NEWSನಮ್ಮಜಿಲ್ಲೆನಮ್ಮರಾಜ್ಯ

BMTC: ಅಧಿಕಾರಿಗಳ ಮೋಸದ ಬಲೆಗೆ ನಾವು ಬೀಳಬಾರದು – ವಜಾಗೊಂಡ ನೌಕರರ ಒಕ್ಕೋರಲ ಶಪಥ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಜಂಟಿ ಮೆಮೋವನ್ನು ನಾವು ಒಪ್ಪುವುದಿಲ್ಲ ಯಾವುದೇ ಷರತ್ತು ಇಲ್ಲದೆ ವಜಾಗೊಂಡಿರುವ ನಮ್ಮನ್ನು ಮರು ನೇಮಕ ಮಾಡಿಕೊಳ್ಳಬೇಕು. ಇಲ್ಲದಿದ್ದರೆ 5 ವರ್ಷವೇ ಆದರೂ ಸರಿಯೇ ನಾವು ಕಾನೂನು ಹೋರಾಟ ಮಾಡೋಣ ಎಂದು ಬಿಎಂಟಿಸಿಯಲ್ಲಿ ವಜಾಗೊಂಡಿರುವ ನೌಕರರು ತೀರ್ಮಾನಿಸಿದ್ದಾರೆ.

ಭಾನುವಾರ ನಗರದ ಸ್ಥಳವೊಂದರಲ್ಲಿ ಗೌಪ್ಯ ಸಭೆ ನಡೆಸಿರುವ ವಜಾಗೊಂಡ 200-250 ನೌಕರರು ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ.

ಕಳೆದ 2021ರ ಏಪ್ರಿಲ್‌ನಲ್ಲಿ ನೌಕರರು ನಡೆಸಿದ ಮುಷ್ಕರದ ವೇಳೆ ವಜಾಗೊಂಡಿರುವ ನೌಕರರನ್ನು ಕೆಲ ಷರತ್ತಿನೊಂದಿಗೆ ಮರು ನೇಮಕ ಮಾಡಿಕೊಳ್ಳಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ  ಜಂಟಿ ಮೆಮೋ ಸಿದ್ಧಪಡಿಸಿದೆ ಇದನ್ನು ಒಪ್ಪಿಕೊಂಡು ಹೋಗಬೇಕೋ ಬೇಡವೋ ಎಂಬ ಬಗ್ಗೆ ಸುಮಾರು 3 ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ.

ಆ ಚರ್ಚೆ  ಬಳಿಕ ಒಂದು ಅಂತಿಮಾ ನಿರ್ಧಾರಕ್ಕೆ ಬಂದಿದ್ದು, ನಾವು ಯಾವುದೇ ತಪ್ಪ ಮಾಡಿಲ್ಲ, ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರದಂತಹ ಕೃತ್ಯಗಳನ್ನು ಎಸಗಿಲ್ಲ. ಇಲ್ಲ ಸಂಸ್ಥೆಗೆ ನಷ್ಟ ಉಂಟುಮಾಡುವ ರೀತಿಯಲ್ಲಿ ನಾವು ನಡೆದುಕೊಂಡಿಲ್ಲ.  ಆದರೂ ನಮ್ಮನ್ನು ಕಾನೂನು ಬಾಹಿರವಾಗಿ ವಜಾಮಾಡಲಾಗಿದೆ.

ಹೀಗಾಗಿ ಏನೂ ತಪ್ಪೆ ಮಾಡದ ನಾವು ಸಂಸ್ಥೆಯ ಅಧಿಕಾರಿಗಳು ವಿಧಿಸುವ ಷರತ್ತುಗಳನ್ನು ಏಕೆ ಒಪ್ಪಿಕೊಂಡು ಕರ್ತವ್ಯಕ್ಕೆ ಹೋಗಬೇಕು. ಒಂದು ವೇಳೆ ಹೋದರೆ  ನಾವು ಮಾಡದ ತಪ್ಪನ್ನು ಒಪ್ಪಿಕೊಂಡಂತೆ ಆಗುತ್ತದೆ. ಅಲ್ಲದೆ ನಾವೇ ಹಗ್ಗಕೊಟ್ಟು ಕಟ್ಟಿಸಿಕೊಂಡಂತೆ ಆಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಅಧಿಕಾರಿಗಳು ಸೃಷ್ಟಿಸಿಕೊಂಡರುವ ಜಂಟಿ ಮೆಮೋ ಒಪ್ಪಿ ಹೋಗುವುದು ಬೇಡ.

