NEWSದೇಶ-ವಿದೇಶನಮ್ಮರಾಜ್ಯ

ನೌಕರರ ಕನಿಷ್ಠ ವೇತನ, ಪಿಎಫ್ ಮಿತಿ ಹೆಚ್ಚಳಕ್ಕೆ 4ತಿಂಗಳ ಗಡುವು ಕೊಟ್ಟ ಸುಪ್ರೀಂ ಕೋರ್ಟ್‌-ಯಾರಿಗೆ ಲಾಭವಾಗಲಿದೆ ಗೊತ್ತಾ?

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಇಂದಿನ ಬೆಲೆ ಏರಿಕೆ ಆಕಾಶ ಮುಟ್ಟುತ್ತಿದ್ದು, ಇದು ಹಾಲಿನ ದರದಿಂದ ಹಿಡಿದು ಮನೆ ಬಾಡಿಗೆವರೆಗೆ ಎಲ್ಲವೂ ಡಬಲ್ ಆಗಿದೆ. ಆದರೆ, ಸಮಸ್ತ ನೌಕರರ ಪಿಎಫ್ (PF) ಕಡಿತವಾಗುವ ಮಿತಿ ಮಾತ್ರ ಕಳೆದ 11 ವರ್ಷಗಳಿಂದ ಕೇವಲ 15,000 ರೂಪಾಯಿಗಳಲ್ಲೇ ನಿಂತಿದೆ. “ಬೆಲೆ ಏರಿಕೆಗೆ ತಕ್ಕಂತೆ ಸಂಬಳ ಏರಲಿ, ಪಿಎಫ್ ಮಿತಿಯೂ ಬದಲಾಗಲಿ” ಎಂದು ಸಾರಿಗೆ ನೌಕರರು ಸೇರಿದಂತೆ  ಕೋಟ್ಯಂತರ ಖಾಸಗಿ ನೌಕರರ ಕೂಗಿತ್ತು. ಆ ಕೂಗಿಗೆ ಈಗ ಸುಪ್ರೀಂ ಕೋರ್ಟ್ ಧ್ವನಿಯಾಗಿದೆ.

ಹೌದು! ನೌಕರರಿಗೆ ಸಿಗಬೇಕಿರುವುದು ಕಾಲಕಾಲಕ್ಕೆ ಪರಿವರ್ತಿಸಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಅಲ್ಲದೆ ಈ ಮೂಲಕ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿರುವ ನ್ಯಾಯಾಲಯ, ಹಣದುಬ್ಬರ ಇಷ್ಟೊಂದು ಇರುವಾಗ ಇನ್ನೂ ಹಳೆಯ ನಿಯಮವನ್ನೇ ಏಕೆ ಹಿಡಿದುಕೊಂಡಿದ್ದೀರಿ ಎಂದು ಪ್ರಶ್ನಿಸಿದೆ.

ಆಗಲೇಬೇಕು ಹೊಸ ಬದಲಾವಣೆ: ಪ್ರಸ್ತುತ ನಿಯಮದಂತೆ, 15,000 ರೂ.ಗಳವರೆಗಿನ ಮೂಲ ವೇತನಕ್ಕೆ ಮಾತ್ರ ಇಪಿಎಫ್‌ಒ (EPFO) ನಿಯಮಗಳು ಕಡ್ಡಾಯವಾಗಿ ಅನ್ವಯಿಸುತ್ತವೆ. ಆದರೆ ಈಗಿನ ಕಾಲದಲ್ಲಿ ಕನಿಷ್ಠ ಕೂಲಿಯೇ 15,000 ರೂ.ದಾಟಿದೆ. ಹೀಗಾಗಿ, ಈ ಮಿತಿಯನ್ನು ಕನಿಷ್ಠ 21,000 ರೂ. ಅಥವಾ 25,000 ರೂ.ಗಳಿಗೆ ಹೆಚ್ಚಿಸಲು ಸುಪ್ರೀಂ ಕೋರ್ಟ್ ಸೂಚಿಸಿದೆ. ಇದರಿಂದ ಲಕ್ಷಾಂತರ ಹೊಸ ನೌಕರರು ಪಿಎಫ್ ಮತ್ತು ಪಿಂಚಣಿ ಯೋಜನೆಯ ವ್ಯಾಪ್ತಿಗೆ ಬರಲಿದ್ದಾರೆ. ಅಲ್ಲದೆ ಇದರಿಂದ ನಿವೃತ್ತಿಯ ಬಳಿಕ ಹೆಚ್ಚಿನ ಹಣ ಕೈ ಸೇರಲಿದೆ.

