NEWSದೇಶ-ವಿದೇಶವಿಜ್ಞಾನ

ಸೆಲ್ಫಿ ತೆಗೆದುಕೊಳ್ಳಲು ಹೋದ ಯುವತಿಯರು ನದಿ ಮಧ್ಯೆ ಸಿಲುಕಿ ಪರದಾಟ!

ವಿಜಯಪಥ ಸಮಗ್ರ ಸುದ್ದಿ

ಮಧ್ಯಪ್ರದೇಶ: ಸೆಲ್ಫಿ ತೆಗೆದುಕೊಳ್ಳಲು ನದಿಯ ಮಧ್ಯಭಾಗಕ್ಕೆ ಹೋದಾಗ ಏಕಾಏಕಿ ನೀರು ಹೆಚ್ಚಾದ್ದರಿಂದ ಯುವತಿಯರಿಬ್ಬರು ಭಯಭೀತರಾದ ಘಟನೆ ಚಿಂದ್ವಾರ ಜಿಲ್ಲೆಯಲ್ಲಿ ನಡೆದಿದೆ.

ಆ ಯುವತಿಯರು ನದಿಯ ಮಧ್ಯಭಾಗದ ಬಂಡೆಯೊಂದ ಮೇಲೆ ನಿತ್ತಿದ್ದು, ಸುತ್ತಲು ನೀರು ತಂಬಿಕೊಂಡಿದ್ದರಿಂದ ದಿಕ್ಕುದೋಚದಂತ್ತಾಗಿ ಕಣ್ಣು ಮುಚ್ಚಿಕೊಂಡು ನಿಣತ್ತಿದ್ದರು.

ಜುನಾರ್ಡೋದಿಂದ ಆರು ಯುವತಿಯರ ತಂಡ ಚಿಂದ್ವಾರ ಜಿಲ್ಲೆಯಲ್ಲಿರುವ ಪೆಂಚ್‌ನದಿ ಸಮೀಪಕ್ಕೆ ಪ್ರವಾಸ ಹೊರಟ್ಟಿದ್ದರು. ಅವರಲ್ಲಿ ಮೇಘಾ ಜಾವ್ರೆ ಮತ್ತು ವಂದನಾ ತ್ರಿಪಾಠಿ ಎಂಬುವರು ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದರು. ಈ ವೇಳೆ ಏಕಾಏಕಿ ನೀರಿನ ಹರಿವು ಹೆಚ್ಚಾಗಿದೆ. ಇದರಿಂದ ಮತ್ತೆ ದಡಕ್ಕೆ ಬರಲು ಸಾಧ್ಯವಾಗದೆ ನದಿಯಲ್ಲಿದ್ದ ಬಂಡೆಯೊಂದರ ಮೇಲೆಯೇ ನಿಂತುಕೊಂಡಿದ್ದಾರೆ ಜತೆಗೆ ಭಯದಿಂದ ಚೀರಾಡಿದ್ದಾರೆ.

ಅವರ ಚೀರಾಟವನ್ನು ಕೇಳಿಸಿಕೊಂಡ ನದಿದಡದಲ್ಲಿದ್ದ ಇನ್ನುಳಿದ ನಾಲ್ವರು ಯುವತಿಯರು  ಬೆಚ್ಚಿಬಿದ್ದು ಪೊಲೀಸರಿಗೆ ಕರಮಾಡಿದ್ದಾರೆ. ಅಮೀಪದಲ್ಲೇ ಇದ್ದ ಪೊಲೀಸರು ಕೂಡಲೇ ಕಾರ್ಯಾಚರಣೆಗಿಳಿದಿದ್ದರು. ನಂತರ ಬಂದ ಇನ್ನಷ್ಟು ಪೊಲೀಸ್‌ ಸೇರಿ ಒಟ್ಟು 12 ಮಂದಿ ಪೊಲೀಸ್ ಸಿಬ್ಬಂದಿ, ಜಿಲ್ಲಾಡಳಿತ ಮತ್ತು ಸ್ಥಳೀಯರ ಹರಸಾಹಸ ಮಾಡಿ ಯುವತಿಯರನ್ನು ರಕ್ಷಿಸಿದ್ದಾರೆ.

ಇದು ಮಳೆಗಾಲದ ಸಮಯವಾಗಿರುವುದರಿಂದ ನದಿಯಲ್ಲಿ ಯಾವಾಗ ನೀರು ಹೆಚ್ಚಾಗುತ್ತದೋ ಎಂಬುವುದು ತಿಳಿಯುವುದಿಲ್ಲ. ಆದ್ದರಿಂದ ಈ ರೀತಿಯ ಸಾಹಸಗಳನ್ನು ಮಾಡಲು ಯಾರು ಮುಂದಾಗಬಾರದು ಎಂದು ಪೊಲೀಸ್‌ ಮತ್ತು ಜಿಲ್ಲಾಡಳಿತ ಎಚ್ಚರಿಕೆಯ ಸೂಚನೆ ನೀಡಿದೆ.

Leave a Reply

error: Content is protected !!
LATEST
160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ ಮೇಲುಸೇತುವೆ-ಕೆಳಸೇತುವೆಗಳ ನಿರ್ವಹಣೆ ಸರಿಯಾಗಿ ಮಾಡಿ: ತುಷಾರ್ ಗಿರಿನಾಥ್