Home / NEWS / ನಮ್ಮರಾಜ್ಯ / ನಾನು ಕಂಡ ಒಬ್ಬ ನಿಷ್ಠಾವಂತ ಕಂಡಕ್ಟರ್ ಬಗ್ಗೆ..: ಮಿಲೆನಿಯರ್ ಕಾವ್ಯಾ ಪುತ್ತೂರು

ನಾನು ಕಂಡ ಒಬ್ಬ ನಿಷ್ಠಾವಂತ ಕಂಡಕ್ಟರ್ ಬಗ್ಗೆ..: ಮಿಲೆನಿಯರ್ ಕಾವ್ಯಾ ಪುತ್ತೂರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್‌ಗಳು ಅಂದರೆ ಶೇ.90ರಷ್ಟು ಜನರಿಗೆ ತುಂಬಾ ಇಷ್ಟ. ಇನ್ನು ಅದರಲ್ಲಿ ಇರುವ ಕೆಲವೇ ಕೆಲವು ಬೆರಳೆಣಿಕೆಯ ನಿರ್ವಾಹಕರ ವರ್ತನೆ ನೋಡಿದರೆ ಭಾರಿ ಹಿಂಸೆ ಅನಿಸುತ್ತದೆ.

ಆದರೆ, ನಾನು ಕಂಡ ಒಬ್ಬ ನಿಷ್ಠಾವಂತ ಕಂಡಕ್ಟರ್ ಬಗ್ಗೆ ಹೇಳಲೇಬೇಕು. ಊರು ಗೊತ್ತಿಲ್ಲ, ಆದ್ರೆ ತುಳು ಭಾಷೆ ಚೆನ್ನಾಗಿ ಮಾತಾಡ್ತಾರೆ, ಕನ್ನಡ, ಹಿಂದಿ ಎಲ್ಲಾನು ಅವರಿಗೆ ಗೊತ್ತಿದೆ, ಮಂಗಳೂರು – ಮಡಿಕೇರಿ – ಮೈಸೂರು – ಬೆಂಗಳೂರು ಮಾರ್ಗದ ಬಸ್‌ನಲ್ಲಿ ಕಂಡ ಒಬ್ಬ ಅಪರೂಪದ ಕಂಡಕ್ಟರ್ ಇವರು.

ಸದಾ ನಗುಮುಖದ, ಹಸನ್ಮುಖಿ. ಪ್ರತಿಯೊಬ್ಬರನ್ನು ತಮ್ಮವರಂತೆ ಕಾಣುವ ಮನಸ್ಥಿತಿ, ಎಲ್ಲರಿಗೂ ಬಸ್‌ನಲ್ಲಿ ಸೀಟ್ ಸಿಗಬೇಕು ಅಂತ ಸೀಟ್ ಅರೇಂಜ್‌ಮೆಂಟ್‌, ಪ್ರತಿಯೊಬ್ಬರಿಗೂ ಟಿಕೆಟ್ ಆಗಿದ್ಯಾ ಅಂತ ಮುಂದಿನಿಂದ ಹಿಂದಿನ ತನಕ ಕೇಳಿಕೊಂಡು ಬರುವರು. ರೀತಿ, ಎಲ್ಲರ ಆಧಾರ್ ಕಾರ್ಡ್ ಚೆಕ್ ಮಾಡಿ ಕೆಲಸಕ್ಕೆ ಮೋಸ ಮಾಡದೇ ಟಿಕೆಟ್ ಕೊಡುವ ರೀತಿ, ಹಾಗೇನೇ ಬಸ್ ಇಳಿದು ಹೋಗುವಾಗ ಚಿಲ್ಲರೆ/ ಚೇಂಜ್ ಮರೆತು ಹೋಗ್ತಾರೆ ಅಂತ ಎಲ್ಲರ ಟಿಕೆಟ್ ಆದ್ಮೇಲೆ ಅವರೇ ಕೇಳಿಕೊಂಡು ಬಂದು ಕೊಡುವ ರೀತಿ.

ಇನ್ನು ಅಪರೂಪಕ್ಕೆ ಬಸ್‌ನಲ್ಲಿ ಬಂದವರು ವಾಕರಿಕೆ ಮಾಡುತ್ತಿದ್ದರೆ ಅವವರಿಗೆ ಸೀಟ್ ಅರೇಂಜ್ಮೆಂಟ್ ಮಾಡುವ ರೀತಿ. ಸಿಕ್ಕಾಪಟ್ಟೆ ಗಲಾಟೆ ಮಾಡೋರ್ಗೆ ಅಂದ್ರೆ ನಾರ್ತ್ ಇಂಡಿಯನ್ಸ್‌ಗೆ ಸಪರೇಟ್ ಸೀಟ್ ಮಾಡಿ ಯಾರಿಗೂ ಹರ್ಟ್ ಆಗ್ಬಾರ್ದು ಅನ್ನೋ ತರ ನಡ್ಕೊಳ್ಳುವ ರೀತಿ.

