NEWSನಮ್ಮರಾಜ್ಯರಾಜಕೀಯ

ಸಾರಿಗೆ ನೌಕರರಿಗೆ ವೇತನ ಆಯೋಗ ಮಾದರಿಯಲ್ಲಿ ವೇತನ ಕೊಡಲು ಮನಸ್ಸಿದ್ದರೂ ಘೋಷಣೆ ಮಾಡದ ಸರ್ಕಾರ.. ಇದರ ಒಳಗುಟ್ಟೇನು?

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೂ ವೇತನ ಆಯೋಗ ಮಾದರಿಯಲ್ಲೇ ವೇತನ ನೀಡುತ್ತೇವೆ ಎಂದು ಭರವಸೆ ಕೊಟ್ಟ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ, ಈ ಸಂಬಂಧ ಆರ್ಥಿಕ ಇಲಾಖೆಗೂ ಆಯೋಗ ಮಾದರಿ ವೇತನ ನೀಡುವುದಕ್ಕೆ ಶಿಫಾರಸು ಕೂಡ ಮಾಡಿದೆ. ಆದರೆ ಅದನ್ನು ಘೋಷಣೆ ಮಾಡುವುದಕ್ಕೆ ಮಾತ್ರ ಮೀನಮೇಷ ಎಣಿಸುತ್ತಿದೆ.

ಹೌದು! ಕಳೆದ 2020ರ ಡಿಸೆಂಬರ್‌ನಲ್ಲಿ ಸಾರಿಗೆ ನೌಕರರು ನಮ್ಮನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಿ ಎಂದು ಮೂರು ದಿನ ಹೋರಾಟ ಮಾಡಿದರು. ಪರಿಣಾಮ ನಿಮ್ಮನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಲು ಸಾಧ್ಯವಿಲ್ಲ, ಆದರೆ ನಿಮಗೆ ಸರ್ಕಾರಿ ನೌಕರರಿಗೆ ಇರುವಂತೆ ವೇತನ ಆಯೋಗ ಮಾದರಿಯಲ್ಲಿ ವೇತನ ಕೊಡಲು ನಮ್ಮದೇನು ತಕರಾರಿಲ್ಲ ಎಂದು ಸರ್ಕಾರವೇ ವೇತನ ಆಯೋಗ ಮಾದರಿಯಲ್ಲಿ ವೇತನ ಕೊಡುವುದಾಗಿ ಲಿಖಿತ ಭರವಸೆ ನೀಡಿತ್ತು.

ಆದರೆ, ಆ ಭರವಸೆಯನ್ನು ಈಡೇರಿಸದ ಕಾರಣ ಕಳೆದ 2021ರ ಏಪ್ರಿಲ್‌ 7ರಿಂದ ಏ.21ರವರೆಗೂ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದರು. ಈ ವೇಳೆ ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಾರಿಗೆ ನೌಕರರಿಗೆ ಕೊಟ್ಟ ಭರವಸೆ ಈಡೇರಿಸುವ ಬದಲು ಮಾತು ತಪ್ಪಿದರು. ಬಳಿಕ ಅವರೆ ತಮ್ಮ ಸಿಎಂ ಸ್ಥಾನವನ್ನು ಬಿಟ್ಟು ಹೊರನಡೆದರು.

ನೌಕರರಿಗೆ ದ್ರೋಹ ಬಗೆದ ನಿಕಟಪೂರ್ವ ಸಿಎಂ ಅಂದು ನೌಕರರನ್ನು ಭಾರಿ ಕೀಳಾಗಿ ನೋಡಿದರು. ಬಳಿಕ ಬುದ್ಧನಿಗೆ ಜ್ಞಾನೋದಯವಾದಂತೆ ಸಾರಿಗೆ ನೌಕರರಿಗೆ ಕೊಟ್ಟ ಮಾತಿನಂತೆ ವೇತನ ಆಯೋಗ ಮಾದರಿಯನ್ನು ಅಳವಡಿಸಿ ಎಂದು ಇಂದಿನ ಸಿಎಂಗೆ ಮನವಿ ಮಾಡಿದ್ದು ಕೂಡ ಸುದ್ದಿಯಾಗಿತ್ತು. ಆದರೂ ಅವರ ಬಳಿಕ ಬಂದಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೂಡ ಈಗ ನೌಕರರನ್ನು ಅದೇ ರೀತಿ ಕಾಣುತ್ತಿದ್ದಾರೆ. ಸಾರಿಗೆ ನೌಕರರು ಎಂದರೆ, ವಾರಸುದಾರರಿಲ್ಲದ ಕುಟುಂಬ..ಹೀಗಾಗಿ ನಾವು ಏನು ಮಾಡಿದರೂ ಕೇಳುವವರಿಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ.