ನಿಮಗೆ ಸಿಗುವ ಲಾಭ ಎಷ್ಟುಗೊತ್ತಾ?: ಪ್ರಸ್ತುತ ಗರಿಷ್ಠ ವೇತನ ಮಿತಿ 15 ಸಾವಿರ ರೂಪಾಯಿ ಇದ್ದು, ಈಗ 1250 ರೂ. ಪಿಂಚಣಿಗೆ ಕಡಿತವಾಗುತ್ತಿದೆ. ಇದನ್ನು 25 ಸಾವಿರ ರೂ.ಗೆ ಏರಿಸಿದರೆ ಈಗ ಇರುವ 1250 ರೂ.ಗಳಿಂದ 2083 ರೂ. ಪಿಂಚಣಿ ಹಣ ನೌಕರನ ವೇತನದಿಂದ ಕಡಿತವಾಗುತ್ತದೆ. ಹೀಗೆ ಆದರೆ ಮಾಸಿಕ ಪಿಂಚಣಿ ವಂತಿಗೆ 1,250 ರೂ.ನಿಂದ 2,083 ರೂ.ಗೆ ಏರಿಕೆ ಆಗಿ ವಾರ್ಷಿಕ ಹೆಚ್ಚಿನ ಉಳಿತಾಯವು ಸುಮಾರು 10,000 ರೂ. ತಲುಪಲಿದೆ. ಈ ಎಲ್ಲದರ ವಿವರ ನೀಡಿರುವ ಸುಪ್ರೀಂ ಕೋರ್ಟ್ ಇದನ್ನು ಮುಂದಿನ 4 ತಿಂಗಳ ಒಳಗಾಗಿ ಜಾರಿ ಮಾಡಬೇಕು ಎಂಬ ಗಡುವನ್ನು ನೀಡಿದೆ.

ಯಾರಿಗೆ ಅನುಕೂಲ? ಈ ಬದಲಾವಣೆಯಿಂದ ಪ್ರಮುಖವಾಗಿ ಸಾರಿಗೆ ನಿಗಮಗಳ ನೌಕರರು, ಗಾರ್ಮೆಂಟ್ಸ್, ಸಣ್ಣ ಕಂಪನಿಗಳ ಉದ್ಯೋಗಿಗಳು ಮತ್ತು ಕನಿಷ್ಠ ವೇತನ ಪಡೆಯುವ ಕಾರ್ಮಿಕರಿಗೆ ಹೆಚ್ಚಿನ ಭದ್ರತೆ ಸಿಗಲಿದೆ. ಕಂಪನಿಗಳು ಕೂಡ ತಮ್ಮ ಪಾಲಿನ ವಂತಿಕೆಯನ್ನು ಹೆಚ್ಚಿಸಬೇಕಾಗಿರುವುದರಿಂದ, ನಿವೃತ್ತಿಯ ನಂತರ ಈ ಎಲ್ಲ ನೌಕರರ ಕೈಗೆ ಸಿಗುವ ಒಟ್ಟು ಮೊತ್ತ (Lumpsum) ಭಾರಿ ಪ್ರಮಾಣದಲ್ಲಿ ಹೆಚ್ಚಾಗಲಿದೆ.

ಇನ್ನು ಮುಂದಿನ 120 ದಿನಗಳು ಅಂದರೆ 4 ತಿಂಗಳು ಅತ್ಯಂತ ನಿರ್ಣಾಯಕವಾಗಿದ್ದು, ಕೇಂದ್ರ ಸರ್ಕಾರವು ಈ ಬಗ್ಗೆ ಅಧಿಕೃತ ಗೆಜೆಟ್ ಹೊರಡಿಸಲಿದೆ. ಅಲ್ಲಿಯವರೆಗೆ ನಿಮ್ಮ ಹಳೆಯ ಪಿಎಫ್ ಖಾತೆಯ ಇ-ಕೆವೈಸಿ (e-KYC) ಅಪ್ಡೇಟ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.

