NEWSಕ್ರೀಡೆದೇಶ-ವಿದೇಶ

ಏಷ್ಯನ್​ ಗೇಮ್ಸ್​ 2023: 10 ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ಸ್ಪರ್ಧೆಯಲ್ಲಿ ಸ್ವರ್ಣ ಬೇಟೆಯಾಡಿದ ಪಲಕ್‌

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಹ್ಯಾಂಗ್ಝೌ: ಏಷ್ಯನ್​ ಗೇಮ್ಸ್​ 2023ರಲ್ಲಿ ಭಾರತದ ಸ್ಪರ್ಧಿಗಳ ಪದಕದ ಬೇಟೆ ಮುಂದುವರಿದಿದೆ. ಸ್ಪರ್ಧೆಯ ಆರನೇ ದಿನವಾದ ಶುಕ್ರವಾರ ಶೂಟಿಂಗ್​ನಲ್ಲಿ ಮಗದೊಂದು ಸ್ವರ್ಣ ಪದಕ ಭಾರತಕ್ಕೆ ದೊರಕಿದೆ. ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ಸ್ಪರ್ಧೆಯಲ್ಲಿ ಭಾರತದ ಶೂಟರ್​ ಪಲಕ್​ ಚಿನ್ನದ ಬೇಟಿಯಾಡುವ ಮೂಲಕ ಮತ್ತೊಂದು ಗರಿಯನ್ನು ಭಾರತದ ಮುಡಿಗೇರಿಸಿದ್ದರೆ ಇದಕ್ಕೂ ಮೊದಲು ಇಶಾ ಬೆಳ್ಳಿಯ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಫೈನಲ್​ನಲ್ಲಿ ಪಲಕ್ 242.1 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದು ಚಿನ್ನ ಗೆದ್ದರು. ಇಶಾ 239.7 ಅಂಕಗಳೊಂದಿಗೆ ಬೆಳ್ಳಿ ಪದಕದೊಂದಿಗೆ ಎರಡನೇ ಸ್ಥಾನ ತಮ್ಮದಾಗಿಸಿಕೊಂಡುರು. ಪಾಕಿಸ್ತಾನದ ತಲಾತ್ 218.2 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಇದು ಶುಕ್ರವಾರ ಭಾರತಕ್ಕೆ ಲಭಿಸಿದ ನಾಲ್ಕನೇ ಪದಕ ಇದಾಗಿದ್ದು, ಇದಕ್ಕೂ ಮೊದಲು ಮಹಿಳೆಯರ ತಂಡ ಶೂಟಿಂಗ್​ನಲ್ಲಿ ಬೆಳ್ಳಿ, ಪುರುಷರ ತಂಡ ಶೂಟಿಂಗ್​ನಲ್ಲಿ ಚಿನ್ನ ಹಾಗೂ ಟೆನಿಸ್​ ಜೋಡಿ ಬೆಳ್ಳಿಯ ಪದಕ ಗೆದ್ದುಕೊಂಡಿದೆ.

ಪುರುಷರ ತಂಡಕ್ಕೆ ಸ್ವರ್ಣ: ಶುಕ್ರವಾರ ಪುರುಷರ 50 ಮೀಟರ್ ರೈಫಲ್ 3ಪಿ ತಂಡ ಸ್ಪರ್ಧೆಯಲ್ಲಿ ಭಾರತ 1769 ಅಂಕಗಳೊಂದಿಗೆ ಚಿನ್ನ ಗೆದ್ದಿದೆ. ತಂಡದಲ್ಲಿ ಐಶ್ವರಿ ಪ್ರತಾಪ್ ಸಿಂಗ್ ತೋಮರ್, ಸ್ವಪ್ನಿಲ್ ಸುರೇಶ್ ಕುಸಲೆ ಮತ್ತು ಅಖಿಲ್ ಶಿಯೋರನ್ ಇದ್ದರು.

ವೈಯಕ್ತಿಕ ಅರ್ಹತಾ ಸುತ್ತಿನಲ್ಲಿ ಸ್ವಪ್ನಿಲ್ ಒಟ್ಟು 591-33x ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರೆ, ಐಶ್ವರ್ಯಾ 591-27x ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದರು. ಅಖಿಲ್ 587-30x ಅಂಕಗಳೊಂದಿಗೆ ಐದನೇ ಸ್ಥಾನ ಪಡೆದರು. ಮೂವರೂ ಫೈನಲ್‌ಗೆ ಪ್ರವೇಶ ಪಡೆದುಕೊಂಡರು.

