ಬೆಂಗಳೂರು: ವಿಶ್ವ ಮಹಾಮಾರಿ ಕೊರೊನಾ ಇಂದು ರಾಜ್ಯದಲ್ಲಿ ಈವರೆಗೆ ಇದ್ದ ದಾಖಲೆಯನ್ನು ಮುರಿದಿದ್ದು, ಬರೋಬ್ಬರಿ 7883 ಮಂದಿಗೆ ವಕ್ಕರಿಸಿಕೊಂಡಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಒಟ್ಟು 196494 ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಕೊರೊನಾ ಸೋಂಕು ತನ್ನ ಮರಣ ಮೃದಂಗವನ್ನು ತೀವ್ರಗೊಳಿಸಿದ್ದು ಇಂದು 113 ಮಂದಿಯನ್ನು ಬಲಿಪಡೆದಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 3518 ಕ್ಕೆ (ಅನ್ಯ ಕಾರಣಕ್ಕೆ 8ಸೇರಿ) ಏರಿಕೆಯಾಗಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಒಟ್ಟಾರೆ 1,96,494 ಕೊರೊನಾ ಪ್ರಕರಣಗಳ ಪೈಕಿ 1,12,633 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು 80,343 ಮಂದಿ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ ಇಂದು 2,082 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇನ್ನು 23 ಮಂದಿ ಇಂದು ಮೃತಪಟ್ಟಿದ್ದಾರೆ.
ಇಂದಿನ 12/08/2020 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.@CMofKarnataka @BSYBJP @DVSadanandGowda @SureshAngadi_ @sriramulubjp @drashwathcn @BSBommai @mla_sudhakar @iaspankajpandey @Tejasvi_Surya @BBMP_MAYOR @BBMPCOMMhttps://t.co/pg6s4m7ijR pic.twitter.com/nPWly7uWYr
— K'taka Health Dept (@DHFWKA) August 12, 2020