‘ಟೇಕ್ ಹೋಮ್’ ವೇತನ ಸ್ವಲ್ಪ ಇಳಿಯಬಹುದು: ಪ್ರಮುಖವಾಗಿ ನೌಕರರು ಗಮನಿಸಬೇಕಾದ ವಿಚಾರವೆಂದರೆ ಸರ್ಕಾರ ಈ ಮಿತಿಯನ್ನು ಹೆಚ್ಚಿಸಿದಾಗ ಕೈಗೆ ಸಿಗುವ ‘ಟೇಕ್ ಹೋಮ್’ ಸಂಬಳದಲ್ಲಿ ಸ್ವಲ್ಪ ಇಳಿಕೆಯಾಗಬಹುದು (ಯಾಕಂದರೆ ಪಿಎಫ್ ಕಡಿತ ಹೆಚ್ಚಾಗುತ್ತದೆ). ಆದರೆ ನೆನಪಿಡಿ, ಇದು ನಿಮ್ಮ ಭವಿಷ್ಯದ ಪಿಂಚಣಿಗೆ ವರದಾನ. ಸಾಧ್ಯವಾದರೆ, ಈಗಿನಿಂದಲೇ ನಿಮ್ಮ UAN (Universal Account Number) ಗೆ ಆಧಾರ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಆಗಿದೆಯೇ ಎಂದು ಪರಿಶೀಲಿಸಿ. ಸರ್ವರ್ ಸಮಸ್ಯೆ ಇರುವುದರಿಂದ ಈ ಕೆಲಸವನ್ನು ರಾತ್ರಿ 9 ಗಂಟೆಯ ನಂತರ ಇಪಿಎಫ್‌ಒ ಪೋರ್ಟಲ್‌ನಲ್ಲಿ ಮಾಡುವುದು ಉತ್ತಮ.

ಸಾಮಾನ್ಯ ಪ್ರಶ್ನೆಗಳು:
1)ವೇತನ ಮಿತಿ ಹೆಚ್ಚಾದರೆ ನೌಕರರ ಸಂಬಳ ಕಮ್ಮಿಯಾಗುತ್ತದೆಯೇ?
ಉತ್ತರ: ಹೌದು, ನೌಕರರ ಮೂಲ ವೇತನದ ಮೇಲೆ ಕಡಿತವಾಗುವ ಪಿಎಫ್ ಮೊತ್ತ ಹೆಚ್ಚಾಗುವುದರಿಂದ ಕೈಗೆ ಸಿಗುವ ಸಂಬಳ ಸ್ವಲ್ಪ ಕಡಿಮೆ ಎನಿಸಬಹುದು. ಆದರೆ, ಸಂಸ್ಥೆಯ ಮಾಲೀಕರು ಅಷ್ಟೇ ಪ್ರಮಾಣದ ಹಣವನ್ನು ನೌಕರರ ಖಾತೆಗೆ ಜಮಾ ಮಾಡುವುದರಿಂದ ದೀರ್ಘಾವಧಿಯಲ್ಲಿ ನೌಕರರಿಗೆ ಇದು ಭಾರಿ ಲಾಭವಾಗಲಿದೆ.

2) ಈ ನಿಯಮ ಯಾವಾಗ ಜಾರಿಗೆ ಬರಬಹುದು?
ಉತ್ತರ: ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ 4 ತಿಂಗಳ ಕಾಲಾವಕಾಶ ನೀಡಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, 2026ರ ಹಣಕಾಸು ವರ್ಷದ ವೇಳೆಗೆ ಹೊಸ ‘EPFO 3.0’ ನಿಯಮಗಳು ಜಾರಿಯಾಗುವ ಸಾಧ್ಯತೆಯಿದೆ. ಇದರಿಂದ ಲಕ್ಷಾಂತ ನೌಕರರಿಗೆ ಅನುಕೂಲವೂ ಆಗಲಿದೆ.

