ಮುಂಬೈ: ಕೊರೊನಾ ಸೋಂಕಿನಿಂದ ದೇಶ ತತ್ತರಿಸುತ್ತಿದ್ದು ಯಾರು ಮನೆಯಿಂದ ಹೊರ ಬರದಂತ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಒಂದು ರೀತಿ ಮನೆಯಲ್ಲೇ ಬಂಧಿಯಾಗಿರುವ ಬಾಲಿವುಡ್ ಪದ್ಮಾವತಿ ದೀಪಿಕಾ ಪಡುಕೋಣೆ ಅವರೀಗ ತವರು ಮನೆ ನೆನಪು ಮಾಡಿಕೊಂಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಅಭಿಮಾನಿಯೊಬ್ಬರು ನೀವು ಲಾಕ್ಡೌನ್ ಮುಗಿದ ಬಳಿಕ ಏನ್ ಮಾಡುತ್ತೀರಿ ಎಂದು ಪ್ರಶ್ನೆ ಮಾಡಿದ್ದರು. ಮೊದಲು ಬೆಂಗಳೂರಿಗೆ ತೆರಳಿ ಅಪ್ಪ, ಅಮ್ಮ ಮತ್ತು ತಂಗಿಯನ್ನು ಭೇಟಿಯಾಗುತ್ತೇನೆ ಎಂದು ತವರೂರನ್ನು ನೆನಪು ಮಾಡಿಕೊಂಡಿದ್ದಾರೆ.
ಲಾಕ್ಡೌನ್ ಈಗ ಸಡಿಲಗೊಂಡಿದ್ದು ಸ್ಥಗಿತಗೊಂಡಿದ್ದ ಚಿತ್ರೀಕರಣಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ ಆದರೂ ಶೂಟಿಂಗ್ ಆರಂಭಗೊಂಡಿಲ್ಲ. ಇನ್ನು ಮೂರು ತಿಂಗಳಿನಿಂದ ಮನೆಯಲ್ಲಿಯೇ ಲಾಕ್ ಆಗಿರುವ ಸೆಲೆಬ್ರಿಟಿಗಳಿಗೆ ಮನೆಯಿಂದ ಹೊರಬರಲಾಗದೇ ಒಂದು ರೀತಿಯ ಬಂಧಿಯಾಗಿರುವುದು ಬೇಸರ ತರಿಸುತ್ತಿದೆ. ಅದಕ್ಕೆ ನಿದರ್ಶನ ಎಂಬಂತೆ ಕನ್ನಡತಿ ದೀಪಿಕಾ ಪಡುಕೋಣೆ ಸಹ ಮುಂಬೈನಲ್ಲಿದ್ದು, ಪತಿ ರಣ್ವೀರ್ ಜೊತೆ ಲಾಕ್ಡೌನ್ ಸಮಯ ಕಳೆಯುತ್ತಿದ್ದು, ಸದ್ಯ ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುವ ಮೂಲಕ ಅಭಿಮಾನಿಗಳ ಜತೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ ಆದರೂ ಅದು ಮನಸ್ಸಿಗೆ ಖುಷಿ ನೀಡುತ್ತಿಲ್ಲ. ಹೀಗಾಗಿ ಬಂಧುಗಳನ್ನು ಭೇಟಿಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಇದರ ಜತೆಗೆ ಮತ್ತೊಬ್ಬ ಅಭಿಮಾನಿ ವಿಚಿತ್ರ ಟ್ಯಾಲೆಂಟ್ ಅಂದ್ರೆ ಏನು ಎಂದು ಪ್ರಶ್ನೆ ಮಾಡಿದ್ದು, ಅದಕ್ಕೆ ನೀವು ರಣ್ವೀರ್ ಅಥವಾ ನನ್ನ ಸೋದರಿಗೆ ಕೇಳಿದ್ರೆ ಚೆನ್ನಾಗಿರುತ್ತದೆ. ಇವರಿಬ್ಬರಿಗೂ ತಾವು ಏನು ಮಾಡುತ್ತಿದ್ದೇವೆ ಎಂಬುವುದೇ ಗೊತ್ತಿರಲ್ಲ ಎಂದು ಫನ್ನಿಯಾಗಿ ಉತ್ತರಿಸಿದ್ದಾರೆ.