CrimeNEWSದೇಶ-ವಿದೇಶ

ಭಾರತದ ಜಾಹ್ನವಿ ಕಂಡುಲಾ ವಿದ್ಯಾರ್ಥಿನಿ ಅಪಘಾತ ಪ್ರಕರಣಕ್ಕೆ ಹೊಸ ತಿರುವು: ಸಾಯಿಸಿ ಪೊಲೀಸ್‌ ಅಧಿಕಾರಿ ದರ್ಪ

ವಿಜಯಪಥ ಸಮಗ್ರ ಸುದ್ದಿ

ವಾಷಿಂಗ್ಟನ್‌: ಕಳೆದ ಜನವರಿ 26 – 2023ರಂದು ಅಮೆರಿಕದ ಸಿಯಾಟಲ್‌ನಲ್ಲಿ ಭಾರತದ ಜಾಹ್ನವಿ ಕಂಡುಲಾ (23) ಎಂಬ ವಿದ್ಯಾರ್ಥಿನಿ ಅಪಘಾತದಲ್ಲಿ ಮೃತಪಟ್ಟ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಅಪಘಾತ ಮಾಡಿದ ಪೊಲೀಸ್‌ ಅಧಿಕಾರಿ ದರ್ಪ ಮೆರೆದಿರುವುದು ಬಟಬಯಲಾಗಿದೆ.

ಹೌದು! ಜಾಹ್ನವಿ ಕಂಡುಲಾ ಅವರಿಗೆ ಪೊಲೀಸ್‌ ವಾಹನ ಡಿಕ್ಕಿಯಾಗಿದ್ದು, ಇದಾದ ಬಳಿಕ ಪೊಲೀಸ್‌ ಅಧಿಕಾರಿ ದರ್ಪ ತೋರಿದ ವಿಡಿಯೋ ಈಗ ವೈರಲ್‌ ಆಗಿದೆ. ಹಾಗೆಯೇ, ಪೊಲೀಸರ ದರ್ಪವನ್ನು ಭಾರತ ಖಂಡಿಸಿದ್ದು, ತನಿಖೆ ನಡೆಸಿ ಆ ಅಧಿಕಾರಿಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ.

ಕಳೆದ ಜನವರಿಯಲ್ಲಿ ಸಿಯಾಟಲ್‌ನಲ್ಲಿ ಜಾಹ್ನವಿಗೆ ಪೊಲೀಸ್‌ ವಾಹನ ಡಿಕ್ಕಿಯಾಗಿದೆ. ಪೊಲೀಸ್‌ ಅಧಿಕಾರಿ ಕೆವಿನ್‌ ಡೇವ್‌ ಎಂಬುವರು ಗಂಟೆಗೆ ಸುಮಾರು 120 ಕಿಲೋಮೀಟರ್‌ ವೇಗದಲ್ಲಿ ವಾಹನ ಚಲಾಯಿಸುತ್ತಿದ್ದಾಗ ಜಾಹ್ನವಿ ಅವರಿಗೆ ಡಿಕ್ಕಿಯಾಗಿದೆ. ಇದೇ ವೇಳೆ ವಾಹನದಲ್ಲಿದ್ದ ಸಿಯಾಟಲ್‌ ಪೊಲೀಸ್‌ ಆಫೀಸರ್ಸ್‌ ಗಿಲ್ಡ್‌ ಉಪಾಧ್ಯಕ್ಷ ಡ್ಯಾನಿಯಲ್‌ ಆಡೆರರ್‌ ಅಪಘಾತದ ಕುರಿತು ಜೋಕ್‌ ಮಾಡಿದ್ದಾರೆ.

ಅಪಹಾಸ್ಯ ಮಾಡಿದ ವಿಡಿಯೋದಲ್ಲೇನಿದೆ: “ಓಹ್‌ ಅವಳು ಸತ್ತೇ ಹೋದಳು. 11 ಸಾವಿರ ಡಾಲರ್‌ ಮೊತ್ತದ ಚೆಕ್‌ ಬರೆದು ಬಿಸಾಡೋಣ. ಓಹ್, ಅವಳಿಗೆ 26 ವರ್ಷ ವಯಸ್ಸಲ್ಲ, ಹಾಗಾದರೆ ಅವಳ ಜೀವಕ್ಕೆ ಹೆಚ್ಚಿನ ಬೆಲೆ ಇಲ್ಲ” ಎಂದು ನಕ್ಕಿರುವ ವಿಡಿಯೋ ಈಗ ಲಭ್ಯವಾಗಿದೆ. ಹಾಗಾಗಿ, ಜಾಹ್ನವಿ ಕಂಡುಲಾ ಸಾವಿನ ಕುರಿತು ಭಾರತ ಹಾಗೂ ಅಮೆರಿಕದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರಕರಣದ ಕುರಿತು ಸಂಪೂರ್ಣ ತನಿಖೆಯಾಗಬೇಕು ಎಂಬ ಆಗ್ರಹವು ಬುಗಿಲೆದ್ದಿದೆ.

