NEWSಶಿಕ್ಷಣ

ಪ್ರಥಮ ಪಿಯುಸಿ ವಿಜ್ಞಾನ, ವಾಣಿಜ್ಯ ತರಗತಿಗೆ ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು ಗ್ರಾಮಾಂತರ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಕಾರ್ಯ ನಿರ್ವಹಿಸುತ್ತಿರು ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ದೇವನಾಯಕನಹಳ್ಳಿ ದೇವನಹಳ್ಳಿ ತಾಲೂಕು ಹಾಗೂ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆ ಗಿಡ್ಡಪ್ಪನಹಳ್ಳಿ ಹೊಸಕೋಟೆ ತಾಲೂಕು ವಸತಿ ಶಾಲೆಗಳಲ್ಲಿ ಪ್ರಥಮ ಪಿಯುಸಿ ಪಿಸಿಎಂಬಿ (ವಿಜ್ಞಾನ ವಿಭಾಗ) ಸಿಇಬಿಎ (ವಾಣಿಜ್ಯ ವಿಭಾಗ) ತರಗತಿಗೆ ಉಚಿತ ಪ್ರವೇಶ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ವಸತಿ ಶಾಲೆಗಳಲ್ಲಿ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಶೇ.75ರಷ್ಟು ಹಾಗೂ ಇತರೆ ವರ್ಗದ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಸೀಟುಗಳು ಖಾಲಿ ಇದ್ದು, ಯಾವುದೇ ವಸತಿ ಶಾಲೆ/ಸರ್ಕಾರಿ/ಅನುದಾನಿತ/ಅನುದಾನ ರಹಿತ/ಇತರೆ ಸರ್ಕಾರದಿಂದ ಅನುಮೋದಿಸಲ್ಪಟ್ಟ ಶಾಲೆಗಳಲ್ಲಿ 10ನೇ ತರಗತಿಯಲ್ಲಿ ಅಧ್ಯಯನ ಮಾಡಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಅರ್ಹರಿರುತ್ತಾರೆ.

ದಾಖಲಾದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ವಸತಿ, ಪಠ್ಯ ಪುಸ್ತಕ, ಆಹಾರ, ಸಮವಸ್ತ್ರ, ಶುಚಿ ಸಂಭ್ರಮ ಕಿಟ್, ಲೇಖನ ಸಾಮಗ್ರಿ, ಕ್ರೀಡಾ ಸೌಲಭ್ಯ ಸೇರಿದಂತೆ ಇತರೆ ಸೌಲಭ್ಯಗಳನ್ನು ಉಚಿತವಾಗಿ ಒದಗಿಸಲಾಗುವುದು.

ಅರ್ಜಿ ಸಲ್ಲಿಸುವರು ವಸತಿ ಶಾಲೆಯ ಅಧಿಕಾರಿ/ ಸಿಬ್ಬಂದಿರವರನ್ನು ಸಂಪರ್ಕಿಸಿ ಪ್ರಥಮ ಪಿ.ಯು.ಸಿ ಪಿ.ಸಿ.ಎಂ.ಬಿ (ವಿಜ್ಞಾನ ವಿಭಾಗ) ಮತ್ತು ಪ್ರಥಮ ಪಿ.ಯು.ಸಿ ಸಿ.ಇ.ಬಿ.ಎ (ವಾಣಿಜ್ಯ ವಿಭಾಗ) ತರಗತಿಗಳಿಗೆ ದಾಖಲಾತಿ ಪ್ರವೇಶಕ್ಕೆ ಅರ್ಜಿ ಪಡೆದು. ಜಿಲ್ಲಾ ಕಚೇರಿ/ ವಸತಿ ಶಾಲೆಗೆ ಅರ್ಜಿ ಸಲ್ಲಿಸುವುದು.

