ಬೆಂಗಳೂರು: ವಿಶ್ವ ಮಾರಿ ಕೊರೊನಾ ಇಂದು ಸಹ ರಾಜ್ಯದಲ್ಲಿ ಅಬ್ಬರಿಸಿದ್ದು ಬರೋಬ್ಬರಿ 5007 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಒಟ್ಟು 85870 ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಕೊರೊನಾ ಸೋಂಕು ತನ್ನ ಮರಣ ಮೃದಂಗವನ್ನು ತೀವ್ರಗೊಳಿಸಿದ್ದು ಇಂದು 110 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1732 ಕ್ಕೆ (ಅನ್ಯ ಕಾರಣಕ್ಕೆ 6ಸೇರಿ) ಏರಿಕೆಯಾಗಿದೆ.
ಈ ನಡುವೆ, ಇಂದು ರಾಜ್ಯದಲ್ಲಿ 2037 ಮಂದಿ ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 31347ಕ್ಕೇರಿದಂತಾಗಿದೆ. 1732 ಮಂದಿ ಸಾವನ್ನಪ್ಪಿದ್ದು, 52791 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 611 ಮಂದಿಯ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜಧಾನಿ ಬೆಂಗಳೂರು ನಗರದಲ್ಲಿ 2267 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 41467ಕ್ಕೇರಿಕೆಯಾಗಿದೆ.
ಉಳಿದಂತೆ ಮೈಸೂರಿನಲ್ಲಿ 281, ಉಡುಪಿಯಲ್ಲಿ 190, ಬಾಗಲಕೋಟೆಯಲ್ಲಿ 184, ದಕ್ಷಿಣ ಕನ್ನಡದಲ್ಲಿ 180, ಧಾರವಾಡದಲ್ಲಿ 174, ಕಲಬುರಗಿಯಲ್ಲಿ 159, ವಿಜಯಪುರದಲ್ಲಿ 158,ಬಳ್ಳಾರಿಯಲ್ಲಿ 136, ಹಾಸನದಲ್ಲಿ 118, ಬೆಳಗಾವಿಯಲ್ಲಿ 116, ಗದಗದಲ್ಲಿ 108, ರಾಯಚೂರಿನಲ್ಲಿ 107, ಚಿಕ್ಕಬಳ್ಳಾಪುರದಲ್ಲಿ 92, ಉತ್ತರಕನ್ನಡದಲ್ಲಿ 88, ಬೀದರ್‌ನಲ್ಲಿ 87, ದಾವಣಗೆರೆಯಲ್ಲಿ 77, ಶಿವಮೊಗ್ಗದಲ್ಲಿ 67, ತುಮಕೂರು, ಹಾವೇರಿಯಲ್ಲಿ ತಲಾ59, ಮಂಡ್ಯದಲ್ಲಿ 57, ಯಾದಗಿರಿಯಲ್ಲಿ 53, ಕೊಪ್ಪಳದಲ್ಲಿ 39, ಕೋಲಾರದಲ್ಲಿ 36, ಚಾಮರಾಜನಗದಲ್ಲಿ 33, ಚಿಕ್ಕಮಗಳೂರಿನಲ್ಲಿ 28, ಬೆಂಗಳೂರು ಗ್ರಾಮಾಂತರದಲ್ಲಿ 26, ಚಿತ್ರದುರ್ಗದಲ್ಲಿ 13, ರಾಮನಗರದಲ್ಲಿ 12, ಕೊಡಗಿನಲ್ಲಿ 3 ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಭಾತರ ಸೇರಿದಂತೆ ವಿಶ್ವದ ನಾನಾ ರಾಷ್ಟ್ರಗಳ ಕೊರೊನಾ ಸೋಂಕಿತರ ಅಂಕಿ ಅಂಶಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ view by country
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail