ಬೆಂಗಳೂರು: ಯಲಹಂಕ ನಾಲ್ಕನೇ ಹಂತದ ಬಸ್ಸ್ಟ್ಯಾಂಡ್ನಲ್ಲಿ ನಿರ್ವಾಹಕನಿಗೆ ಬಸ್ ಗುದ್ದಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಇಂದು (ಮೇ 9) ಸಂಜೆ ಜರುಗಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಘಟಕ -30ರ ನಿರ್ವಾಹಕ ಸೋಮಣ್ಣ ಸ್ಥಳದಲ್ಲೇ ಅನುನೀಗಿದವರು.
ಪುಟ್ಟೇನಹಳ್ಳಿಯ ಬಿಎಂಟಿಸಿ ಘಟಕ 30ರಿಂದ ಹೊರ ಬಂದ ಎಲೆಕ್ಟ್ರಿಕ್ ವಾಹನ ಫ್ಲಾಟ್ ಫಾರ್ಮ್ನಲ್ಲಿ ನಿಲ್ಲಬೇಕಿತ್ತು. ಆದರೆ, ಈ ವೇಳೆ ಚಾಲಕ ಬ್ರೇಕ್ ಬದಲು ಎಕ್ಸ್ಲೆಟರ್ ಅನ್ನು ತುಳಿದ ಕಾರಣ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಇನ್ನು ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ, ಅವಘಡ ಯಾವರೀತಿ ಸಂಭವಿಸಿದೆ ಎಂದರೆ, ನಿರ್ವಾಹಕ ಸೋಮಣ್ಣ ಅವರಿಗೆ ಬಸ್ ಗುದ್ದಿದ ರಭಸಕ್ಕೆ ಅವರ ಹೈದಯವೇ ಕಿತ್ತು ಹೊರಬಂದಿದೆ.
ಅಲ್ಲದೆ ಆ ಹೃದಯ ನೆಲದ ಮೇಲೆ ಬಿದ್ದಿದ್ದು ಅದು ಸುಮಾರು 3-4 ನಿಮಿಷಗಳವರೆಗೆ ಜೀವಂತವಾಗತ್ತು. ಇದನ್ನು ಸ್ಥಳದಲ್ಲೇ ಇದ್ದ ನೌಕರರು ವಿಡಿಯೋ ಮಾಡಿದ್ದು ಆ ಜೀವಂತವಾಗಿದ್ದ ಹೃದಯದ ಭಾಗವನ್ನು ತೋರಿಸಿದ್ದಾರೆ.
ಇನ್ನು ಅಪಘಾತದಿಂದ ಸೋಮಣ್ಣ ಅವರ ಹೊಟ್ಟೆ ಭಾಗಗಕ್ಕೆ ಬಲವಾದ ಪೆಟ್ಟುಬಿದ್ದಿದ್ದು ದೇಹದ ಹಲವು ಭಾಗಗಳು ಹೊರಬಂದಿವೆ. ಅಂದರೆ ಬಸ್ ನಿಲ್ದಾಣದಲ್ಲಿ ಬಸ್ ಎಷ್ಟು ವೇಗವಾಗಿ ಚಲಿಸಿದೆ ಎಂಬುದು ಇದರಿಂದ ತಿಳಿದು ಬರುತ್ತದೆ.
ಅಪಘಾತದಿಂದ ತೀವ್ರ ರಕ್ತಸ್ರಾವವಾಗಿದ್ದು ಕೆಲವೇ ನಿಮಿಷಗಳಲ್ಲಿ ಸ್ಥಳದಲ್ಲೇ ಅಸುನೀಗಿದ್ದಾರೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬಿಎಂಟಿಸಿ ಉತ್ತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಮತ್ತು ಡಿಪೋ ವ್ಯವಸ್ಥಾಪಕರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ಬೇಜವಾಬ್ದಾರಿಯಿಂದ ವರ್ತಿಸುವ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಚಾಲಕ – ಉಡಾಫೆ ವರ್ತನೆ : ಪ್ರಯಾಣಿಕ ಲೋಕೇಶ್ ಆರೋಪ