾರರನ್ನು ಗುರುತಿಸುವುದು.
20/07/2020 ರಿಂದ 29/07/2020ರ ವರೆಗೆ ಕ್ಷೇತ್ರ ವ್ಯಾಪ್ತಿಯಲ್ಲಿ ಮನೆ ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿಯಲ್ಲಿನ ಮತದಾರರನ್ನು ಗುರುತಿಸುವುದು. From to Matrix ಪಟ್ಟಿಯನ್ನು ತಯಾರಿಸಿ ಮುದ್ರಕರಿಗೆ ನೀಡುವುದು.
30/07/2020 ರಿಂದ 05/08/2020 ಮುದ್ರಕರಿಂದ ಮೊದಲ ಪಟ್ಟಿ ಪಡೆದುಕೊಂಡು ಕ್ಷೇತ್ರದಲ್ಲಿ ಮತ್ತೊಮ್ಮೆ ಪರಿಶೀಲನೆ ನಡೆಸುವುದು.
06/08/2020: ಪರಿಶೀಲನೆ ಬಳಿಕ ಆಗಬೇಕಾಗಿರುವ ಬದಲಾವಣೆಗಳನ್ನು ಮುದ್ರಕರಿಂದ ಮಾಡಿಸುವುದು. ಮತದಾರರ 10 ಕರಡು ಪ್ರತಿಗಳನ್ನು ಮುದ್ರಕರಿಂದ ಪಡೆದುಕೊಳ್ಳುವುದು.
07/08/2020-ಸಂದಂಧಪಟ್ಟ ಕಚೇರಿಗಳಲ್ಲಿ ಮತದಾರರ ಪಟ್ಟಿಯನ್ನು ಪ್ರಕಟಿಸುವುದು.
14/08/2020-ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನ. * 24/08/2020-ಆಕ್ಷೇಪಣೆಗಳನ್ನು ಇತ್ಯರ್ಥ ಪಡಿಸಲು ಕೊನೆಯ ದಿನ.
30/08/2020-ಆಕ್ಷೇಪಣೆ ಇತ್ಯರ್ಥ ಪಡಿಸಿದ ಬಳಿಕ ಮುದ್ರಕರಿಂದ ಬದಲಾವಣೆ ಮಾಡಿಸಿ, ಚೆಕ್ ಲಿಸ್ಟ್ ಪಡೆದು ಕ್ಷೇತ್ರದಲ್ಲಿ ಮತ್ತೊಮ್ಮೆ ಪರಿಶೀಲನೆ ಮಾಡುವುದು.
31/08/2020-ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟ ಮಾಡಬೇಕೆಂದು ರಾಜ್ಯ ಚುನಾವಣಾ ಆಯೋಗ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.