Megha
the authorMegha

Leave a Reply

error: Content is protected !!
Latest news
NWKRTC: ಧಾರವಾಡ ಗ್ರಾ.ವಿಭಾಗದ ನಿವೃತ್ತ ಅಧಿಕಾರಿಗಳಿಗೆ ಹೃದಯಸ್ಪರ್ಷಿ ಬೀಳ್ಕೊಡುಗೆ KSRTC: ಮೂರು ದಶಕಗಳ ಸುದೀರ್ಘ ಸೇವೆ ಬಳಿಕ ಸಂಸ್ಥೆಯ ಬಸ್‌ ಚಾಲಕ ನಿವೃತ್ತಿ-  ಮರೆಯಲಾಗದ ಸಂದರ್ಭ ಸೆರೆ! ಇಂಧನ, ಗ್ಯಾಸ್ ಬೆಲೆಯೇರಿಕೆ, ವಿದ್ಯುತ್ ಖಾಸಗೀಕರಣ ವಿರೋಧಿಸಿ ರಾರೈಸಂ ಪ್ರತಿಭಟನೆ -ಸರ್ಕಾರಗಳ ವಿರುದ್ಧ ಘೋಷಣೆ KKRTC: ಬಸ್ ನಿಲ್ದಾಣದಲ್ಲಿ ಮಹಿಳೆ ಜತೆ ಅನುಚಿತ ವರ್ತನೆ-ಕಿಡಿಗೇಡಿಗೆ ಚಪ್ಪಲಿ ಏಟು ಪ್ರಮಾಣ ವಚನ ಸ್ವೀಕಾರಕ್ಕೆ ಮುಹೂರ್ತ ಫಿಕ್ಸ್ – ಜೂ.3ರಂದು ನೂತನ ಸಿಎಂಆಗಿ ಗದ್ದುಗೆ ಏರಲಿರುವ ಡಿ.ಕೆ.ಶಿವಕುಮಾರ್‌ ಪೆಟ್ರೋಲ್‌, ಡೀಸೆಲ್‌ ಬಳಿಕ CNG ದರದಲ್ಲೂ ಏರಿಕೆ- ಎರಡನೇ ಬಾರಿಗೆ 2ರೂ. ಹೆಚ್ಚಳ -ಗ್ರಾಹಕರಿಗೆ ಶಾಕ್‌ ಕೊಟ್ಟ MGL ಆದೇಶ ಕಾಯ್ದಿರಿಸಿದ 3 ತಿಂಗಳೊಳಗಾಗಿ ಎಲ್ಲ ಕೋರ್ಟ್‌ಗಳಲ್ಲೂ ಅಂತಿಮ ತೀರ್ಪು ಹೊರಬೀಳಬೇಕು: ಸುಪ್ರೀಂ ಮಹತ್ವದ ಆದೇಶ ಗೃಹಲಕ್ಷ್ಮಿ ಹಣ ಮೃತರ ಖಾತೆಗೆ ಜಮೆ ಆಗದಂತೆ ನೋಡಿಕೊಳ್ಳಿ: ಅಧಿಕಾರಿಗಳಿಗೆ ಗ್ಯಾರಂಟಿ ಯೋಜನೆ ಅಧ್ಯಕ್ಷ ತಾಕೀತು ವಿದ್ಯುತ್ ಗ್ರಾಹಕರಿಗೆ ಗುಡ್‌ನ್ಯೂಸ್‌: ಬಿಲ್‌ಗಳಿಗೆ ಕನಿಷ್ಠ 15 ದಿನಗಳ ಪಾವತಿ ಅವಧಿ ಕಡ್ಡಾಯ ಮಾಡಿ KERC ಆದೇಶ- ಜೂನ್‌... BMTC KSRTC ನಿವೃತ್ತ ನೌಕರರ ಪ್ರತಿಭಟನೆ: ಕನಿಷ್ಠ ಪಿಂಚಣಿ 7500 ರೂ. ನೀಡಲು ಆಗ್ರಹ