ಫ್ಲೋರಿಡಾ: ಹೆಲ್ಮೆಟ್ ವಿರುದ್ಧ ಹೋರಾಟವನ್ನು ನಡೆಸಿದ್ದ ವಕೀಲರೊಬ್ಬರು ದುರದೃಷ್ಟ ಎಂಬಂತೆ ಅಪಘಾತದಲ್ಲಿ ಮೃತಪಟ್ಟಿದ್ದು, ಹೆಲ್ಮೆಟ್ ಇಲ್ಲದೆ ತಲೆಗೆ ಪೆಟ್ಟಾಗಿ ಮೃತಪಟ್ಟ ಘಟನೆ ಫ್ಲೋರಿಡಾದಲ್ಲಿ ವರದಿಯಾಗಿದೆ.
ಫ್ಲೋರಿಡಾದ 66 ವರ್ಷದ ರಾನ್ ಸ್ಮಿತ್ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದು,ಈ ವೇಳೆ ಅವರು ಹೆಲ್ಮೆಟ್ ಧರಿಸಿರಲಿಲ್ಲ ಎನ್ನುವುದು ತಿಳಿದು ಬಂದಿದೆ. ವಾಹನ ದಟ್ಟಣೆ ಮಧ್ಯೆ ಎದುರಿಗಿದ್ದ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ರಾನ್ ಸ್ಮಿತ್ ಜೋರಾಗಿ ಬ್ರೇಕ್ ಹಾಕಿದ್ದಾರೆ.ಇದರಿಂದ ಬೈಕ್ ನಿಂದ ಬಿದ್ದ ರಾನ್ ಸ್ಮಿತ್ ಗಂಭೀರವಾಗಿ ತಲೆಗೆ ಗಾಯಗೊಂಡು ಮೃತಪಟ್ಟಿದ್ದಾರೆ.
2000ನೇ ಇಸವಿಯ ವೇಳೆ ಪ್ಲೋರಿಡಾದಲ್ಲಿ ಹೆಲ್ಮೆಟ್ ಕುರಿತ ಚರ್ಚೆಯ ವೇಳೆ ಭಾರೀ ವಿವಾದ ಉಂಟಾಗಿತ್ತು.ಈ ವೇಳೆ ಸ್ಮಿತ್,ಪ್ರತಿಯೊಬ್ಬರೂ ತಮ್ಮದೇ ಆದ ಆಯ್ಕೆಯನ್ನು ಹೊಂದಿರಬೇಕು ಎಂದು ಹೋರಾಟ ನಡೆಸಿದ್ದರು.
ಸುಮಾರು ಒಂದು ದಶಕದವರೆಗೆ,ಫ್ಲೊರಿಡಾದ ಪಿನೆಲ್ಲಾಸ್ ಕೌಂಟಿಯ ಅಟಾರ್ನಿ ಆಗಿದ್ದ ರಾನ್ ಸ್ಮಿತ್, ಹೆಲ್ಮೆಟ್ಗಳನ್ನು ಧರಿಸಬೇಕು ಎಂದು ಹೇಳುವ ಕಾನೂನುಗಳ ವಿರುದ್ಧ ಹೋರಾಡಿದ್ದರು. ಅಂತಿಮವಾಗಿ, ರಾಜ್ಯದ ಕಾನೂನು ಬದಲಾಗಿತ್ತು.