ರೈತರಿಗೆ ಕಿರುಕುಳ ಕೊಡುತ್ತಿರುವ ಕಾವೇರಿ ಗ್ರಾಮೀಣ ಬ್ಯಾಂಕ್: ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಲು ಅನ್ನದಾತರ ನಿರ್ಧಾರ

ಮೈಸೂರು: ಕಾವೇರಿ ಗ್ರಾಮೀಣ ಬ್ಯಾಂಕ್ ಸಾಲ ವಸೂಲಾತಿ ಮಾಡುವ ನೆಪದಲ್ಲಿ ರೈತರಿಗೆ ಕಿರುಕುಳ ಕೊಡುತ್ತಿದ್ದು, ಇದರ ವಿರುದ್ಧ ಕೇಂದ್ರ ಕಚೇರಿಗೆ ರೈತರ ನಿಯೋಗ ಮುತ್ತಿಗೆ ಹಾಕಲು ನಿರ್ಧರಿಸಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ತಿಳಿಸಿದ್ದಾರೆ.

ಇಂದು ನಗರದಲ್ಲಿ ನಡೆದ ರೈತ ಮುಖಂಡರ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ ಅವರು, ಎಲ್ಲ ಬ್ಯಾಂಕುಗಳು ಒಟಿಎಸ್‌ನಲ್ಲಿ ಸಾಲ ತಿರುವಳಿ ಮಾಡಿಕೊಳ್ಳುತ್ತಿದ್ದಾರೆ. ಕಾವೇರಿ ಗ್ರಾಮೀಣ ಬ್ಯಾಂಕಿನ ಶಾಖೆಗಳಲ್ಲಿ ಒಟಿಎಸ್‌ನಲ್ಲಿ ಸಾಲ ತಿರುವಳಿ ಮಾಡಲು ರೈತರಿಗೆ ಕಿರುಕುಳ ನೀಡುತ್ತಿದ್ದಾರೆ.
ಇನ್ನು ಈ ಬಗ್ಗೆ ಜ.29ರಂದು ಮುಖ್ಯ ಕಚೇರಿ, ಬಳ್ಳಾರಿಗೆ ಸಮಸ್ಯೆ ಇರುವ ರೈತರ ಜತೆ ಹೋಗಿ ರೈತರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ವಿವರಿಸಲಾಗುವುದು. ಅಂದು ಸಮಸ್ಯೆ ಸರಿಪಡಿಸಲು ಒತ್ತಾಯಿಸಲಾಗುವುದು ಎಂದು ಕುರುಬೂರು ಶಾಂತಕುಮಾರ್ ತಿಳಿಸಿದರು
ವಾಜಮಂಗಲದಿಂದ ಕಡಕೊಳ ತನಕ ರೈತರ ಜಮೀನಿನಲ್ಲಿ ವಿದ್ಯುತ್ ಸ್ಥಾವರ ನಿರ್ಮಾಣ ಹಾಗೂ ಹೈಟೆಂಶನ್ ತಂತಿ ಹಾದುಹೋಗುವ ಜಮೀನುಗಳಿಗೆ ಪರಿಹಾರದ ಮೊತ್ತವನ್ನು 4 ಪಟ್ಟು ಹೆಚ್ಚಿಸಲಾಗಿದೆ ಈ ಬಗ್ಗೆ ರೈತರು ಚಿಂತನೆ ನಡೆಸಬೇಕು ಎಂದರು.
ಇಂದಿನ ಸಭೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾಧ್ಯಕ್ಷ ಸೋಮಶೇಖರ್, ಮೈಸೂರು ತಾಲೂಕು ಅಧ್ಯಕ್ಷ ವೆಂಕಟೇಶ್, ಮಾರ್ಬಳ್ಳಿ ನೀಲಕಂಠಪ್ಪ, ವರಕೋಡು ನಾಗೇಶ್, ದೇವನೂರು ವಿಜಯೇಂದ್ರ, ಅಂಬಳೆ ಮಂಜುನಾಥ್, ಕೋಟೆ ಸುನೀಲ್, ದೇವನೂರು ಮಹದೇವಸ್ವಾಮಿ, ರವಿಕುಮಾರ್, ರಂಗರಾಜು, ನಂಜುಂಡಸ್ವಾಮಿ, ನಾಗೇಂದ್ರ, ಮಂಟೇಸ್ವಾಮಿ, ಶಿವಣ್ಣ, ಕಮಲಮ್ಮ, ಪ್ರಭಾಕರ್, ಕೂಡನಹಳ್ಳಿ ಸೋಮಣ್ಣ, ಮೆಗಳ ಕೊಪ್ಪಲು ಕುಮಾರ್ ಇನ್ನು ಮುಂತಾದ ರೈತರು ಇದ್ದರು.
Related