ಇದರ ಬದಲಿಗೆ ಕಾನೂನು ಹೋರಾಟಟವನ್ನೇ ಮಾಡೋಣ. ಏನು ತಪ್ಪೇ ಮಾಡದ ನಾವು ಹೆದರಿಕೊಂಡು ಅಧಿಕಾರಿಗಳು ಹೇಳಿದಂತೆ ಕೇಳಿದರೆ ಮುಂದೆಯೂ ನಮ್ಮನ್ನು ಇನ್ನಷ್ಟು ಕಾಡುವುದಿಲ್ಲವೇ?  ಹೀಗಾಗಿ ನಾವು ಯಾವುದೇ ಕಾರಣಕ್ಕೂ ಅಧಿಕಾರಿಗಳು ತಮಗೆ ಹೇಗೆ ಬೇಕೋ ಹಾಗೆ ಸಿದ್ಧಪಡಿಸಿಕೊಂಡಿರುವ ಜಂಟಿ ಮೆಮೋ ಏಕೆ ಒಪ್ಪಿಕೊಳ್ಳಬೇಕು ಎಂದು ಪ್ರಶ್ನಿಸುವ ಮೂಲಕ ಕಾನೂನು ಹೋರಾಟ ಮಾಡೋಣ ಎಂದು ಒಗ್ಗಟ್ಟಿನಿಂದ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಸಾರಿಗೆ ಸಚಿವರು ಯಾವುದೇ ಷರತ್ತುಗಳಿಲ್ಲದೇ ವಜಾಗೊಂಡ ನೌಕರರನ್ನು ಮರು ನೇಮಕ ಮಾಡಿಕೊಳ್ಳುತ್ತೇವೆ ಎಂದು ವಾರದ ಹಿಂದಷ್ಟೇ ಹೇಳಿದ್ದಾರೆ. ಇವರಷ್ಟೇ ಅಲ್ಲದೆ ಬಿಎಂಟಿಸಿ ಅಧ್ಯಕ್ಷ ನಂದೀಶ್‌ ರೆಡ್ಡಿ ಅವರು ಕೂಡ ಅಧಿಕಾರಿಗಳು ಸೃಷ್ಟಿಸಿಕೊಂಡು ಬಂದ ಜಂಟಿ ಮೆಮೋವನ್ನು 2-3ಬಾರಿ ತಿರಸ್ಕರಿಸಿದ್ದರು.

ಆದರೂ ಪಟ್ಟುಬಿಡದ ಅಧಿಕಾರಿಗಳು ನಮ್ಮ ವಿರುದ್ಧ ದೌರ್ಜನ್ಯ ಎಸಗುತ್ತಲೇ ಬಂದಿದ್ದಾರೆ. ಅದರ ಒಂದು ಭಾಗವಾಗಿ ಮತ್ತೆ ಜಂಟಿ ಮೆಮೋದಲ್ಲಿ ಮೂರು ಷರತ್ತುಗಳನ್ನು ವಿಧಿಸಿದ್ದಾರೆ. ಆ ಎಲ್ಲ ಷರತ್ತುಗಳನ್ನು ಒಪ್ಪಿಕೊಂಡದರೆ ನಮ್ಮ ಭವಿಷ್ಯವನ್ನೇ  ಅಧಿಕಾರಗಳಿಗೆ ಅಡವಿಟ್ಟಂತೆ ಅಗುತ್ತದೆ. ಆದ್ದರಿಂದ ನಾವು ಈಗಾಗಲೇ ನ್ಯಾಯಾಲಯದ ಮೊರೆ ಹೋಗಿದ್ದೇವೆ ಅದನ್ನೇ ಮುಂದುವರಿಸೋಣ ಎಂದು ತೀರ್ಮಾನಿಸಿರುವುದಾಗಿ ವಿಜಯಪಥಕ್ಕೆ ತಿಳಿಸಿದ್ದಾರೆ.

