Please assign a menu to the primary menu location under menu

CrimeNEWSನಮ್ಮಜಿಲ್ಲೆ

ಸ್ಕೂಟರ್‌ಗೆ ಗುದ್ದಿದ ಕೋಲೆ ಬಸವ ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾದ ಸವಾರ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೋಲೆ ಬಸವನಿಂದ ನಡೆದ ಭಯಾನಕ ಅಪಘಾತದಲ್ಲಿ ಕ್ಯಾಂಟರ್ ಚಾಲಕನ ಸಮಯಪ್ರಜ್ಞೆಯಿಂದ ಬೈಕ್ ಸವಾರನ ಜೀವ ಉಳಿದಿದೆ.

ಈ ಘಟನೆ ನಗರದ ಮಹಾಲಕ್ಷ್ಮಿ ಲೇಔಟ್​ನ ಸ್ವಿಮ್ಮಿಂಗ್ ಪೂಲ್ ಜಂಕ್ಷನ್ ಬಳಿ ನಡೆದಿದೆ. ದಾರಿಯಲ್ಲಿ ಬರುತ್ತಿದ್ದ ಕೋಲೆ ಬಸವ ಶಾಂತವಾಗಿಯೇ ಬಂದು ಒಮ್ಮಿಂದ ಒಮ್ಮೆಲೆ ಎದುರಿಗೆ ಬರುತ್ತಿದ್ದ ಸ್ಕೂಟಿಗೆ ಗುದ್ದಿದೆ. ಪರಿಣಾಮ ಸ್ಕೂಟರ್‌ ಸವಾರ ಲಾರಿಯ ಹಿಂಬದಿ ಚಕ್ರಕ್ಕೆ ಸುಲುಕಬೇಕಿತ್ತು. ಆದರೆ ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅಪಘಾತ ತಪ್ಪಿದಂತಾಗಿದೆ.

ಹೌದು! ಕೋಲೆ ಬಸವ ಈ ರೀತಿ ಒಮ್ಮಿಂದ್‌ ಒಮ್ಮೆಲೇ ವರ್ತಿಸಿದ್ದು ಮಾತ್ರ ಭಯ ಬೀಳಿಸುವಂತಿದೆ. ಸದ್ಯ ಈ ಅಪಘಾತದ ದೃಶ್ಯ ನೋಡಿದರೆ ಒಂದು ಬಾರಿ ಎದೆಯೆಲ್ಲ ನಡುಗಿ ಹೋಗುತ್ತದೆ. ಸ್ಕೂಟರ್‌ ಸವಾರ ತನ್ನ ಪಾಡಿಗೆ ತಾನು ಹೋಗುತ್ತಿದ್ದ. ಇದೇ ವೇಳೆ ಎದುರುಗಡೆಯಿಂದ ಕೋಲೆ ಬಸವನ ಹಿಡಿದುಕೊಂಡು ಮಹಿಳೆಯೊಬ್ಬರು ಬರುತ್ತಿದ್ದರು.

ಅವರ ಪಕ್ಕದಲ್ಲಿ ಕ್ಯಾಂಟರ್ ಲಾರಿ ಕೂಡ ಹೋಗುತ್ತಿತ್ತು. ಆದರೆ, ಕೋಲೆ ಬಸವನಿಗೆ ಅದು ಏನಾಯಿತೋ ಏನು ಗೊತ್ತಿಲ್ಲ. ಮುಂದೆ ಬರುತ್ತಿದ್ದ ಬೈಕ್​ಗೆ ಭಯಾನಕವಾಗಿ ಗುದ್ದಿ ಓಡಿ ಹೋಗಿದೆ. ಈ ವೇಳೆ ಸವಾರ ಕ್ಯಾಂಟರ್​ ಚಕ್ರದಡಿಗೆ ಬಿದ್ದಿದ್ದಾನೆ. ತಕ್ಷಣ ಎಚ್ಚೆತ್ತ ಚಾಲಕ ಬ್ರೇಕ್ ಹಾಕಿ ಕ್ಯಾಂಟರ್ ನಿಲ್ಲಿಸಿದ್ದಾನೆ. ಇದರಿಂದ ಬೈಕ್​ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

Leave a Reply

error: Content is protected !!
LATEST
Kho Kho World Cup 2025: ತಿ.ನರಸೀಪುರದ ಚೈತ್ರಾ ನಾಡು, ದೇಶದ ಕೀರ್ತಿಯ ಮುಗಿಲೆತ್ತೆಕ್ಕೆ ಹಾರಿಸಿದ ಅಪ್ಪಟ ಗ್ರಾಮೀಣ ಪ... ಜಗಜಿತ್ ದಲೈವಾಲ 53 ದಿನಗಳ ಉಪವಾಸ ಕೈ ಬಿಟ್ಟು ಚಿಕಿತ್ಸೆಗೆ ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ: ಕುರುಬೂರ್ ಶಾಂತಕುಮಾರ್ KSRTC ಬಸ್‌ ಬ್ರೇಕ್‌ ವೈಫಲ್ಯಗೊಂಡು ಪಲ್ಟಿ: 30ಕ್ಕೂ ಹೆಚ್ಚು ಮಂದಿಗೆ ಗಾಯ BMTC ಎಲೆಕ್ಟ್ರಿಕ್ ಬಸ್ ಬ್ರೇಕ್ ವೈಫಲ್ಯ: ಡಾಬಾ, ಬೀಡಾ ಅಂಗಡಿಗೆ ಡಿಕ್ಕಿ KSRTC: ಅಧಿಕಾರಿಗಳು, ಸಿಬ್ಬಂದಿಗಳಿಗೂ ಕಿರುಕುಳ ನೀಡುತ್ತಿದ್ದ ಸಂಚಾರಿ ನಿರೀಕ್ಷಕ ಉಮೇಶ್‌  ವಜಾ- ಸಿಟಿಎಂ ಆದೇಶ ಬೆಂಗಳೂರಿನಲ್ಲಿ ಶಾಲೆ ಕಲಿತ ಆ ದಿನಗಳ ಕನ್ನಡದಲ್ಲೇ ಬ್ಯಾಂಕಾಕ್‌ನಲ್ಲಿ ಮೆಲುಕುಹಾಕಿದ ಸೂಪರ್‌ಸ್ಟಾರ್‌ ರಜನಿಕಾಂತ್ KSRTC ನೌಕರರಿಗೆ ಉಚಿತ ಚಿಕಿತ್ಸೆ ನೀಡದಿದ್ದರೆ ಅಂಥ ಆಸ್ಪತ್ರೆಗಳು ಹೊರಕ್ಕೆ: ಅಧಿಕಾರಿಗಳ ಎಚ್ಚರಿಕೆ KSRTC: ನೌಕರರಿಗೆ ಸರಿ ಸಮಾನ ವೇತನ ಕೊಡುವುದು ಸರ್ಕಾರದ ಆದ್ಯ ಕರ್ತವ್ಯ-ಬೈರೇಗೌಡ KSRTC: ಗೊಂದಲದ ನಡುವೆಯೂ 1280 ಸಿಬ್ಬಂದಿಗಳಿಗೆ ಆರೋಗ್ಯ ಸೇವೆ ಮದುವೆಗೆ ಒಪ್ಪಿ ಬಳಿಕ ತಿರಸ್ಕರಿಸಿದ ಪ್ರಿಯತಮೆ: ಕೋಪಗೊಂಡು ಇರಿದ ಪ್ರಿಯತಮ