ಬೆಂಗಳೂರು: ರಾಜ್ಯ ಕೈಗೊಂಡಿರುವ ಹಲವು ಮುಂಜಾಗ್ರತಾ ಕ್ರಮಗಳ ನಡುವೆಯೂ ಕೊರೊನಾ ವೈರಸ್ ಹರಡುವುದು ಹೆಚ್ಚಾಗುತ್ತಲೇ ಇದ್ದು, ಈ ಮಹಾಮಾರಿಯನ್ನು ನಿಂಯತ್ರಿಸುವುದು ಸೇರಿದಂತೆ ಹಲವು ಆಡಳಿತಾತ್ಮಕ ವಿಷಯಗಳ ಬಗ್ಗೆ ಇಂದಿನ ರಾಜ್ಯ ಸಂಪುಟ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಗುರುವಾ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವುದರಿಂದ ಹೊಸದಾಗಿ ಸುಸಜ್ಜಿತ ಆಂಬುಲೆನ್ಸ್‌ಗಳನ್ನು ಖರಿದಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ.
ಮಾಜಿ ಸಚಿವ ಮುರುಗೇಶ್ ನಿರಾಣಿ ಅವರಿಗೆ ಬಹು ಚರ್ಚಿತ ಮಂಡ್ಯ ಜಿಲ್ಲೆಯ ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ವಹಿಸಿಕೊಡುವ ಬಗ್ಗೆಯೂ ಸಭೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಲಾಕ್‌ಡೌನ್ ಬಗ್ಗೆ ಚರ್ಚೆ ಆಗಿಲ್ಲ
ಸಂಪುಟ ಸಭೆ ಬಳಿಕ ಮಾಹಿತಿ ನೀಡಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಜಾರಿ ಮಾಡುವ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ, ಆದರೆ ಸೋಂಕು ಏರಿಕೆಯತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ ಅತ್ಯಂತ ಸುಸಜ್ಜಿತ 120 ಉನ್ನತ ಮಾದರಿಯ ಆಂಬುಲೆನ್ಸ್‌ಗಳ ಖರೀದಿಗೆ ಒಪ್ಪಿಗೆ ಸೂಚಿಸಲಾಗಿದೆ. ಜತೆಗೆ ಆಂಬುಲೆನ್ಸ್‌ಗಳ ಖರೀದಿಗೆ 32.04 ಕೋಟಿ ರೂ. ಬಿಡುಗಡೆಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು
ಇನ್ನು ಮಂಡ್ಯ ಜಿಲ್ಲೆಯ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಜಿಲ್ಲೆಯ ರೈತರು, ರೈತ ಹೋರಾಟಗಾರರ ವಿರೋಧದ ನಡೆವೆಯೂ ಗುತ್ತಿಗೆ ಆಧಾರದ ಮೇಲೆ ಮಾಜಿ ಸಚಿವ ಮುರುಗೇಶ್ ನಿರಾಣಿ ಮಾಲೀಕತ್ವದ ನಿರಾಣಿ ಶುಗರ್ಸ್ ಲಿಮಿಟೆಡ್‌ಗೆ ಬೀಡಲು ಸಂಪುಟ ಸಭೆಯಲ್ಲಿ ಒಮ್ಮತದ ತೀರ್ಮಾನಕ್ಕೆ ಬರಲಾಗಿದ್ದು, ಮುಂದಿನ 40 ವರ್ಷಗಳ ಅವಧಿಗೆ ಈ ಕಾರ್ಖಾನೆಯನ್ನು ಗುತ್ತಿಗೆ ನೀಡಲಾಗುವುದು ಎಂದು ಮಾಧುಸ್ವಾಮಿ ಸಂಪುಟದ ನಿರ್ಣಯವನ್ನು ತಿಳಿಸಿದರು
ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ವೈರಸ್ ಚಿಕಿತ್ಸೆಗೆ ಮೊನ್ನೆ ನಿಗದಿಗೊಳಿಸಿ ಸುತ್ತೋಲೆ ಹೊರಡಿಸಿದ್ದ ದರವನ್ನೇ ಅಂತಿಮಗೊಳಿಸಿ ಸಂಪುಟ ಸಭೆಯಲ್ಲಿ ನಿರ್ಣಯ ಮಾಡಲಾಗಿದೆ. ಇನ್ನು ಖಾಸಗಿ ಆಸ್ಪತ್ರೆಗಗಳು ಒಪ್ಪಿಗೆ ಕೊಡುವಂತೆ ಅವುಗಳ ಆಡಳಿತ ಮಂಡಳಿಗಳೊಂದಿಗೆ ಸಿಎಂ ಯಡಿಯೂರಪ್ಪ ಮಾತನಾಡುತ್ತಾರೆ ಎಂದು ಮಾಧುಸ್ವಾಮಿ ವಿವರಿಸಿದರು.