ಸುಮಾರು 250 ಮಂದಿ ವಜಾಗೊಂಡ ನೌಕರರು ಗೌಪ್ಯ ಸಭೆಯಲ್ಲಿ ತೀರ್ಮಾನಿಸಿರುವಂತೆ ಕಾನೂನು ಹೋರಾಟ ಮುಂದುವರಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಅಲ್ಲದೆ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಕೆಲವೇ ಕೆಲವು ನೌಕರರು ಮಾತ್ರ ಜಂಟಿ ಮೆಮೋ ಒಪ್ಪಿಗೆ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಆದರೆ, ಜಂಟಿ ಮೆಮೊ ಒಪ್ಪಿ ಸಹಿಹಾಕಿರುವ ಸುಮಾರು 70 ಮಂದಿ ಕೂಡ ಕೆಲಸಕ್ಕೆ ಹೋಗದೆ ಕಾನೂನು ಹೋರಾಟವನ್ನೇ ಮುಂದುವರಿಸುವ ತೀರ್ಮಾನಕ್ಕೆ ಬಂದಿದ್ದಾರೆ ಎಂದು ತಿಳಿದು ಬಂದಿದೆ.

ಹೀಗಾಗಿ ಬಿಎಂಟಿಸಿ ಸಂಸ್ಥೆಯ ಅಧಿಕಾರಿಗಳು ಚಾಪೆ ಕೆಳಗೆ ನುಸುಳಿದರೆ ನೌಕರರು ರಂಗೋಲಿ ಕೆಳಗೆ ನುಸುಳುತ್ತಿದ್ದಾರೆ. ಇದು ಅಧಿಕಾರಿಗಳಿಗೆ ತಲೆ ನೋವಾಗಿ ಪರಿಣಮಿಸುತ್ತಿದೆ. ಅಲ್ಲದೆ ನ್ಯಾಯಾಲಯವು ಕೂಡ ಅಧಿಕಾರಿಗಳಿಗೆ ಕೋರ್ಟ್‌ ಮತ್ತು ನೌಕರರ ಸಮಯವನ್ನು ವೃತ ವ್ಯರ್ಥ ಮಾಡುತ್ತಿದ್ದೀರಿ ಎಂದು ದಂಡ ಕೂಡ ವಿಧಿಸುತ್ತಿದೆ. ಇದರಿಂದಲೂ ಅಧಿಕಾರಿಗಳು ತಲೆ ಬಿಸಿ ಮಾಡಿಕೊಂಡು ಓಡಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಒಟ್ಟಾರೆ ಕಾನೂನು ಬಾಹಿರವಾಗಿ ಏಕಾಏಕಿ ವಜಾ ಮಾಡಿದ ಅಧಿಕಾರಿಗಳು ಈಗ ಕಾನೂನಿನ ಕಪಿಮುಷ್ಟಿಯಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿರುವುದಂತು ಬಹುತೇಕ ಸತ್ಯವಾಗಿದೆ. ದಿನ ಬೆಳಗಾದರೆ ಒಂದಲ್ಲೊಂದು ತಲೆನೋವನ್ನು ತಂದುಕೊಳ್ಳುತ್ತಿರುವ ಅಧಿಕಾರಿಗಳು ಕುಂಟು ನೆಪಹೇಳಿಕೊಂಡು ನ್ಯಾಯಾಲಯಕ್ಕೆ ಗೈರಾಗುತ್ತಿದ್ದಾರೆ.