ಮಹಿಳೆಯರ ತಂಡಕ್ಕೆ ಬೆಳ್ಳಿ: ಪಾಲಕ್, ಇಶಾ ಸಿಂಗ್ ಮತ್ತು ದಿವ್ಯಾ ತಡಿಗೋಲ್ ಅವರನ್ನೊಳಗೊಂಡ ಭಾರತೀಯ ಶೂಟಿಂಗ್ ತಂಡ 10 ಮೀಟರ್ ಏರ್ ಪಿಸ್ತೂಲ್ ಮಹಿಳಾ ತಂಡ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದೆ. ಈ ಮೂಲಕ ಭಾರತ ಆರನೇ ದಿನದ ಸ್ಪರ್ಧೆಯಲ್ಲಿ ಶುಭಾರಂಭ ಮಾಡಿದೆ.

10 ಮೀಟರ್ ಏರ್ ಪಿಸ್ತೂಲ್ ಮಹಿಳಾ ತಂಡ ಸ್ಪರ್ಧೆಯಲ್ಲಿ ಭಾರತ 1731-50 ಅಂಕಗಳೊಂದಿಗೆ ಬೆಳ್ಳಿ ಪದಕ ಗೆದ್ದು ಎರಡನೇ ಸ್ಥಾನ ಪಡೆಯಿತು. ಚೀನಾ 1736-66x ಅಂಕಗಳೊಂದಿಗೆ ಚಿನ್ನ ಗೆದ್ದುಕೊಂಡಿತು. ಭಾರತೀಯ ತಂಡದಲ್ಲಿ ಪಾಲಕ್, ಇಶಾ ಸಿಂಗ್ ಮತ್ತು ದಿವ್ಯಾ ಸುಬ್ಬರಾಜು ತಡಿಗೋಳ್ ಇದ್ದರು. ಅಲ್ಲದೆ, ಅರ್ಹತಾ ಸುತ್ತಿನಲ್ಲಿ ಇಶಾ ಐದನೇ ಸ್ಥಾನ ಪಡೆದರೆ, ಪಾಲಕ್ ಏಳನೇ ಸ್ಥಾನ ಪಡೆದರು. ಈ ಜೋಡಿ 10 ಮೀಟರ್ ಏರ್ ಪಿಸ್ತೂಲ್ ಮಹಿಳಾ ಫೈನಲ್ಗೆ ಅರ್ಹತೆ ಪಡೆದಿದೆ. ಇದು ಭಾರತದ ಪಾಲಿಗೆ ದಿನದ ಮೊದಲ ಪದಕ ಎನಿಸಿಕೊಂಡಿತು.

ಟೆನಿಸ್​ನಲ್ಲಿ ಬೆಳ್ಳಿ: ಟೆನಿಸ್​ನ ಡಬಲ್ಸ್​ನ ಫೈನಲ್​ನಲ್ಲಿ ಭಾರತದ ಜೋಡಿಯಾಗಿರುವ ಸಾಕೇತ್ ಮೈನೇನಿ ಹಾಗೂ ರಾಮ್​ಕುಮಾರ್ ರಾಮನಾಥನ್​ ಅವರು ಬೆಳ್ಳಿಯ ಪದಕ ಗೆದ್ದುಕೊಂಡಿದ್ದಾರೆ. ಈ ಜೋಡಿ ಚೈನಿಸ್​ ತೈಪೆಯ ಜೇಸನ್​ ಮತ್ತು ಸು ವಿರುದ್ದ 4-6, 4-6 ಅಂತರದಿಂದ ಪರಾಜಯ ಎದುರಿಸುವ ಮೂಲಕ ಬೆಳ್ಳಿಯ ಪದಕಕ್ಕೆ ತೃಪ್ತಿಪಟ್ಟರು.

Leave a Reply

error: Content is protected !!
LATEST
KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ ದೀಪಾವಳಿ ಹಬ್ಬ ಹಿನ್ನೆಲೆ KKRTC ನೌಕರರಿಗೆ ಅ.29ರಂದೇ ವೇತನ ಕೊಡಲು ಎಂಡಿ ರಾಚಪ್ಪ ನಿರ್ದೇಶನ