ಇನ್ನು ಖಾಸಗಿ ಸಂಘ ಸಂಸ್ಥೆಗಳಿಗೆ ಗುತ್ತಿಗೆ ಕೊಟ್ಟಿರುವ ಸರ್ಕಾರಿ ಭೂಮಿ, ಬೇಸಾಯ, ಕೈಗಾರಿಕೆ, ಧಾರ್ಮಿಕ , ಶೈಕ್ಷಣಿಕ ಉದ್ದೇಶಗಳಿಗೆ ಗುತ್ತಿಗೆ ಕೊಟ್ಟಿರುವ ಸರ್ಕಾರಿ ಭೂಮಿಯನ್ನು ಮಾರಲು ನಿರ್ಧಾರ ಮಾಡಲಾಗಿದೆ. ಈಗಾಗಲೇ ಗುತ್ತಿಗೆ ಪಡೆದಿರುವ ಖಾಸಗಿ ಸಂಘ ಸಂಸ್ಥೆಗಳಿಗೆ ಮಾರಲು ನಿರ್ಧಾರ ಮಾಡಿದೆ ಎಂದು ಹೇಳಿದರು.
ಸಭೆಯಲ್ಲಿ ಉಪ ಮುಖ್ಯಮಂತ್ರಿಗಳಾದ ಡಾ. ಸಿ ಎನ್ ಅಶ್ವತ್ಥ್ ನಾರಾಯಣ್ ಹಾಗೂ ಗೋವಿಂದ ಕಾರಜೋಳ, ಸಚಿವರಾದ ಆರ್ ಅಶೋಕ್, ವಿ ಸೋಮಣ್ಣ, ಬಿ ಶ್ರೀರಾಮುಲು, ಭೈರತಿ ಬಸವರಾಜ ಮತ್ತಿತರರು ಇದ್ದರು.
ಸಂಪುಟದ ಇತರ ನಿರ್ಧಾರಗಳು
ಪದ್ಮ ಶ್ರೀ ಪ್ರಶಸ್ತಿಗೆ ಹೆಸರುಗಳನ್ನು ಕೇಂದ್ರಕ್ಕೆ ಶಿಫಾರಸು ಮಾಡಲು ಸಿಎಂ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚನೆ ಮಾಡಲು ಒಪ್ಪಿಗೆ2012ರಿಂದಲೂ ಇಲ್ಲಿ ತನಕ ಬಾಕಿ ಇರುವ 9.74 ಲಕ್ಷ ಮನೆಗಳ ನಿರ್ಮಾಣಕ್ಕೆ 10,194 ಕೋಟಿ ರೂ. ಬಿಡುಗಡೆಗೆ ಸಂಪುಟ ಒಪ್ಪಿಗೆ.
ಕೊರೊನಾ ವೈರಸ್ ಸಂಕಷ್ಟದದಲ್ಲಿ ಸಚಿವರು, ಶಾಸಕರು, ಪರಿಷತ್ ಸದಸ್ಯರ ಸಂಬಳದ ಶೇಕಡಾ 30ರಷ್ಟು ವೇತಕ ಕಡಿತಗೊಳಿಸಲು ಘೊಟನೋತ್ತರ ಒಪ್ಪಿಗೆ
ಕೈಗಾರಿಕೆಗಳ ಸ್ಥಾಪನೆಗೆ ಒನ್ ವಿಂಡೋ ವ್ಯವಸ್ಥೆಯಡಿ 15 ಕೋಟಿ ರೂ. ಗಿಂತ ಕಡಿಮೆ ಹೂಡಿಕೆಯ ಕೈಗಾರಿಕೆಗಳನ್ನು ಜಿಲ್ಲಾ ಸಮಿತಿ ವ್ಯಾಪ್ತಿಗೆ, ಅದಕ್ಕಿಂತ ಹೆಚ್ಚಿನ ಹೂಡಿಕೆಯ ಕೈಗಾರಿಕೆಗಳನ್ನು ರಾಜ್ಯ ಸಮಿತಿ ವ್ಯಪ್ತಿಗೆ ತರಲು ತೀರ್ಮಾನ ಸೇರಿ ಹಲವು ಮಹತ್ವದ ನಿರ್ಣಗಳನ್ನು ಇಂದು ಸಂಪುಟ ಸಭೆಯಲ್ಲಿ ತೆಗೆದಕೊಳ್ಳಲಾಯಿತು.
Olle money maind agide bidi