ಈಗ ಸಿಎಂ ಸ್ಥಾನದಲ್ಲಿ ಕುಳಿತಿರುವ ಅಂದಿನ ಗೃಹ ಮಂತ್ರಿಗಳಾಗಿದ್ದ ಬೊಮ್ಮಾಯಿ ಅವರು ಅಂದು ನೌಕರರ ಸಭೆ ಕರೆದು ಕೊಟ್ಟ ಭರವಸೆಯಂತೆ ಅದನ್ನು ಈಡೇರಿಸುವ ಸಂಬಂಧ ಆರ್ಥಿಕ ಇಲಾಖೆಗೆ ವೇತನ ಆಯೋಗ ಮಾದರಿಯಲ್ಲಿ ವೇತನ ಕೊಡುವ ಬಗ್ಗೆ ಕ್ರಮ ತೆಗೆದುಕೊಳ್ಳಿ ಎಂದು ದಾಖಲೆ ಸಹಿತ ಸೂಚನೆ ನೀಡಿದ್ದಾರೆ.

ಆದರೆ, ಆ ಬಗ್ಗೆ ಆದೇಶ ಮಾಡುವುದಕ್ಕೆ ಮಾತ್ರ ಇನ್ನೂ ಮೀನಮೇಷ ಎಣಿಸುತ್ತಿದ್ದಾರೆ. ಸಿಎಂ ಅವರ ಈ ನಡೆಯ ಹಿಂದೆ ಯಾವ ಕಾಣದ ಶಕ್ತಿಗಳು ಕೆಲಸ ಮಾಡುತ್ತಿವೆಯೋ ಗೊತ್ತಿಲ್ಲ. ಆದರೆ, ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಬದಲು ಮಾತು ತಪ್ಪಿದ ಭ್ರಷ್ಟ ಸರ್ಕಾರವಾಗಿ, ನೌಕರರ ಪಾಲಿಗೆ ವಿಷವಾಗಿ ಪರಿಣಮಿಸುತ್ತಿರುವುದಂತು ಕಟು ಸತ್ಯ.

ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದ ವೇಳೆಯು ಇಂದಿನ ಸಾರಿಗೆ ಸಚಿವ ಶ್ರೀರಾಮುಲು ಅವರು ಕೂಡ ವೇತನ ಆಯೋಗ ಮಾದರಿಯಲ್ಲಿ ವೇತನ ಕೊಡುವುದಕ್ಕೆ ನಾವು ಬದ್ಧವಾಗಿದ್ದೇವೆ ಈ ಸಂಬಂಧ ಈಗಲೇ ಸಿಎಂ ಜತೆ ಮಾತುಕತೆ ನಡೆಸಿ ಅದನ್ನು ಕಾರ್ಯ ರೂಪಕ್ಕೆ ತರಲು ಕ್ರಮ ಕೈಗೊಳ್ಳಲಾಗುವುದು ಎಂದು ಮಾಧ್ಯಮಗಳ ಮುಂದೆ ಉತ್ತರನಂತೆ ಮಾತುಕೊಟ್ಟರು.

ಆದರೆ, ಈವರೆಗೂ ತಾವು ಕೊಟ್ಟ ಮಾತಿಗೆ ಬದ್ಧರಾಗಿ ನಡೆದುಕೊಳ್ಳದೆ ಮಾತು ತಪ್ಪಿದ ಸರ್ಕಾರ ನಮ್ಮದು ಎಂದು ಹೆಮ್ಮೆಯಿಂದ, ನಾಚಿಕೆ ಬಿಟ್ಟು ಹೇಳಿಕೊಳ್ಳುವುದಕ್ಕೆ ಮುಂದಾಗುತ್ತಿದ್ದಾರೆ. ಈ ರೀತಿ ಒಂದು ಆಡಳಿತ ಪಕ್ಷ ಕೊಟ್ಟ ಮಾತನ್ನು ತಪ್ಪುತ್ತಿರುವುದು ಇದೇ ಮೊದಲು ಎನಿಸುತ್ತಿದೆ.