ಹೆಚ್ಚಿನ ವಿವರಗಳಿಗಾಗಿ ಆಯಾ ವಸತಿ ಶಾಲೆಯ ಪ್ರಾಂಶುಪಾಲರನ್ನು ಸಂಪರ್ಕಿಸುವುದು. ಪ್ರಾಂಶುಪಾಲರು, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ದೇವನಾಯಕನಹಳ್ಳಿ, ದೂ.ಸಂ: 9900945262. 9742651522. 8073617143. 9986417499. 9742998287. ಪ್ರಾಂಶುಪಾಲರು, ಡಾ॥ ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ (ಸಿ.ಬಿ.ಎಸ್.ಸಿ) ಗಿಡ್ಡಪ್ಪನಹಳ್ಳಿ, ಹೊಸಕೋಟೆ ತಾಲ್ಲೂಕು, ದೂ.ಸಂ- 9632933397, 8660971267.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳ ಕಚೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಬೆಂಗಳೂರು (ಗ್ರಾ) ಜಿಲ್ಲೆ. ನಂ.216, 2ನೇ ಮಹಡಿ, ಬೀರಸಂದ್ರ ಗ್ರಾಮ, ಕುಂದಾಣ ಹೋಬಳಿ, ದೇವನಹಳ್ಳಿ-562110. ದೂ.ಸಂ- 080-29787455. ಸಂಪರ್ಕಿಸಬಹುದು ಹಾಗೂ ತಾಲ್ಲೂಕು ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳ ಕಛೇರಿ ದೂ.ಸಂ- 080-27682882, 27627444, 27931899, 27725445, 8317403213 ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.

Deva
the authorDeva

Leave a Reply

error: Content is protected !!
Latest news
KSRTC: ಶೇ.12-15ರ ನಡುವೆ ವೇತನ ಹೆಚ್ಚಳ ಬಹುತೇಕ ಖಚಿತ, ಅಧಿಕೃತ ಆದೇಶ ಹೊರಬೀಳುವುದೊಂದೆ ಬಾಕಿ ! ಜನರ ಆಶೀರ್ವಾದವಿರುವ ನಮ್ಮ 'ಕುರ್ಚಿ'ಗಳು ಭದ್ರವಾಗಿವೆ, ಕನ್ನಡಿಗರು ಕೇಳುತ್ತಿರುವ ಈ ಪ್ರಶ್ನೆಗಳಿಗೆ ಮೊದಲು ಉತ್ತರ ನೀಡಿ... KSRTC: ಬ್ರೇಕ್ ಫೇಲಾಗಿ ಕಾಂಪೌಂಡ್‌ಗೆ ಡಿಕ್ಕಿ ಹೊಡೆದ ಬಸ್‌- ತಪ್ಪಿದ ಭಾರಿ ಅನಾಹುತ ನಾಗಮಲೆ ಬಳಿ ಚಿರತೆ ದಾಳಿಗೆ ಮೃತಪಟ್ಟ ಬಾಲಕನ ಕುಟುಂಬಕ್ಕೆ ₹20 ಲಕ್ಷ ಪರಿಹಾರ KKRTC ದ್ವಂದ್ವ ನಿಲುವಿಗೆ ಹೈಕೋರ್ಟ್‌ ತೀವ್ರ ಅಸಮಾಧಾನ- 25 ಸಾವಿರ ರೂ. ದಂಡ, ಅಧಿಕಾರಿಗಳಿಂದಲೇ ವಸೂಲಿಗೆ ಆದೇಶ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ತಮಿಳಗ ವೆಟ್ರಿ ಕಳಗಂ ನಾಯಕ ದಳಪತಿ ವಿಜಯ್ ಅತೀ ಶೀಘ್ರದಲ್ಲೇ KSRTC ನಾಲ್ಕೂ ನಿಗಮಗಳ ಸಾರಿಗೆ ಕಾರ್ಮಿಕ ಸಂಘಟನೆಗಳ ಚುನಾವಣೆ ! ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ.ಸುಧಾಕರ್ ನಿಧನ NWKRTC: ಮೇ 11ರಂದು ಹಾಲಿ ನೌಕರರಿಗೆ, ಮೇ 15ರಂದು ನಿವೃತ್ತರಿಗೆ ಮೇ18ರಂದು ವರ್ಗಾವಣೆಗೊಂಡ ನೌಕರರಿಗೆ 11 ತಿಂಗಳುಗಳ ವೇ... ಮೇ 11ರಂದು KSRTC ನೌಕರರಿಗೆ 11 ತಿಂಗಳು- KKRTC ನೌಕರರಿಗೆ 12 ತಿಂಗಳುಗಳ ವೇತನ ಹಿಂಬಾಕಿ ಪಾವತಿಗೆ ಆದೇಶ