ಪೂಂಚ್: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆ, ಗುಲ್ಪುರ್ ಸೆಕ್ಟರ್ ಬಳಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದ್ದು, ಪಾಕಿಸ್ತಾನ ಸೇನಾಪಡೆಯ ಅಪ್ರಚೋದಿತ ಗುಂಡಿನ ದಾಳಿಗೆ ಮೂವರು ನಾಗರಿಕರು ಮೃತಪಟ್ಟಿದ್ದಾರೆ.
ಪಾಕಿಸ್ತಾನ ಸೇನೆ ಗುಲ್ಪುರ್ ಸೆಕ್ಟರ್ ಬಳಿ ನಡೆಸಿದ ಕದನ ವಿರಾಮ ಉಲ್ಲಂಘನೆಯಲ್ಲಿ ಮೂವರು ನಾಗರಿಕರು ಸಾವನ್ನಪ್ಪಿದ್ದು, ಮತ್ತೊಬ್ಬ ನಾಗರಿಕ ಗಂಭೀರವಾಗಿ ಗಾಯಗೊಂಡಿದ್ದಾನೆಂದು ಪೂಂಚ್ ಜಿಲ್ಲೆಯ ಉಪ ಆಯುಕ್ತ ರಾಹುಲ್ ಯಾದವ್ ಹೇಳಿದ್ದಾರೆ.
ಪಾಕಿಸ್ತಾನ ಪದೇಪದೆ ಕದನ ವಿರಾಮ ಉಲ್ಲಂಘಿಸುವ ಪರಿಪಾಠವನ್ನು ಬೆಳೆಸಿಕೊಂಡಿದ್ದು, ಅದಕ್ಕೆ ಪ್ರತ್ಯುತ್ತರ ನೀಡಲು ಭಾರತೀಯ ಸೇನಾಪಡೆಯು ಇನ್ನಷ್ಟು ಜಾಗರೂಕವಾಗಬೇಕು. ಇಲ್ಲದಿದ್ದರೆ ದೇಶದ ಸಾಮಾನ್ಯ ನಾಗರಿಕರ ಜೀವಕ್ಕೆ ಈರೀತಿಯ ಹಾನಿಯಾಗುವುದು ನಿರಂತರವಾಗಲಿದೆ ಎಂದು ಜಿಲ್ಲೆಯ ನಾಗರಿಕರು ಸೇನೆ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.