ಜಾಹ್ನವಿ ಕಂಡುಲಾ ಸಾವಿನ ಕುರಿತು ಅಪಹಾಸ್ಯ ಮಾಡಿ ನಕ್ಕ ವಿಡಿಯೋ ವೈರಲ್‌ ಆಗುತ್ತಲೇ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿರುವ ಭಾರತದ ಕಾನ್ಸುಲೇಟ್‌ ಖಂಡನೆ ವ್ಯಕ್ತಪಡಿಸಿದೆ. “ಇದು ಅತ್ಯಂತ ಅಪಾಯಕಾರಿ ಘಟನೆಯಾಗಿದೆ. ಇಂತಹ ಪ್ರಕರಣಗಳನ್ನು ನಾವು ಸಹಿಸುವುದಿಲ್ಲ. ಕೂಡಲೇ ಪ್ರಕರಣದ ಕುರಿತು ಸಮಗ್ರ ತನಿಖೆಯಾಗಬೇಕು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು” ಎಂದು ಆಗ್ರಹಿಸಿದೆ.

ಇನ್ನು ಇತ್ತ ಭಾರಿ ಆಕ್ರೋಶ ವ್ಯಕ್ತವಾದ ಬಳಿಕ, ಸಮಗ್ರ ತನಿಖೆ ಮಾಡಲಾಗುವುದು ಎಂದು ಸಿಯಾಟಲ್‌ ಪೊಲೀಸರು ತಿಳಿಸಿದ್ದಾರೆ.

ಆಂಧ್ರಪ್ರದೇಶದ ಕಡಪ ಮೂಲದವರಾದ ಜಾಹ್ನವಿ ಕಂಡುಲಾ ಅವರು ಸಿಯಾಟಲ್‌ನಲ್ಲಿರುವ ನಾರ್ತ್‌ ಈಸ್ಟ್‌ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದರು. 2023ರ ಜನವರಿ 26ರಂದು ಅವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದೇ ಭಾವಿಸಲಾಗಿತ್ತು. ಆದರೆ, ಅತಿಯಾದ ವೇಗದಿಂದ ವಾಹನ ಚಲಾಯಿಸಿದ ಪೊಲೀಸ್‌ ಅಧಿಕಾರಿಗಳು, ಅಪಘಾತದ ಬಳಿಕ ಅಪಹಾಸ್ಯ ಮಾಡಿರುವ ವಿಡಿಯೋ ಹರಿದಾಡಿದ್ದು, ಪ್ರಕರಣವೀಗ ಗಂಭೀರ ಸ್ವರೂಪ ತಾಳಿದೆ.

Leave a Reply

error: Content is protected !!
LATEST
ಸ್ಯಾಂಡಲ್‌ವುಡ್‌ ಹಿರಿಯ ನಟ ಟಿ.ತಿಮ್ಮಯ್ಯ ಹೃದಯಾಘಾತದಿಂದ ನಿಧನ NWKRTCಯ 27ನೇ ಸಂಸ್ಥಾಪನಾ ದಿನ- 2023-24 ನೇ ಸಾಲಿನ ಅತ್ಯುತ್ತಮ ವಿಭಾಗ, ಉತ್ತಮ ಘಟಕ, ಅತ್ಯುತ್ತಮ ಅಧಿಕಾರಿಗಳಿಗೆ ಪುರಸ... KKRTC ಅಧಿಕಾರಿಗಳ ನಡೆಯಿಂದ ನೊಂದ ತಾಳಿಕೋಟೆ ಘಟಕ ಚಾಲಕನಿಂದ ದಯಾಮರಣಕ್ಕಾಗಿ ರಾಜ್ಯಪಾಲರಿಗೆ ಅರ್ಜಿ KSRTC: ₹30 ಸಾವಿರ ಲಂಚ ಪಡೆದ ಬಳಿಕ ಗುತ್ತಿಗೆ ಚಾಲಕರ ನೇಮಕ - 11 ತಿಂಗಳ ಬಳಿಕ ₹30 ಸಾವಿರದಿಂದ ₹18 ಸಾವಿರಕ್ಕೆ ಇಳಿದ ... ಅಕ್ರಮ ಹಣ ಸಂಪಾದನೆ: ಅಬಕಾರಿ ಉಪ ನಿರೀಕ್ಷಕನಿಗೆ 3 ವರ್ಷ ಕಠಿಣ ಶಿಕ್ಷೆ, ₹50 ಲಕ್ಷ ದಂಡ ಪೋಸ್ಟ್ ಆಫೀಸ್ ಸೇವೆಗಳು ಈಗ ಗ್ರಾಮ ಒನ್ ಕೇಂದ್ರಗಳಲ್ಲೂ ಲಭ್ಯ 5ವರ್ಷದೊಳಗಿನ ಮಕ್ಕಳಿಗೆ PCV ಲಸಿಕೆ ಹಾಕಿಸಿ: ಸುರಳ್ಕರ್ ವಿಕಾಸ್ ಕಿಶೋರ್ KSRTC: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತುಮಕೂರು ಘಟಕ 1-2ರ ಗುತ್ತಿಗೆ ಚಾಲಕರಿಂದ ದಿಢೀರ್‌ ಪ್ರತಿಭಟನೆ ಮೆಜೆಸ್ಟಿಕ್‌: KSRTC ಟಿಸಿಗಳಿಗೆ ಕಂಡಕ್ಟರ್‌ಗಳು ₹10 ಕೊಟ್ಟರಷ್ಟೆ ಲಾಗ್‌ಶೀಟ್‌ ಮೇಲೆ ಸಹಿ ಇಲ್ಲದಿದ್ದರೆ ಕ್ಲಾಸ್‌ !!? ಕನಸನ್ನು ನನಸಾಗಿಸಲು ಪ್ರಯತ್ನ ಮುಖ್ಯ: ಮಕ್ಕಳಿಗೆ ಡಿಸಿಎಂ ಶಿವಕುಮಾರ್ ಕಿವಿಮಾತು