ಆದರೆ ಈ ರೀತಿ ಎಷ್ಟು ಬಾರಿ ಕುಂಟು ನೆಪ ಹೇಳಿಕೊಂಡು ತಪ್ಪಿಕೊಳ್ಳಲು ಸಾಧ್ಯವಿದೆ. ಹೀಗಾಗಿ ಮುಂದೊಂದು ದಿನ ತಾವೇ ತೋಡಿದ ಹಳ್ಳಕ್ಕೆ ಬೀಳುವುದು ಖಾರಿಯಾಗಲಿದೆ ಎಂಬ ತಲೆ ಬಿಸಿಯಲ್ಲಿ ಅಧಿಕಾರಿಗಳು ಬೇರೆಡೆಗೆ ವರ್ಗಾವಣೆ ಆಗುವುದಕ್ಕೂ ಕಸರತ್ತು ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

error: Content is protected !!
LATEST
KSRTCಯ 4ನಿಗಮಗಳ ಸಾರಿಗೆ ನೌಕರರಿಗೆ ಶೇ.45ರಷ್ಟು ವೇತನ ಹೆಚ್ಚಳಕ್ಕೆ ವೇದಿಕೆ ಆಗ್ರಹ NWKRTC: ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲಕನ ಕಾಲು ಮುರಿತ ಸಾರಿಗೆ ನೌಕರರು ಕರ್ತವ್ಯದ ವೇಳೆ ರೀಲ್ಸ್​ ಮಾಡಿದರೆ ಕೆಲಸದಿಂದ ವಜಾ: ಸಚಿವ ರಾಮಲಿಂಗಾ ರೆಡ್ಡಿ ಎಚ್ಚರಿಕೆ ಜು.22ರಂದು ಬೆಂವಿವಿಯ ಸಂವಹನ ವಿಭಾಗದ ಸುವರ್ಣ ಮಹೋತ್ಸವ- ರಾಷ್ಟ್ರೀಯ ಸಮ್ಮೇಳನ ಕಿರಿಯ ವಕೀಲರಿಗೆ ಗೌರವಾನ್ವಿತ ಸಂಬಳ ಕೊಡಿ: ಹಿರಿಯ ವಕೀಲರಿಗೆ ಸುಪ್ರೀಂ ಕೋರ್ಟ್‌ ಸಿಜೆ ಚಂದ್ರಚೂಡ್ ಕಿವಿ ಮಾತು ಬದಲಿ ಜಾಗದಲ್ಲಿ ಮನೆ ಕಟ್ಟಿಕೊಡ್ತೇವೆ: ಕಂದಾಯ ಸಚಿವ ಕೃಷ್ಣ ಬೈರೇಗೌಡ 24 ಗಂಟೆ ಉಚಿತ ವಿದ್ಯುತ್‌, ಪ್ರತಿಯೊಬ್ಬರಿಗೂ ಉಚಿತ ಚಿಕಿತ್ಸೆ, ಗುಣಮಟ್ಟದ ಶಿಕ್ಷಣ, ಯುವಕರಿಗೆ ಉದ್ಯೋಗ ಮಹಿಳೆಯರಿಗೆ ತಿ... ಮಳೆ ಹಾನಿ ಪ್ರದೇಶಗಳಿಗೆ ಸಚಿವ ಕೆ.ವೆಂಕಟೇಶ್ ಭೇಟಿ: ಮೃತ ಕುಟುಂಬಕ್ಕೆ ಸಾಂತ್ವನ ಪರಿಹಾರ ಧನ ವಿತರಣೆ ಗೊರೂರು ಜಲಾಶಯದಿಂದ 25ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ: ಇಂಜಿನಿಯರ್ ಆನಂದ್ ಶೈಕ್ಷಣಿಕ ಸಂಸ್ಥೆಗಳು ಶೇ. 25 ರಷ್ಟು ಸೇವಾ ಶುಲ್ಕ ಪಾವತಿಸಿ ಲಾಭ ಪಡೆಯಿರಿ: ತುಷಾರ್  ಗಿರಿನಾಥ್