Vijayapatha - ವಿಜಯಪಥ > NEWS > Crime > ಮದುವೆಯಾಗಿ 5ವರ್ಷವಾದರು ಮಕ್ಕಳಿಲ್ಲ ಎಂಬ ಕಿರುಕುಳಕ್ಕೆ ನೊಂದು ಮಹಿಳೆ ಆತ್ಮಹತ್ಯೆ
ಮದುವೆಯಾಗಿ 5ವರ್ಷವಾದರು ಮಕ್ಕಳಿಲ್ಲ ಎಂಬ ಕಿರುಕುಳಕ್ಕೆ ನೊಂದು ಮಹಿಳೆ ಆತ್ಮಹತ್ಯೆ
DevaApril 18, 2024
ಚಿತ್ರದುರ್ಗ: ಮದುವೆಯಾಗಿ ಹಲವು ವರ್ಷಗಳು ಕಳೆದರೂ ಮಕ್ಕಳಾಗಿಲ್ಲ ಎಂದು ಪತಿ ಮನೆಯವರ ನೀಡಿದ ಕಿರುಕುಳದಿಂದ ಮನನೊಂದು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಜಿಲ್ಲೆಯ ಹೊಸದುರ್ಗ ತಾಲೂಕಿನ ಮತ್ತೋಡು ಗ್ರಾಮದ ನಿವಾಸಿ ಆಶಾ (26) ಆತ್ಮಹತ್ಯೆಗೆ ಶರಣಾದ ಮಹಿಳೆ. ಆಶಾ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದರು.
ಪತಿ ಮನೆಯವರು ಮಕ್ಕಳಾಗಿಲ್ಲ ಎಂದು ಕಿರುಕುಳ ನೀಡುತ್ತಿದ್ದರು. ವಿವಾಹವಾಗಿ 5 ವರ್ಷವಾದರೂ ಆಶಾಗೆ ಮಕ್ಕಳಾಗಿಲ್ಲ ಎಂದು ಅತ್ತೆಯಿಂದ ಕಿರುಕುಳವಿತ್ತು. ಹೀಗಾಗಿ ಆಕೆಗೆ ಹಿಂಸೆ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
ಆಶಾ ಅತ್ತೆ ನಿನ್ನನ್ನು ತವರು ಮನೆಗೆ ವಾಪಸ್ ಕಳಿಸುತ್ತೇನೆ ಎಂದು ಹೆದರಿಸುತ್ತಿದ್ದರು. ಹೀಗಾಗಿ ಗಂಡನ ಮನೆಯವರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಘಟನೆ ಸಂಬಂಧ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.
Related
Deva
Leave a reply