ಎಕ್ಸ್‌ಪ್ರೆಸ್‌ ಆಗಿದ್ದರೂ ಕೂಡ ಎಲ್ಲ ಕಡೆ ಬಸ್‌ ನಿಲ್ದಾಣ ಬರುವ ಮೊದಲೇ ಎಚ್ಚರಿಸುವ ರೀತಿ, ಮೊದಲು ಹತ್ತಿದವರಿಗೆ ಸ್ಟ್ಯಾಂಡಿಂಗ್ ಇದ್ದವರಿಗೆ ಸೀಟ್ ಸಿಗಬೇಕು ಅಂತ ನೆಕ್ಸ್ಟ್ ಸ್ಟಾಪ್ ಅಲ್ಲಿ ಯಾರು ಕೂಡ ಕೆಳಗಡೆ ಇರುವವರಿಗೆ ಸೀಟ್ ರಿಸರ್ವ್ ಮಾಡಬಾರದು ಅಂತ ಹೇಳಿ ಮೊದಲು ಬಂದ ಪ್ರಯಾಣಿಕರಿಗೆ ಕೊಡುವ ಆದ್ಯತೆ. ಇವೆಲ್ಲ ನೋಡಿದಾಗ ಇವರ ತಾಳ್ಮೆಗೆ ಒಂದು ಸಲ್ಯೂಟ್ ಕೊಡಲೇಬೇಕು.

ಇನ್ನು ಸಿಕ್ಕಾಪಟ್ಟೆ ರಶ್ ಇದ್ದರೂ ಕೂಡ ತಾಳ್ಮೆಯಿಂದ ಎಲ್ಲರಿಗೂ ಸಹಾಯ ಮಾಡುವ ಇವರ ಮನಸ್ಥಿತಿಗೆ ದೊಡ್ಡ ಸಲಾಂ. ಇಂತಹ ಕಂಡಕ್ಟರ್‌ಗಳು ಎಲ್ಲ ಬಸ್ ಅಲ್ಲಿ ಇರಬೇಕು. ಜರ್ನಿ ಆಯಾಗಿರುತ್ತದೆ ಎಂದು ಮಿಲೆನಿಯರ್ ಕಾವ್ಯಾ ಪುತ್ತೂರು ಎಂಬುವವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ನೋಡಿ ಈ ಕಾವ್ಯಾ ಅವರಿಗೆ ಈ ನಿರ್ವಾಹಕರು ಯಾರು ಎಲ್ಲಿಯವರು ಎಂದು ಗೊತ್ತಿಲ್ಲ. ಆದರೂ ಅವರ ಬಗ್ಗೆ ಇಷ್ಟೊಂದು ಒಳ್ಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಆ ಕಂಡಕ್ಟರ್ ಯಾರು ಎಂದರೆ ಮಂಗಳೂರು ವಿಭಾಗದ ಮೂರನೇ ಘಟಕದ ಕಂಡಕ್ಟರ್ ಜಯಂತ ಪೂಜಾರಿ ನಡುಬೖಲು ಎಂಬುವರು.

ಇನ್ನು ಈ ನಿರ್ವಾಹಕರಂತೆ ಬಹುತೇಕ ಎಲ್ಲ ನಿರ್ವಾಹಕರು ಇದ್ದಾರೆ. ಆದರೆ ಅವರು ಬೆಳಕಿಗೆ ಬಂದಿಲ್ಲ ಅಷ್ಟೆ. ಆದರೆ ಜಯಂತ ಪೂಜಾರಿ ನಡುಬೖಲು ಅವರು ಈ ಮೇಡಂ ಅವರ ಕಣ್ಣಿಗೆ ಬಿದ್ದಿದ್ದರಿಂದ ಅವರಿಗೆ ಬರವಣಿಗೆ ಇದ್ದಿದ್ದರಿಂದ ಅವರ ಬೆಳಕಿಗೆ ಬಂದಿದ್ದಾರೆ. ಇದೇ ರೀತಿ ಉಳಿಯ ನಿರ್ವಾಹಕರು ಕೂಡ ಎಲೆ,ರೆ ಕಾಯಿಯಂತೆಯೇ ನಿಮ್ಮ ನಿಷ್ಠವಂತ ಡ್ಯೂಟಿಮಾಡಿ ತಾವಾಗಿಯೇ ಒಂದುದಿನ ಹೊಳೆಯುತ್ತೀರಿ…

Tagged:

Leave a Reply

Your email address will not be published. Required fields are marked *

error: Content is protected !!