NEWSನಮ್ಮಜಿಲ್ಲೆಸಂಸ್ಕೃತಿ

ಇಂದು -ನಾಳೆ ಬೀಡನಹಳ್ಳಿ ಮಾರಮ್ಮನ ವೀರಹಬ್ಬದ ಸಡಗರ ಸಂಭ್ರಮ

ಸಾಂದರ್ಭಿಕ ಚಿತ್ರ.
Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೀಡನಹಳ್ಳಿ: ತಿ.ನರಸೀಪುರ ತಾಲೂಕು ಬನ್ನೂರು ಹೋಬಳಿಯ ಬೀಡನಹಳ್ಳಿ ಗ್ರಾಮ ದೇವತೆ ಬೀಡನಹಳ್ಳಿ ಮಾರಮ್ಮನ ವೀರಹಬ್ಬ ಇಂದು ಸಡಗರ ಸಂಭ್ರಮದಿಂದ ಜರುಗುತ್ತಿದೆ.

ಗ್ರಾಮದಲ್ಲಿ ಪ್ರತಿವರ್ಷದಂತೆ ಕಡೆ ಕಾರ್ತಿಕ ಸೋಮವಾರದ ನಂತರ ಜರುಗುವ ವೀರಹಬ್ಬ ಇಂದು (ಡಿ.12) ಮತ್ತ ನಾಳೆ (ಡಿ.13) ಗ್ರಾಮದ ಮುಖಂಡರು ಆಯೋಜನೆ ಮಾಡಿದ್ದು, ಅದರಂತೆ ಸಂಭ್ರಮದಿಂದ ಜರುಗುತ್ತಿದೆ.

ಬನ್ನೂರು ಹೆಗ್ಗೆರೆಯಿಂದ ಮಂಗಳವಾರ ಸಂಜೆ ಮಜ್ಜನದ ಗಂಗೆ ತಂದು ಪೂಜೆಗಳನ್ನು ಕಟ್ಟಲಾಯಿತು. ಬುಧವಾರ ಮುಂಜಾನೆ ಪೂಜೆಗಳನ್ನು ಹೂ ಹೊಂಬಾಳೆಯಿಂದ ಅಲಂಕರಿಸಿ ಬಾಯಿಬೀಗ ಇರುವವರು ಮಡಿವಂತಿಕೆಯಿಂದ ಒಪ್ಪತ್ತು ಇದ್ದು ಗ್ರಾಮ ದೇವಿಗೆ ಬಾಯಿಬೀಗ ಸೇವೆ ಮಾಡಿ ಹರಕೆ ತೀರಿಸಲಿದ್ದಾರೆ.

ಗ್ರಾಮದಲ್ಲಿ ಎರಡು ದಿನಗಳು ಜರುಗಿದ ಹಬ್ಬಕ್ಕೆ ಗ್ರಾಮಸ್ಥರು ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ನೂರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆಯಲಿದ್ದು, ಜತೆಗೆ ವೀರರ ಕುಣಿತವನ್ನು ಇಂದು ರಾತ್ರಿ ಪೂರ್ತಿ ನೋಡಲಿದ್ದಾರೆ.

Leave a Reply

error: Content is protected !!
LATEST
KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ ದೀಪಾವಳಿ ಹಬ್ಬ ಹಿನ್ನೆಲೆ KKRTC ನೌಕರರಿಗೆ ಅ.29ರಂದೇ ವೇತನ ಕೊಡಲು ಎಂಡಿ ರಾಚಪ್ಪ ನಿರ್ದೇಶನ ನಿರಂತರ ಮಳೆ- BBMP ಎಲ್ಲ ಅಧಿಕಾರಿಗಳು ಸನ್ನದ್ಧರಾಗಿ: ತುಷಾರ್ ಗಿರಿನಾಥ್