ಕಾರಣ ಚುನಾವಣಾ ಪ್ರಣಾಳಿಕೆಯಲ್ಲಿ ಕೊಡುವ ಭರವಸೆ ಬೇರೆ, ಆದರೆ ಮುಷ್ಕರದ ವೇಳೆ ಕೊಟ್ಟ ಮಾತನ್ನು ತಪ್ಪುತ್ತಿರುವುದು ಮಾತ್ರ ಈ ಬಿಜೆಪಿ ಸರ್ಕಾರವೇ ಎಂಬುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ರೀತಿ ಅಧಿಕಾರ ತಮ್ಮ ಕೈಯಲ್ಲಿ ಇದ್ದರೂ ತಮ್ಮಿಂದ ನೌಕರರ ಬೇಡಿಕೆ ಈಡೇರಿಸಲು ಸಾಧ್ಯವಿದ್ದರೂ ಅದನ್ನು ಮಾಡದೆ ಮಾತು ತಪ್ಪುತ್ತಿರುವ ಈ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರಲು ನೌಕರರು ಬಯಸುತ್ತಾರೆಯೇ ಎಂಬ ಪ್ರಶ್ನೆ ಈಗ ಮೂಡುತ್ತಿದೆ.

Leave a Reply

error: Content is protected !!
LATEST
ಭ್ರಷ್ಟಾಚಾರ, ಕಮಿಷನ್‌ ದಂಧೆ ನಿಲ್ಲಿಸಿದರೆ ಗ್ಯಾರಂಟಿ ಯೋಜನೆಗಳಿಗೂ ಕೊಟ್ಟು ಹಣ ಉಳಿಯುತ್ತದೆ : ಎಎಪಿ ಜೂ.24ರಂದು ಶಿವಮೊಗ್ಗದಲ್ಲಿ ರಾಷ್ಟ್ರ, ರಾಜ್ಯ ರೈತ ಮುಖಂಡರ ಸಮಾವೇಶ: ಕುರುಬೂರ್ ಶಾಂತಕುಮಾರ್ ಸಂತ್ರಸ್ತೆ ಅಪರಹರಣ ಪ್ರಕರಣ: ಭವಾನಿ ರೇವಣ್ಣಗೆ ನಿರೀಕ್ಷಣಾ ಜಾಮೀನು ಮಂಜೂರು KSRTCಯಿಂದ 300ಕ್ಕೂ ಹೆಚ್ಚು ಹೊಸ ಮಾರ್ಗಗಳಲ್ಲಿ ಬಸ್‌ ಓಡಾಟ: ಸಚಿವ ರಾಮಲಿಂಗಾರೆಡ್ಡಿ BMTC: 50ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್​​ಗಳ ಚಾಲಕರಿಗೆ ಗೇಟ್‌ಪಾಸ್‌ ಅತ್ಯಾಚಾರ ಆರೋಪಿ ಹಾಸನದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣನ ಎಸ್‌ಐಟಿ ಕಸ್ಟಡಿ ಅಂತ್ಯ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ವಿರೋಧಿಸಿ ನಾಳೆ ರಾಜ್ಯಾದ್ಯಂತ ಎಎಪಿ ಪ್ರತಿಭಟನೆ ನಟ ದರ್ಶನ್‌ ಸ್ಥಿತಿಗೆ ಮರುಗಿ ಅಭಿಮಾನಿ ಅನ್ನನೀರು ಬಿಟ್ಟು ಆತ್ಮಹತ್ಯೆಗೆ ಶರಣು? KSRTC ‘ಅಶ್ವಮೇಧ’ಗಳಿಂದ ಸಂಸ್ಥೆಗೆ ಶೇ.10ಕ್ಕೂ ಹೆಚ್ಚು ಲಾಭ : ಸಚಿವ ರಾಮಲಿಂಗಾರೆಡ್ಡಿ ಅತೀ ಶೀಘ್ರದಲ್ಲೇ NWKRTC ಒಡಲು ಸೇರಲಿವೆ 350 ಹೊಸ ಎಲೆಕ್ಟ್ರಿಕ್​ ಬಸ್‌ಗಳು